ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇಂಜಿಂಗ್ ದಿ ಬೌಂಡರಿ ವರದಿಯಲ್ಲಿ ಸ್ಕಾಟ್ಲೆಂಡ್ ಕ್ರಿಕೆಟ್‌ನ ಕರಾಳ ಮುಖ ಅನಾವರಣ

|
Google Oneindia Kannada News

ಕ್ರಿಕೆಟ್ ಸ್ಕಾಟ್ಲೆಂಡ್ ಅದರ ಆಡಳಿತ ಮಂಡಳಿ ಸಾಂಸ್ಥಿಕವಾಗಿ ವರ್ಣಭೇದ ನೀತಿಯನ್ನು ಅನುಸರಿಸಿದೆ ಎಂದು ಪ್ಲಾನ್4ಸ್ಪೋರ್ಟ್ ವರದಿ ನೀಡಿದೆ. ವರ್ಣಭೇದ ನೀತಿಯನ್ನು ಅನುಸರಿಸಿರುವ ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಸ್ಪೋರ್ಟ್ಸ್‌ಕಾಟ್‌ಲ್ಯಾಂಡ್‌ನಿಂದ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ.

ಪ್ಲಾನ್4ಸ್ಪೋರ್ಟ್ (Plan4Sport) ತನಿಖೆಯನ್ನು ಪೂರ್ಣಗೊಳಿಸಿದ್ದು ವರದಿ ಸಲ್ಲಿಸಿದೆ. ಸಾಂಸ್ಥಿಕ ವರ್ಣಭೇದ ನೀತಿಯ 31 ಸೂಚಕಗಳಲ್ಲಿ 29 ರಲ್ಲಿ ಕ್ರಿಕೆಟ್ ಸ್ಕಾಟ್ಲೆಂಡ್ ವಿಫಲವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಾಂಸ್ಥಿಕ ವರ್ಣಭೇದ ನೀತಿಯ 448 ಉದಾಹರಣೆಗಳನ್ನು ವಿಮರ್ಶೆಯಲ್ಲಿ ಪಟ್ಟಿ ಮಾಡಲಾಗಿದೆ, ಇದನ್ನು ನವೆಂಬರ್ 2021 ರಿಂದ ಮಜಿದ್ ಹಕ್, ಖಾಸಿಮ್ ಶೇಖ್ ಮತ್ತು ಇತರರು 30 ಆಟಗಾರರು ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದ ನಂತರ ನಿಯೋಜಿಸಲಾಗಿತ್ತು.

Breaking : ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್Breaking : ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ವಿರುದ್ಧ ಚಾರ್ಜ್‌ಶೀಟ್

ಭಾನುವಾರ, ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು "ಚೇಂಜಿಂಗ್ ದಿ ಬೌಂಡರಿ" ವರದಿಯನ್ನು ಪ್ರಕಟಿಸುವ ಮೊದಲು ರಾಜೀನಾಮೆ ನೀಡಿದ್ದರು. ಅಲ್ಲಿನ ಸಂಶೋಧನೆಗಳನ್ನು ಸ್ಕಾಟಿಷ್ ಕ್ರೀಡೆಗೆ ಎಚ್ಚರಿಕೆಯ ಕರೆ ಎಂದು ವಿವರಿಸಲಾಗಿದೆ.

 ಧ್ವನಿ ಎತ್ತಿದವರ ವಿರುದ್ಧ ಜನಾಂಗೀಯ ನಿಂದನೆ

ಧ್ವನಿ ಎತ್ತಿದವರ ವಿರುದ್ಧ ಜನಾಂಗೀಯ ನಿಂದನೆ

ವರ್ಣಭೇದ ನೀತಿಯ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳಿಗೆ ಸ್ಕಾಟಿಷ್ ಕ್ರಿಕೆಟ್ ಜನಾಂಗೀಯ ನಿಂದನೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ವರದಿಯು ಹೇಳಿದೆ. ಅದರ ಜೊತೆಗೆ, ವಿಮರ್ಶೆಯಲ್ಲಿ ವರ್ಣಭೇದ ನೀತಿಯ ಘಟನೆಗಳೊಂದಿಗೆ ವ್ಯವಹರಿಸುವ ಸ್ಥಳದಲ್ಲಿ ಅಸಮಂಜಸವಾದ ಕಾರ್ಯವಿಧಾನಗಳನ್ನು ಕಂಡುಕೊಂಡಿದೆ, ಆಯ್ಕೆಯ ವಿಚಾರದಲ್ಲೂ ವರ್ಣಭೇದ ನೀತಿಯನ್ನು ಅನುಸರಿಸಲಾಗಿದೆ. ಆಯ್ಕೆಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂದು ವರದಿಯಲ್ಲಿ ತಿಳಿಸಿದೆ.

ಅಮ್ರಪಾಲಿ ಕೇಸ್: ಮಾಜಿ ನಾಯಕ ಎಂಎಸ್ ಧೋನಿಗೆ ಸುಪ್ರೀಂ ನೋಟಿಸ್ಅಮ್ರಪಾಲಿ ಕೇಸ್: ಮಾಜಿ ನಾಯಕ ಎಂಎಸ್ ಧೋನಿಗೆ ಸುಪ್ರೀಂ ನೋಟಿಸ್

 ಸಮಸ್ಯೆ ಬಗೆಹರಿಸಲು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ವಿಫಲ

ಸಮಸ್ಯೆ ಬಗೆಹರಿಸಲು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ವಿಫಲ

"ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ನಾಯಕತ್ವವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಾಗಿದೆ. ಅದು ವಿಫಲವಾದಾಗ, ಜನಾಂಗೀಯವಾಗಿ ನಿಂದಿಸುವ ಸಂಸ್ಕೃತಿಗೆ ಉತ್ತೇಜನ ನೀಡಿದಂತಾಗುತ್ತದೆ" ಎಂದು ಪ್ಲಾನ್‌4ಸ್ಪೋರ್ಟ್‌ (Plan4Sport) ನ ನಿರ್ದೇಶಕ ಲೂಯಿಸ್ ಟೈಡ್ಸ್ವೆಲ್ ಹೇಳಿದ್ದಾರೆ.

"ಆದರೆ ನಾನು ಸಂಘಟನೆಯ ಆಡಳಿತ ಮತ್ತು ನಾಯಕತ್ವದ ಅಭ್ಯಾಸಗಳು ಸಾಂಸ್ಥಿಕವಾಗಿ ವರ್ಣಭೇದ ನೀತಿಯನ್ನು ಅನುಸರಿಸಿದರು, ಸ್ಕಾಟ್ಲೆಂಡ್‌ನ ಕ್ರಿಕೆಟ್‌ಗೆ ಅದೇ ರೀತಿ ಹೇಳಲಾಗುವುದಿಲ್ಲ. ವೈವಿಧ್ಯಮಯ ಸಮುದಾಯಗಳೊಂದಿಗೆ ನಿಜವಾಗಿಯೂ ತೊಡಗಿಸಿಕೊಳ್ಳುವ ಸ್ಥಳೀಯ ಕಾರ್ಯಕ್ರಮಗಳನ್ನು ನೀಡುವ ಅನೇಕ ಅತ್ಯುತ್ತಮ ಕ್ಲಬ್‌ ಮತ್ತು ವ್ಯಕ್ತಿಗಳು ಇದ್ದಾರೆ. " ಎಂದು ಅವರು ಹೇಳಿದ್ದಾರೆ.

 ಸೆಪ್ಟಂಬರ್ ವೇಳೆಗೆ ನೂತನ ಕ್ರಿಕೆಟ್ ಮಂಡಳಿ ಸ್ಥಾಪನೆ

ಸೆಪ್ಟಂಬರ್ ವೇಳೆಗೆ ನೂತನ ಕ್ರಿಕೆಟ್ ಮಂಡಳಿ ಸ್ಥಾಪನೆ

ಸ್ಪೋರ್ಟ್ಸ್‌ಕಾಟ್‌ಲ್ಯಾಂಡ್ ಅಕ್ಟೋಬರ್ 2023 ರವರೆಗೆ ಪರಿಣಾಮಕಾರಿಯಾಗಿ ಕ್ರಿಕೆಟ್ ಸ್ಕಾಟ್‌ಲ್ಯಾಂಡ್ ಅನ್ನು ನಡೆಸುತ್ತದೆ ಆದರೆ ಸೆಪ್ಟೆಂಬರ್ 2022 ರೊಳಗೆ ಹೊಸ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಬೇಕು ಮತ್ತು ಹೊಸ ಕ್ರಿಕೆಟ್ ಮಂಡಳಿಯಲ್ಲಿ ಕನಿಷ್ಠ ಶೇಕಡ 25 ರಷ್ಟು ಅಲ್ಪಸಂಖ್ಯಾತ ಸಮುದಾಯದ ಪುರುಷರು ಮತ್ತು ಶೇಕಡ 40 ರಷ್ಟು ಮಹಿಳೆಯರನ್ನು ಒಳಗೊಂಡಿರಬೇಕು ಎಂದು ಸೂಚಿಸಿದೆ.

"ನಾವೆಲ್ಲರೂ ಪ್ರೀತಿಸುವ ಕ್ರೀಡೆಯಲ್ಲಿ ನಡೆದಿರುವ ವರ್ಣಭೇದ ನೀತಿ ಮತ್ತು ತಾರತಮ್ಯ ಮುಂದಿನ ದಿನಗಳಲ್ಲಿ ಎಂದಿಗೂ ಸಂಭವಿಸಲು ಅವಕಾಶ ನೀಡಬಾರದು" ಎಂದು ಕ್ರಿಕೆಟ್ ಸ್ಕಾಟ್ಲೆಂಡ್‌ನ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾರ್ಡನ್ ಆರ್ಥರ್ ಹೇಳಿದ್ದಾರೆ.

 ತಾರತಮ್ಯಕ್ಕೆ ಬಲಿಯಾದವರ ಬಳಿ ಕ್ಷಮೆಯಾಚನೆ

ತಾರತಮ್ಯಕ್ಕೆ ಬಲಿಯಾದವರ ಬಳಿ ಕ್ಷಮೆಯಾಚನೆ

"ಸ್ಕಾಟಿಷ್ ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿ ಮತ್ತು ತಾರತಮ್ಯಕ್ಕೆ ಬಲಿಯಾದ ಎಲ್ಲರಿಗೂ ನಾನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ಇದು ವ್ಯಕ್ತಿಗಳು ಮತ್ತು ಅವರ ಕುಟುಂಬದ ಮೇಲೆ ಬೀರುವ ಪರಿಣಾಮದ ಬಗ್ಗೆ ನಮಗೆ ಅರಿವಿದೆ. ಈ ವರದಿಯು ಅವರಿಗೆ ಸ್ವಲ್ಪ ಭರವಸೆ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ಕೂಗಿಗೆ ಬೆಲೆ ಸಿಕ್ಕಿದೆ, ಆದರೆ ಅದು ತಡವಾಗಿದ್ದಕ್ಕೆ ವಿಷಾದಿಸುತ್ತೇವೆ" ಎಂದು ಗಾರ್ಡನ್ ಆರ್ಥರ್ ಹೇಳಿದ್ದಾರೆ.

"ಈ ವರದಿಯು ಸ್ಕಾಟ್ಲೆಂಡ್‌ನಲ್ಲಿ ಕ್ರಿಕೆಟ್‌ಗೆ ಪರ್ವಕಾಲವಾಗಿದೆ ಮತ್ತು ಅದರ ಶಿಫಾರಸುಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಮುಖ್ಯ. ಗಮನಾರ್ಹವಾದ ಸಾಂಸ್ಕೃತಿಕ ಬದಲಾವಣೆಯು ಸಂಭವಿಸಬೇಕು ಮತ್ತು ಅದು ಬೇಗ ಸಂಭವಿಸಬೇಕು ಎಂಬುದು ಸ್ಪಷ್ಟವಾಗಿದೆ. ಉಲ್ಲೇಖಿತ ಪ್ರಕ್ರಿಯೆಯನ್ನು ಒಪ್ಪಿಕೊಂಡು ತಕ್ಷಣ ಜಾರಿಗೆ ತರಲು ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

"ಕ್ರಿಕೆಟ್ ಆಟದಲ್ಲಿ ವರ್ಣಭೇದ ನೀತಿ ಮತ್ತು ಯಾವುದೇ ರೀತಿಯ ತಾರತಮ್ಯ ಸಹಿಸುವುದಿಲ್ಲ. ಎಲ್ಲರಿಗೂ ಸ್ವಾಗತ ಮತ್ತು ಸಮಾನ ಅವಕಾಶಗಳಿಗೆ ಪ್ರವೇಶವಿರುವ ಕ್ರಿಕೆಟ್ ಕ್ರೀಡೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಯ ಸಂಸ್ಕೃತಿ ನಿರ್ಮಿಸಲು ಮತ್ತು ಬೆಳೆಸಲು ನಾವು ದೃಢಸಂಕಲ್ಪ ಹೊಂದಿದ್ದೇವೆ. ಹಿಂದಿನ ಸಮಸ್ಯೆಯನ್ನು ಪರಿಹರಿಸಬೇಕು, ಕ್ರೀಡೆಯನ್ನು ಸರಿಪಡಿಸಬೇಕು ಮತ್ತೆ ಈ ರೀತಿಯ ತಪ್ಪುಗಳು ನಡೆಯಬಾರದು. ಈ ಬದಲಾವಣೆ ತರಲು ನಮಗೆ ಎಲ್ಲರ ಸಹಕಾರ ಬೇಕು ಎಂದು ಕೇಳಿದ್ದಾರೆ.

Recommended Video

Rishi sunak ವಿಶ್ವದಲ್ಲಿಯೇ ನಮಗೆ ಚೀನಾ ಅಪಾಯಕಾರಿ ರಾಷ್ಟ್ರ ಅಂದಿದ್ದು ಯಾಕೆ ? | *World | OneIndia Kannada

English summary
Scotland cricket board allowed racially aggravated micro-aggression to flourish for individuals who did raise their voice against racism, The Report Said. the entire board of Cricket Scotland had resigned ahead of the publication of the report Changing the Boundaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X