ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಔಟ್? ರೋಹಿತ್ ಶರ್ಮಾ ಇನ್?
ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಇದೀಗ ತನ್ನ ಹೀನಾಯ ಸೋಲಿನ ಸರಪಳಿ ಮುಂದುವರಿಸಿದೆ. ಗುಜರಾತ್ ಎದುರು ಮೊದಲಿಗೆ 6 ರನ್‌ಗಳ ಸೋಲು ಕಂಡ ಮುಂಬೈ ತಂಡ ನಂತರ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೂಡ 31 ರನ್‌ಗಳ ಹೀನಾಯ ಸೋಲು ಕಂಡಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ಎದುರಲ್ಲೂ ಭೀಕರ ಸೋಲು ಕಂಡಿದೆ ಹಾರ್ದಿಕ್ ಪಾಂಡ್ಯ ಪಡೆ. ಈ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿ ಬಿಡ್ತಾರಾ?
ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯದಲ್ಲೇ ಸೋತು ಸುಣ್ಣವಾಗಿತ್ತು ಇದು ಒಂದ್ಕಡೆ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಗೂ ತಲೆನೋವು ತಂದಿದ್ದರೆ, ಇನ್ನೊಂದು ಕಡೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಮಾತನ್ನು ಕೇಳುವವರೇ ಇಲ್ಲವಾಗಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಇದೀಗ ಒಡೆದ ಮನೆಯಾಗಿ ಹೋಗಿತ್ತು. ಆ ನಂತರ 2ನೇ ಪಂದ್ಯದಲ್ಲಿ ಮುಂಬೈ ತಂಡವು ಕಂಬ್ಯಾಕ್ ಮಾಡಲಿದೆ ಎಂಬ ವಿಶ್ವಾಸ ಇತ್ತು, ಆದರೆ ಅಲ್ಲೂ ಹೀನಾಯ ಸೋಲು ಕಂಡಿದ್ದರು ಮುಂಬೈ ಇಂಡಿಯನ್ಸ್ ತಂಡದ ಆಟಗಾರರು. ಈಗ, 3ನೇ ಪಂದ್ಯದಲ್ಲಿ ಕೂಡ ಅತಿ ಹೀನಾಯ ಸೋಲು ಕಂಡಿರುವ ಮುಂಬೈ ತಂಡಕ್ಕೆ ಹಾರ್ದಿಕ್ ಪಾಂಡ್ಯ ಗುಡ್ ಬೈ ಹೇಳಿ ಕ್ಯಾಪ್ಟನ್ ಸ್ಥಾನ ಬಿಟ್ಟುಕೊಡುತ್ತಾರಾ? ಬನ್ನಿ ತಿಳಿಯೋಣ.

ಹಾರ್ದಿಕ್ ಪಾಂಡ್ಯ ಗುಡ್ ಬೈ?
ಮುಂಬೈ ಇಂಡಿಯನ್ಸ್ ಬರೋಬ್ಬರಿ 5 ಬಾರಿ ಐಪಿಎಲ್ ಕಪ್ ಗೆದ್ದು ಬೀಗಿದೆ. 2013, 2015, 2017, 2019, 2020 ರಲ್ಲಿ ಕಪ್ ಗೆದ್ದು ಮುಂಬೈ ಇಂಡಿಯನ್ಸ್ ಇತಿಹಾಸ ನಿರ್ಮಾಣ ಮಾಡಿದೆ. ಹೀಗಿದ್ದಾಗ ದಿಢೀರ್ ಅಂತಾ ರೋಹಿತ್ ಶರ್ಮಾ ಅವರನ್ನ ನಾಯಕ ಸ್ಥಾನದಿಂದ ಕಿತ್ತಾಕಿ, ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಲಾಗಿದೆ. ಹೀಗೆ ಮುಂಬೈ ಇಂಡಿಯನ್ಸ್ ತಂಡ ಈಗ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ ಹಾಗೇ ತಂಡದ ಒಳಗೆ ತಿಕ್ಕಾಟ ಕೂಡ ಜೋರಾಗಿದೆ. ಈ ಮಧ್ಯೆ ಹೊಸ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮಾತನ್ನು ಆಟಗಾರರೇ ಕೇಳುತ್ತಿಲ್ಲವಂತೆ. ಈ ಎಲ್ಲಾ ಕಾರಣದಿಂದ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬಿಟ್ಟು ಹೋಗುತ್ತಾರಾ? ಎಂಬ ಚರ್ಚೆ ಶುರುವಾಗಿದೆ.
ಮುಂಬೈ ಮಾಲೀಕರ ಕ್ರಮ ಏನು?
ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡದ ಒಳಗೆ ಭರ್ಜರಿ ತಿಕ್ಕಾಟ ನಡೆದಿತ್ತು. ಹೀಗಾಗಿ ಈ ವಿಚಾರವನ್ನು, ಮುಂಬೈ ಇಂಡಿಯನ್ಸ್ ಟೀಂ ಆಡಳಿತ ಮಂಡಳಿ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬೇಡ ನಮಗೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬೇಕು ಅಂತಾ ಫ್ಯಾನ್ಸ್ ಕೂಡ ಒತ್ತಾಯ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಸತತವಾಗಿ 3 ಪಂದ್ಯ ಸೋತು ಹೋಗಿದೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ. ಹೀಗಾಗಿ ಇದೀಗ ರೋಹಿತ್ ಶರ್ಮಾ ಮತ್ತೆ ಮುಂಬೈ ತಂಡಕ್ಕೆ ಕ್ಯಾಪ್ಟನ್ ಆಗುತ್ತಾರಾ? ಎಂಬ ಪ್ರಶ್ನೆ ಜೋರಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದರೆ ಅನಗತ್ಯ ವಿಚಾರಕ್ಕೆ ಇದೀಗ ಮುಂಬೈ ತಂಡವು ಭಾರಿ ಚರ್ಚೆಗೆ ಗುರಿಯಾಗಿದ್ದು ಮಾತ್ರ ದುರದೃಷ್ಟಕರ ಎನ್ನಬಹುದು. ಅದ್ರಲ್ಲೂ ಮುಂಬೈ ಆಟಗಾರರ ಪಡೆ ಈ ಸೋಲಿನಿಂದ ಎಚ್ಚೆತ್ತು ಕಂಬ್ಯಾಕ್ ಮಾಡುತ್ತಾ? ಅಥವಾ ತನ್ನ ಸೋಲಿನ ಸರಪಳಿಯ ಮುಂದುವರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
ತಕ್ಷಣ ಗೆಲುವಿನ ಟಾನಿಕ್ ಬೇಕಿದೆ!
ಮುಂಬೈ ತಂಡ ಸಹಜವಾಗಿ ಸತತ ಸೋಲುಗಳಿಂದ ಕಂಗೆಟ್ಟು ಹೋಗಿದೆ, ಹೀಗಾಗಿ ಇದೀಗ ಒಂದು ಭರ್ಜರಿ ಗೆಲುವಿಗೆ ಕಾಯುತ್ತಿದೆ. ಆದರೆ ತಂಡದ ಒಳಗೆ ಕಿರಿಕ್ ಶುರುವಾದ ನಂತರ ನೆಮ್ಮದಿಯೇ ಇಲ್ಲವಾಗಿದೆ. ಇದೇ ಕಾರಣಕ್ಕೆ ಮುಂಬೈ ತಂಡದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ? ಹಾರ್ದಿಕ್ ಪಾಂಡ್ಯ ತಮ್ಮ ಕ್ಯಾಪ್ಟನ್ಸಿ ಪಟ್ಟ ಬಿಟ್ಟು ಕೆಳಗೆ ಇಳಿಯುತ್ತಾರಾ? ಮತ್ತೊಮ್ಮೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲಿದ್ದಾರಾ? ಎಂಬ ಚರ್ಚೆಗಳು ಜೋರಾಗಿವೆ. ಹೀಗಾಗಿ ಈ ಎಲ್ಲಾ ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಕೂಡ ಸಿಗಲಿದೆ. ಹಾಗೇ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಕೂಡ ಕ್ಯಾಪ್ಟನ್ಸಿ ವಿಚಾರವಾಗಿ ಭಾರಿ ಚರ್ಚೆ ನಡೆಸುತ್ತಿದ್ದಾರೆ.












Click it and Unblock the Notifications