Virat Kohli: ವಿರಾಟ್ ಕೊಹ್ಲಿ ಮೊಬೈಲ್ ವಾಲ್ ಪೇಪರ್ ನಲ್ಲಿರುವುದು ಯಾರ ಫೋಟೋ ಗೊತ್ತಾ?
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ತಮ್ಮ ಕ್ಲಾಸಿಕ್ ಆಟದಿಂದ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ವಿರಾಟ್, ಉತ್ತರಾಖಂಡದಲ್ಲಿನ ಒಬ್ಬ ಬಾಬಾ ಅವರ ಪರಮ ಭಕ್ತ.
ರನ್‌ಗಳು ಬಾರದೆ ಇದ್ದಾಗ, ಏಕಾಗ್ರತೆ ಹಾಳಾದಗ ವಿರಾಟ್ ಕೊಹ್ಲಿ ಈ ಬಾಬಾ ಅವರ ಮೊರೆ ಹೋಗುತ್ತಾರೆ. ಇವರು ವಿರಾಟ್ ಕೊಹ್ಲಿ ಅವರ ಹಿಂದಿನ ಶಕ್ತಿಯಂತೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ 2022ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೂ ಮೊದಲು ವಿರಾಟ್ ಕೊಹ್ಲಿ ರನ್ ಬರವನ್ನು ಅನುಭವಿಸುತ್ತಿದ್ದರು. 3 ವರ್ಷಗಳ ಬಳಿಕ ಬಿಗ್ ಇನ್ನಿಂಗ್ಸ್ ಕಟ್ಟಲು ಹರಸಾಹ ಪಟ್ಟರು.

ವಿಶ್ವಕಪ್ ಗೆದ್ದ ಬಳಿಕ ನಮನ
ಏಷ್ಯಾಕಪ್‌ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ವಿರಾಟ್ ಲಯಕ್ಕೆ ಮರಳಿದರು. ಅಲ್ಲದೆ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಎದುರಾಳಿ ಬೌಲರ್‌ಗಳನ್ನು ಕಾಡಿದರು. ನಿಜಕ್ಕೂ ವಿರಾಟ್ ಅವರ ಹಿಂದಿನ ಪ್ರೇರಣೆ ನೀಮ್ ಕರೋಲಿ ಬಾಬಾ..
ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿತು. ಬಳಿಕ ವಿರಾಟ್ ತಮ್ಮ ಫೋನ್ ತೆಗೆದುಕೊಂಡು ಬಂದು ಸ್ಕ್ರೀನ್ ಮೇಲೆ ಇದ್ದ ಬಾಬಾಗೆ ನಮಸ್ಕಾರ ಮಾಡಿದರು. ಈ ದೃಶ್ಯ ಸಖತ್ ವೈರಲ್ ಆಗಿತ್ತು.
ವಿರಾಟ್ ಫೋನ್ ವಾಲ್‌ಪೇಪರ್‌ನಲ್ಲಿ ಯಾರಿದ್ದಾರೆ?
ಇತ್ತೀಚೆಗೆ ವಿರಾಟ್ ಕೊಹ್ಲಿ ಭಾರತ ತಂಡದೊಂದಿಗೆ 'ಟಿ 20 ವಿಶ್ವಕಪ್' ವಿಜಯವನ್ನು ಆಚರಿಸಿದ ನಂತರ ಮುಂಬೈನಿಂದ ಲಂಡನ್‌ಗೆ ತೆರಳಿದರು. ಈ ವೇಳೆ ಕ್ರಿಕೆಟಿಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರ ವಾಲ್‌ಪೇಪರ್ ಅನ್ನು ಗಮನಿಸಿದರು, ಅದರಲ್ಲಿ ಅನುಷ್ಕಾ ಅಥವಾ ಅವರ ಮಕ್ಕಳಾದ ವಾಮಿಕಾ ಕೊಹ್ಲಿ ಮತ್ತು ಅಕೆಯ ಕೊಹ್ಲಿ ಇರಲಿಲ್ಲ. ಹೌದು, ವಿರಾಟ್ ಕೊಹ್ಲಿ ಅವರ ವಾಲ್‌ಪೇಪರ್‌ನಲ್ಲೂ ನೀಮ್ ಕರೋಲಿ ಬಾಬಾ ವಾಲ್‌ಪೇಪರ್ ಇಟ್ಟುಕೊಂಡಿದ್ದಾರೆ.
ನೀಮ್ ಕರೋಲಿ ಬಾಬಾ ಅವರು ಹನುಮಾನ್ ಜಿ ಮತ್ತು ಮಹಾರಾಜ್-ಜಿ ಅವರ ಭಕ್ತ. ವಿರಾಟ್ ಮತ್ತು ಅನುಷ್ಕಾ ಇಬ್ಬರೂ ನೀಮ್ ಕರೋಲಿ ಬಾಬಾನ ಭಕ್ತರು. ಇವರಿಬ್ಬರೂ ಬಾಬಾನ ಆಶ್ರಮದಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಬಾಜಿಯ ವಾಲ್‌ಪೇಪರ್‌ನಲ್ಲಿ ನೀಮ್ ಕರೋಲಿ ಬಾಬಾ ಚಿತ್ರ ಎಲ್ಲರ ಮನ ಗೆದ್ದಿದೆ. ಈಗ ವಿರಾಟ್ ಅವರ ಈ ಚಿತ್ರ ವೈರಲ್ ಆದ ನಂತರ, ಜನರು ಅದರ ಬಗ್ಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Virat Kohli having wallpaper of Neem Karoli Baba on his phone. 🙌❤️ pic.twitter.com/M96ag5xH3L
— Mufaddal Vohra (@mufaddal_vohra) July 5, 2024
ವಿರಾಟ್‌ಗೆ ಇದೆ ದೇವರ ಮೇಲೆ ಭಕ್ತಿ
ವಿರಾಟ್ ಕೊಹ್ಲಿ ತಾವು ಯಾವುದೇ ಒತ್ತಡದ ಸನ್ನಿವೇಶದಲ್ಲಿದ್ದರೂ ಸಹ ಈ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಇದರಿಂದ ಅವರ ಮನಸ್ಸು ಪ್ರಶಾಂತವಾಗುತ್ತದೆ ಎಂಬ ನಂಬಿಕೆ ಅವರದ್ದು. ಅವರ ನಂಬಿಕೆ ಸಾಕಾರವಾಗಿದೆ. ವಿರಾಟ್ ಕೊಹ್ಲಿ ದೇವರನ್ನು ನಂಬುವ ಆಟಗಾರ ಕಳೆದ ವರ್ಷ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆಯೂ ದೇವರು ಇವರ ಕೈ ಹಿಡಿದಿದ್ದಾರೆ.
ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಉಜ್ಜಯಿನಿ ಮಹಾಕಾಲೇಶ್ವರನ ದರ್ಶನ ಪಡೆದಿದ್ದರು. ಬಳಿಕ ವಿರಾಟ್ ಭರ್ಜರಿ ಲಯಕ್ಕೆ ಮರಳಿದರು.












Click it and Unblock the Notifications