ICC World Cup 2023: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತಕ್ಕೆ 20 ವರ್ಷದ ನಂತರವೂ ಆಘಾತ!
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯ ಬಹುತೇಕ ಅಂತ್ಯಕ್ಕೆ ಬಂದಿದೆ. ಭಾರತ ಸೋಲುವುದು ಕೂಡ ಭಾಗಶಃ ಖಚಿತವಾಗುತ್ತಿದ್ದು, ಅಭಿಮಾನಿಗಳ ಎದೆಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. 20 ವರ್ಷದ ನಂತರ ಕೂಡ ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆಲ್ಲುವಷ್ಟು ಗಟ್ಟಿಯಾಗಲಿಲ್ಲವೇ? ಎನ್ನುವ ಪ್ರಶ್ನೆಯು ಕೂಡ ಈಗ ಅಭಿಮಾನಿಗಳಲ್ಲಿ ಉದ್ಭವಿಸಿದೆ.
ಅದು 23 ಮಾರ್ಚ್ 2003 ಭಾರತ & ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಶುರುವಾಗಿತ್ತು. ಮೊದಲು ಬ್ಯಾಟಿಂಗ್ ಆರಂಭ ಮಾಡಿದ್ದ ಆಸ್ಟ್ರೇಲಿಯಾ ತಂಡ ನೋಡ ನೋಡುತ್ತಲೇ 359 ರನ್ ಚಚ್ಚಿತ್ತು. ಆಸಿಸ್ ಪಡೆಗೆ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ & ಮಾರ್ಟಿನ್ ಬೆನ್ನೆಲುಬಾಗಿ ನಿಂತರು. 140 ರನ್ ಕೊಡುಗೆ ನೀಡಿದ್ದ ರಿಕ್ಕಿ ಪಾಂಟಿಂಗ್ ಆಸ್ಟ್ರೇಲಿಯಾ ಟೀಂ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ದಕ್ಷಿಣ ಆಫ್ರಿಕಾ ದೇಶದ ಜೋಹಾನ್ಸ್‌ಬರ್ಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ಎರಡು ತಂಡಗಳು ಸೆಣೆಸಾಟ ನಡೆಸಿದರೂ ಭಾರತ ತಂಡ ಬರೋಬ್ಬರಿ 125 ರನ್ ಅಂತರದ ಸೋಲು ಕಂಡಿತ್ತು. ಈಗ ಕೂಡ ಅದೇ ಸೋಲು ರಿಪೀಟ್ ಆಗಿದೆ. ಆದರೆ ಇಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದ್ದರೆ, ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದೆ. ಭಾರತ ಸೋಲಿನ ಅಂಚಿಗೆ ತಲುಪುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮನೆಮಾಡಿದೆ.
ವಿರಾಟ್ ಕೊಹ್ಲಿ ಫುಲ್ ಮಿಂಚಿಂಗ್!
ಭಾರತ ತಂಡ ಇಂದು ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಟಾಸ್‌ನ ಸೋತು ಬ್ಯಾಟಿಂಗ್ ಆರಂಭಿಸಿತು. ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ & ಕೆ.ಎಲ್.ರಾಹುಲ್ ಬೆನ್ನೆಲುಬಾದರು. ಕೊಹ್ಲಿ ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲೂ 54 ರನ್‌ನ ಗಳಿಸುವ ಮೂಲಕ ಈ ಟೂರ್ನಿಯಲ್ಲಿ ಒಟ್ಟಾರೆ 765 ರನ್ ಗಳಿಸಿ ಚರಿತ್ರೆ ಬರೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ಒಂದೇ ಸೀಸನ್‌ನಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಕೊಹ್ಲಿ ಆಗಿದ್ದಾರೆ. ಇಷ್ಟಾದರೂ ಭಾರತ ತಂಡಕ್ಕೆ ಫೈನಲ್ ಪಂದ್ಯದಲ್ಲಿ ಗೆಲುವು ತಂದುಕೊಡಲು ಆಗಲೇ ಇಲ್ಲ.

ಶತಕೋಟಿ ಭಾರತೀಯರಿಗೆ ಬೇಸರದ ಸಂಗತಿ
ಇನ್ನೇನು ಪಂದ್ಯ ಭಾಗಶಃ ಮುಗಿಯುವ ಹಂತಕ್ಕೆ ಬಂದಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಈಗ ಲ್ಯಾಬುಶೇನ್ & ಟಿ.ಹೆಡ್ ಆಸರೆಯಾಗಿದ್ದಾರೆ. ಟಿ.ಹೆಡ್ ಶತಕ ರನ್ ಗಳಿಸಿ ಮಿಂಚಿದರೆ ಈ ಮ್ಯಾಚ್‌ನಲ್ಲಿ ಲ್ಯಾಬುಶೇನ್ ಕೂಡ ಮಿಂಚುತ್ತಿದ್ದಾರೆ. ಈ ಮೂಲಕ ಭಾರತ ತಂಡ ಪಂದ್ಯ ಸೋಲುವ ಹಂತ ತಲುಪಿದೆ. ಭಾರತದ ಅಭಿಮಾನಿಗಳಿಗೂ ಬೇಸರದ ಸಂಗತಿಯೊಂದು ಈ ಮೂಲಕ ಸಿಕ್ಕಿದ್ದು, ಕ್ರೀಡಾಂಗಣ ಪೂರ್ತಿ ಮೌನವೇ ಆವರಿಸುತ್ತಿದೆ.












Click it and Unblock the Notifications