ಶ್ರೇಯಾಂಕಾ ಪಾಟೀಲ್ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ?
ಶ್ರೇಯಾಂಕಾ ಪಾಟೀಲ್ ಅವರಿಗೆ ಎಲ್ಲೆಲ್ಲೂ ಅಭಿಮಾನಿಗಳು ತುಂಬಿ ತುಳುಕುತ್ತಿದ್ದಾರೆ. ಯಾಕಂದ್ರೆ ಕಳೆದ 16 ವರ್ಷಗಳಿಂದ ಕಪ್ ಬೇಕು ಅಂತಾ ಕಾದು ಕೂತಿದ್ದ ಕನ್ನಡ ನಾಡಿನ ಜನರಿಗಾಗಿ ಇದೇ ನಮ್ಮ ಕನ್ನಡತಿ ಶ್ರೇಯಾಂಕಾ ಕಪ್ ಗೆದ್ದು ತಂದಿದ್ದಾರೆ. ಹೀಗಿದ್ದಾಗಲೇ ಶ್ರೇಯಾಂಕಾ ಪಾಟೀಲ್ ಹೊಸ ನ್ಯಾಷನಲ್ ಕ್ರಷ್ ಆಗಿದ್ದಾರೆ. ಇದೇ ವೇಳೆ ಶ್ರೇಯಾಂಕಾ ಪಾಟೀಲ್ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ? ಅನ್ನೋ ಪ್ರಶ್ನೆ ಕೋಟ್ಯಂತರ ಜನರಿಗೆ ಕಾಡುತ್ತಿದ್ದು, ಆ ಮಾತಿಗೆ ಉತ್ತರ ಸಿಕ್ಕಿದೆ!
ಹೌದು, ಶ್ರೇಯಾಂಕಾ ಪಾಟೀಲ್ ಅವರು ಕರ್ನಾಟಕದಲ್ಲಿ ಅಥವಾ ಬೆಂಗಳೂರಿನಲ್ಲಿ ಮಾತ್ರವಲ್ಲ ಇದೀಗ ಜಗತ್ತಿನಾದ್ಯಂತ ದೊಡ್ಡ ಸ್ಟಾರ್ ಕ್ರಿಕೆಟರ್ ಆಗಿದ್ದಾರೆ. ಅದರಲ್ಲೂ ಯುವಕರು 'ಟಗರು ಪುಟ್ಟಿ' ಅಂತಾ ಶ್ರೇಯಾಂಕಾ ಪಾಟೀಲ್ ಅವರಿಗೆ ಬಿರುದು ಕೊಟ್ಟಿದ್ದಾರೆ. ಹಾಗಾದರೆ ಕನ್ನಡತಿ, 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ? ಈ ಬಗ್ಗೆ ಅವರೇ ಉತ್ತರ ನೀಡಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕನ್ನಡತಿ ಶ್ರೇಯಾಂಕಾಗೆ ಬಾಯ್‌ಫ್ರೆಂಡ್?
ಆರ್‌ಸಿಬಿ ಬೆಂಗಳೂರು ಮಹಿಳಾ ಟೀಂ ಆಟಕ್ಕೆ ಕೋಟ್ಯಂತರ ಫ್ಯಾನ್ಸ್ ಫಿದಾ ಆಗಿದ್ದು 2024 ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸಲು ಕನ್ನಡತಿ ಶ್ರೇಯಾಂಕ ಪಾಟೀಲ್ ಶ್ರಮ ತುಂಬಾ ದೊಡ್ಡದು. ಹೀಗಾಗಿ ಶ್ರೇಯಾಂಕಾರ ಬಗ್ಗೆ ಸಿಕ್ಕಾಪಟ್ಟೆ ಸರ್ಚ್ ಮಾಡುತ್ತಿದ್ದಾರೆ ಜನಗಳು. ಅಷ್ಟಕ್ಕೂ ಶ್ರೇಯಾಂಕಾ ಪಾಟೀಲ್ ಅವರು ಮೂಲತಃ ಕಲಬುರಗಿ ಜಿಲ್ಲೆಯವ್ರು, ಅವರ ತಂದೆ ಕಲಬುರಗಿ ಮೂಲದ ರಾಜೇಶ್ ಪಾಟೀಲ್ ಬೆಂಗಳೂರಲ್ಲಿ ನೆಲೆಸಿದ್ದಾರೆ. ಇಂತಿಪ್ಪ ಶ್ರೇಯಾಂಕಾ ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದಾರೆ. ಅವರ ಸಂಪೂರ್ಣ ವಿದ್ಯಾಭ್ಯಾಸ ಬೆಂಗಳೂರಲ್ಲೇ ಆಗಿದೆ. ಹಾಗಾದ್ರೆ 'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್ ಅವರಿಗೆ ಬಾಯ್‌ಫ್ರೆಂಡ್ ಇದ್ದಾರಾ? ಬನ್ನಿ ತಿಳಿಯೋಣ.
ಸ್ಟಾರ್ ಕ್ರಿಕೆಟರ್‌ಗೆ ಬಾಯ್‌ಫ್ರೆಂಡ್...
ಕೆಲವು ತಿಂಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ಶ್ರೇಯಾಂಕಾ ಪಾಟೀಲ್ ಅವರು ತಮ್ಮ ಜೀವನದ ಏಳು & ಬೀಳುಗಳನ್ನ ವಿವರಿಸಿದ್ದರು. ಇದೇ ವೇಳೆ, ಶ್ರೇಯಾಂಕಾ ಪಾಟೀಲ್‌ರ ಕೋಚ್ ಬಳಿ ಸಂದರ್ಶಕರು ಪ್ರಶ್ನೆ ಒಂದನ್ನ ಕೇಳಿದ್ದರು. ಶ್ರೇಯಾಂಕಾ ಪಾಟೀಲ್ ಅವರಿಗೆ ಈಗ ಬಾಯ್ ಫ್ರೆಂಡ್ ಇದ್ದಾರಾ? ಅಂತಾ ಪ್ರಶ್ನೆ ಮಾಡಿದ್ದರು. ಈ ಪಶ್ನೆಗೆ ಕೋಚ್ ಕೂಡ ಉತ್ತರವನ್ನ ನೀಡಿದ್ದರು. ಅಲ್ಲದೆ ಅವರನ್ನ ಕೇಳಿ, ಇದ್ದರೆ ನನಗೆ ತಿಳಿಸಿ ಎಂದಿದ್ದರು. ಅವರ ಮಾತಿನ ಅರ್ಥ ಶ್ರೇಯಾಂಕಾ ಪಾಟೀಲ್ ಅವರಿಗೆ ಬಾಯ್ ಫ್ರೆಂಡ್ ಇಲ್ಲ ಎಂದು. ಈ ಮೂಲಕ ನ್ಯಾಷನಲ್ ಕ್ರಷ್ ಅಭಿಮಾನಿಗಳು ಈಗ ಖುಷ್ ಆಗಿದ್ದಾರೆ.

ಉತ್ತರ ಕರ್ನಾಟಕದ ಊಟ ಇಷ್ಟವಂತೆ!
ಆಹಾರ ಸಂಸ್ಕೃತಿ ವಿಚಾರದಲ್ಲಿ ಉತ್ತರ ಕರ್ನಾಟಕ ಸಾಕಷ್ಟು ಶ್ರೀಮಂತಿಕೆ ಹೊಂದಿದೆ. ಈ ಕಾರಣಕ್ಕೆ ದೇಶಾದ್ಯಂತ ಉತ್ತರ ಕರ್ನಾಟಕದ ಆಹಾರ ಶೈಲಿಗೆ ದೊಡ್ಡ ಹೆಸರು ಕೂಡ ಇದೆ. ಅದ್ರಲ್ಲೂ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶ ದೊರೆಯುವ ಊಟಕ್ಕೆ, ನಮ್ಮ ರಾಜ್ಯದ ಉತ್ತರ ಕರ್ನಾಟಕ ಫೇಮಸ್. ಜೋಳದ ರೊಟ್ಟಿ, ಬಗೆಬಗೆಯ ಕಾಳುಗಳು, ಶೇಂಗಾ ಚಟ್ನಿ, ಮೊಸರು ಹೀಗೆ ಎಲ್ಲವನ್ನೂ ಇಷ್ಟಪಟ್ಟು ಜನ ತಿಂತಾರೆ. ಅದ್ರಲ್ಲೂ ಕ್ರಿಕೆಟ್ ಸ್ಟಾರ್ ಶ್ರೇಯಾಂಕಾ ಅವರಿಗೂ ತಮ್ಮ ಊರಿನ ಊಟ & ಜೋಳದ ರೊಟ್ಟಿ ಅಂದ್ರೆ ಪ್ರಾಣವಂತೆ.
ಶ್ರೇಯಾಂಕಾ ಪಾಟೀಲ್ ಇನ್ನೂ ಚಿಕ್ಕ ಹುಡುಗಿ & ಅವರ ವಯಸ್ಸು ಈಗಿನ್ನು 21 ವರ್ಷ. ಹೀಗಿದ್ರೂ ಅವರು ಮಾಡಿದ ಸಾಧನೆ ಇಡೀ ದೇಶಕ್ಕೆ ಇಷ್ಟವಾಗಿದೆ. ಆರ್‌ಸಿಬಿ ಮಾತ್ರ ಅಲ್ಲ, ಇಂಡಿಯನ್ ಕ್ರಿಕೆಟ್ ಟೀಂಗೆ ಆಡಿದ್ದಾರೆ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್. ಹೀಗೆ ಚಿಕ್ಕ ವಯಸ್ಸಿಗೆ ಅವರು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳ ಗಳಿಸಿದ್ದಾರೆ ಶ್ರೇಯಾಂಕಾ ಪಾಟೀಲ್.
16 ವರ್ಷ ಕಪ್ ಗೆದ್ದೇ ಇಲ್ಲ!
ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಹಬ್ಬದ ರೀತಿ ಜನ ಸೆಲೆಬ್ರೇಷನ್ ಮಾಡ್ತಾರೆ ಅದ್ರಲ್ಲೂ ಬೆಂಗಳೂರು ನಿವಾಸಿಗಳಿಗೆ & ಕನ್ನಡಿಗರಿಗೆ ಆರ್‌ಸಿಬಿ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇಷ್ಟೆಲ್ಲಾ ನಡೆದ್ರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೇ ಈ ಬಾರಿ ಅಂದ್ರೆ 17ನೇ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ, ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಮತ್ತೆ 'ಈ ಸಲ ಕಪ್ ನಮ್ದೆ' ವೈರಲ್ ಆಗುತ್ತಿದೆ. ಆದರೆ ಆರ್‌ಸಿಬಿ ತಂಡ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳನ್ನು ಬೇಸರಪಡಿಸಿದೆ. ಅಲ್ಲದೆ, ಆರ್‌ಸಿಬಿ ತಂಡದಲ್ಲಿ ಸ್ಪಿನ್ನರ್ಸ್ ಇಲ್ಲ ಅನ್ನೋದು ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಪುರುಷರ ತಂಡಕ್ಕೆ ಸ್ಪಿನ್ನರ್ ಆಗಿ ಬರಲಿ ಅಂತಿದ್ದಾರೆ ಫ್ಯಾನ್ಸ್.
ಬಾಯಲ್ಲಿ ಕ್ಯಾಚ್ ಹಿಡಿತಾರಂತೆ!
ಶ್ರೇಯಾಂಕಾ ಪಾಟೀಲ್ ಸ್ಟಾರ್ ಕ್ರಿಕೆಟರ್ ಆಗಿ ಬೆಳೆದು ನಿಂತಿರುವುದಕ್ಕೆ ಅವರ ತಂದೆಗೂ ಹೆಮ್ಮೆ ಇದೆ. ಹೀಗೆ ತಮ್ಮ ಮಗಳ ಜೊತೆಗೆ ಸಂದರ್ಶನ ಒಂದರಲ್ಲಿ ಚರ್ಚೆ ಮಾಡುವಾಗ, ಮನೆಯಲ್ಲಿ ಅಪ್ಪ & ಮಗಳ ನಡುವೆ ಯಾವ ಕಾರಣಕ್ಕೆ ಜಗಳ ಆಗುತ್ತದೆ? ಎಂಬುದನ್ನ ವಿವರಿಸಿದ್ದಾರೆ. ಆಗ ಶ್ರೇಯಾಂಕಾ ಅವರು ತಮ್ಮ ತಂದೆ ಬಗ್ಗೆ ಕಂಪ್ಲೆಂಟ್ ಅನ್ನು ಹೇಳುತ್ತಾ ಕುತೂಹಲಕಾರಿ ವಿಚಾರ ಒಂದನ್ನ ವಿವರಿಸಿದ್ದಾರೆ.
ಹೌದು, ಶ್ರೇಯಾಂಕಾ ಪಾಟೀಲ್ ಅವರ ಅಪ್ಪ ರಾಜೇಶ್ ಪಾಟೀಲ್ ಪದೇ ಪದೇ ಮಗಳನ್ನ ರೇಗಿಸುತ್ತಾರಂತೆ. ಮಗಳು ಕ್ರಿಕೆಟ್ ಮ್ಯಾಚ್ ಮುಗಿಸಿ ಮನೆಗೆ ಬಂದಾಗ ಶ್ರೇಯಾಂಕಾ ಆಟದ ಬಗ್ಗೆ ಕಾಲು ಎಳೆಯುವ ಅವರು, ನಾನು ಬಾಯಲ್ಲೇ ಕ್ಯಾಚ್ ಹಿಡಿಯುತ್ತಿದ್ದೆ ಬಿಡು ಅಂತಾ ಚಾಲೆಂಜ್ ಹಾಕುತ್ತಾರಂತೆ. ಅಲ್ಲದೆ ಪ್ಯಾಡ್ ಇಲ್ಲದೆ ಒಂದೇ ಕೈಯಲ್ಲಿ ನಿನ್ನ ಬೌಲಿಂಗ್‌ಗೆ, ನಾನು ಬ್ಯಾಟಿಂಗ್ ಮಾಡ್ತೀನಿ ಅಂತಾನೂ ಶ್ರೇಯಾಂಕಾ ಪಾಟೀಲ್ ಅವರಿಗೆ, ಅವರ ಅಪ್ಪ ಚಾಲೆಂಜ್ ಹಾಕುತ್ತಾರಾಂತೆ. ಹೀಗೆ ಅಪ್ಪ & ಮಗಳ ಜಗಳದ ವಿಡಿಯೋ ವೈರಲ್ ಆಗ್ತಿದೆ.












Click it and Unblock the Notifications