CSK vs RR IPL 2024: ಚೆನ್ನೈನಲ್ಲಿ ಎಂಎಸ್ ಧೋನಿ ಕೊನೆಯ ಪಂದ್ಯ?
ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್. ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿರುವ ಎಂಎಸ್ ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ತಮ್ಮ 42ನೇ ವಯಸ್ಸಿನಲ್ಲೂ ಯುವಕರು ನಾಚುವಂತೆ ಆಡುವ ಧೋನಿ ಆಟಕ್ಕೆ ಅಭಿಮಾನಿಗಳು ಫಿಧಾ ಆಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಇನ್ನು ಐಪಿಎಲ್ ನಿವೃತ್ತಿಯ ಬಗ್ಗೆ ಘೋಷಿಸಿಲ್ಲ. ಆದರೆ ಅವರು ಮುಂದಿನ ಬಾರಿಯ ಐಪಿಎಲ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಧೋನಿ ನಿವೃತ್ತಿಯ ನಿರ್ಧಾರವನ್ನು ಪಂದ್ಯದ ವೇಳೆ ಹೇಳಿದ ಉದಾಹರಣೆ ಇಲ್ಲ. ಅವರ ಸೈಲೆಂಟ್ ಆಗಿ ಸಾಮಾಜಿಕ ತಾಣದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಧೋನಿ ಇಂತಹದ್ದೇ ಏನಾದ್ರೂ ಕಾರ್ಯ ಮಾಡಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಸಿಎಸ್‌ಕೆಗೆ ಪ್ಲೇ ಆಫ್ ಅವಕಾಶ
ಐಪಿಎಲ್ ಮಹತ್ವದ ಘಟ್ಟದತ್ತ ಮುಖ ಮಾಡಿದೆ. ಎಲ್ಲ ತಂಡಗಳ ಪ್ಲೇ ಆಫ್ ಲೆಕ್ಕಾಚಾರಗಳು ಆರಂಭವಾಗಿವೆ. ಸಿಎಸ್‌ಕೆ ತಂಡ ಸಹ ಈ ರೇಸ್‌ನಲ್ಲಿದೆ. ಸಿಎಸ್‌ಕೆ ಭಾನುವಾರ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ. ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದು ರೋಚಕತೆ ಹೆಚ್ಚಿಸಿದೆ. ಈ ಪಂದ್ಯ ಪ್ರಸಕ್ತ ಸಾಲಿನಲ್ಲಿ ಚೆನ್ನೈನಲ್ಲಿ ನಡೆಯುತ್ತಿರುವ ಕೊನೆಯ ಲೀಗ್ ಪಂದ್ಯವಾಗಿದೆ.
ಚೆನ್ನೈನಲ್ಲಿ ಕೊನೆಯ ಪಂದ್ಯ?
ಕೋನೆಯ ಲೀಗ್ ಪಂದ್ಯದಲ್ಲಿ ಧೋನಿಯನ್ನು ಕಣ್ಣು ತುಂಬಿಕೊಳ್ಳಲು ಅವರ ಅಪಾರ ಅಭಿಮಾನಿಗಳ ಬಳಗ ಪ್ಲ್ಯಾನ್ ಮಾಡಿಕೊಂಡಿದೆ. ತಲೈವಾ ಎಂದೇ ಖ್ಯಾತಿ ಪಡೆದಿರುವ ಧೊನಿ, ಹಳದಿ ಜೆರ್ಸಿಯಲ್ಲಿ ನೋಡಲು ಕಾತರುರಾಗಿದ್ದಾರೆ. ಸಿಎಸ್‌ಕೆಗೆ ಪ್ಲೇ ಆಫ್ ಪ್ರವೇಶಿಸುವ ಚಾನ್ಸ್ ಇದೆ. ಅದು ಎಲ್ಲ ಅವರ ಗೆಲುವಿನ ಮೇಲೆ ನಿರ್ಧಾರವಾಗಲಿದೆ.
ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸಂಪೂರ್ಣ 20 ಓವರ್‌ಗಳಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಈ ಋತುವಿನಲ್ಲಿ ಅವರು ನಾಯಕತ್ವವನ್ನು ತೊರೆದು ರುತುರಾಜ್ ಗಾಯಕ್ವಾಡ್‌ಗೆ ನೀಡಿದರು. ಅವರು ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಮುಂದೆ ಬಂದು ತಂತ್ರವನ್ನು ರೂಪಿಸುವುದನ್ನು ಕಾಣಬಹುದು. ಅವರು ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡುವ ಕ್ಷಮತೆಯನ್ನು ಹೊಂದಿಲ್ಲವಾದರೂ, ಅವರ ಫಾರ್ಮ್ ಮತ್ತು ಸ್ಟ್ರೈಕ್ ರೇಟ್ ತುಂಬಾ ಉತ್ತಮವಾಗಿದೆ.

ಐಪಿಎಲ್‌ನ ಶ್ರೇಷ್ಠ ನಾಯಕ
ಧೋನಿ ಅವರ ಫಾರ್ಮ್ ಮತ್ತು ಸ್ಟ್ರೈಕ್ ರೇಟ್ ಉತ್ತಮವಾಗಿದ್ದರೂ, ಮೈದಾನದಲ್ಲಿ ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಸಾಧ್ಯವಾಗುವ ಫಿಟ್‌ನೆಸ್ ಇನ್ನೂ ಹೊಂದಿಲ್ಲ ಎಂಬುದು ಧೋನಿಗೂ ತಿಳಿದಿದೆ. ಆದ್ದರಿಂದ, ಅವರು ಕೊನೆಯ 4 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತಾರೆ. ಕಳೆದ ವರ್ಷ CSK ತಂಡಕ್ಕೆ ದಾಖಲೆಯ ಐದನೇ ಬಾರಿ ಟ್ರೋಫಿ ತೊಡಿಸಿರುವ ಧೋನಿ ಅಭಿಮಾನಿಗಳ ಪ್ರೀತಿಗೆ ಮನಸೋತು, ಈ ವರ್ಷದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ ಎಂದು ಅನಿಸುತ್ತದೆ.
ಐಪಿಎಲ್ 2024ರಲ್ಲಿ ಧೋನಿ ಸಾಧನೆ
ಈ ಋತುವಿನಲ್ಲಿ ಇದುವರೆಗೆ ಧೋನಿ 10 ಇನ್ನಿಂಗ್ಸ್‌ಗಳಲ್ಲಿ 136 ರನ್ ಗಳಿಸಿದ್ದಾರೆ ಮತ್ತು ಇಲ್ಲಿಯವರೆಗೆ ಅವರು 11 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನಲ್ಲಿ ಆಡಿದ 10 ಇನ್ನಿಂಗ್ಸ್‌ಗಳಲ್ಲಿ ಅವರು 8 ಬಾರಿ ಅಜೇಯರಾಗಿ ಉಳಿದಿದ್ದಾರೆ.












Click it and Unblock the Notifications