ಕ್ರಿಕೆಟ್ ವರ್ಲ್ಡ್ ಕಪ್ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ!
ಐಸಿಸಿ ಏಕದಿನ 'ವಿಶ್ವಕಪ್ ಹಬ್ಬ' ಅಕ್ಟೋಬರ್ 5ರಿಂದ ಶುರುವಾಗಲಿದೆ. ಅದಕ್ಕೂ ಮೊದಲು ಭಾರತ ತಂಡ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಆದರೆ ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಹಾಗಾದ್ರೆ ಕೊಹ್ಲಿ ಫ್ಯಾನ್ಸ್‌ಗೆ ಈಗ ಸಿಕ್ಕಿರುವ ಸರ್ಪ್ರೈಸ್ ಏನು? ವಿಶ್ವಕಪ್‌ಗೂ ಮೊದಲು ಸಿಗುತ್ತಿರುವ ಸಿಹಿಸುದ್ದಿ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರಷ್ಟು ಮುದ್ದಾದ ಸೆಲೆಬ್ರಿಟಿ ಜೋಡಿ ಸದ್ಯಕ್ಕೆ ಮತ್ತೊಂದಿಲ್ಲ ಬಿಡಿ. ಸದಾ ಒಬ್ಬರ ಬಗ್ಗೆ ಮತ್ತೊಬ್ಬರು ಹಾಸ್ಯ ಮಾಡ್ತಾ, ಒಬ್ಬರ ಬಗ್ಗೆ ಮತ್ತೊಬ್ಬರು ಕೇರ್ ತೆಗೆದುಕೊಳ್ಳುತ್ತಾ ಅಭಿಮಾನಿಗಳಿಗೂ ಮಾದರಿ ಆಗ್ತಾರೆ. ಇಂತಿಪ್ಪ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಗೆ ಈಗಾಗಲೇ ಒಬ್ಬ ಮುದ್ದಾದ ಮಗಳು ಇದ್ದಾಳೆ. ಆದರೆ ಇದೀಗ ಕ್ರಿಕೆಟ್ ವರ್ಲ್ಡ್ ಕಪ್ ಸಮಯದಲ್ಲೇ ಕೊಹ್ಲಿ ಇನ್ನೊಂದು ಸರ್ಪ್ರೈಸ್ ಕೊಡಲು ಸಜ್ಜಾಗಿದ್ದಾರಾ? ಎಂಬ ಡೌಟ್ ಕಾಡುತ್ತಿದೆ.

2ನೇ ಮಗುವಿನ ನಿರೀಕ್ಷೆಯಲ್ಲಿ ಕೊಹ್ಲಿ ದಂಪತಿ?
ಅಂದಹಾಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ & ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಅನುಷ್ಕಾ ಶರ್ಮಾ ಅವರು ಸದ್ಯ ಪ್ರಗ್ನೆಂಟ್, ಹೀಗಾಗಿಯೇ ಅವರು ಕೆಲ ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂಬ ಸುದ್ದಿ ಸದ್ದು ಮಾಡ್ತಿದೆ. ಅಲ್ಲದೆ ಕೊಹ್ಲಿ ಅವರ ಜೊತೆಗೆ ಎಲ್ಲಿಗೂ ಪ್ರಯಾಣ ಮಾಡುತ್ತಿಲ್ಲ, ಹಾಗೇ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೂ ಇತ್ತೀಚೆಗೆ ಕ್ರಿಕೆಟ್ ಮೈದಾನಕ್ಕೆ ಅವರು ಬಂದಿಲ್ಲ ಎನ್ನಲಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಕೊಹ್ಲಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಈ ಬಗ್ಗೆ 'ಹಿಂದೂಸ್ತಾನ್ ಟೈಮ್ಸ್' ವರದಿ ಪ್ರಕಟಿಸಿದ್ದು, ಅನುಷ್ಕಾ ಶರ್ಮಾ ಅವರಿಗೆ ಈಗ 3 ತಿಂಗಳು ಮುಗಿದು 4ನೇ ತಿಂಗಳ ಅವಧಿಯಲ್ಲಿದ್ದಾರೆ ಎನ್ನಲಾಗಿದೆ. ಇದರ ಜತೆ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಮುಂಬೈ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಫೋಟೋ ಎಲ್ಲಿಯೂ ಪ್ರಕಟಿಸದಂತೆ ವಿನಂತಿಸಿದ್ದಾರಂತೆ. ಶೀಘ್ರದಲ್ಲೇ ಈ ವಿಚಾರದ ಕುರಿತು ಕೊಹ್ಲಿ ದಂಪತಿ ತಮ್ಮ ಅಭಿಮಾನಿಗಳಿಗೆ ತಿಳಿಸುವ ನಿರೀಕ್ಷೆ ಕೂಡ ಇದೆಯಂತೆ. ಒಟ್ನಲ್ಲಿ ಈ ಮೂಲಕ ಕೊಹ್ಲಿ ಅಭಿಮಾನಿಗಳಿಗೆ ಡಬಲ್ ಸರ್ಪ್ರೈಸ್ ಸಿಗುತ್ತಿದೆ. ಹಾಗೇ ಈ ಬಾರಿಯ ವಿಶ್ವಕಪ್ ಭಾರತ ಗೆದ್ದರೆ ಸಂಭ್ರಮ ಇನ್ನಷ್ಟು ಹೆಚ್ಚಾಗಲಿದೆ.

ಪ್ರೀತಿಸಿ ಮದುವೆಯಾಗಿದ್ದ ಕೊಹ್ಲಿ
ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಪ್ರೀತಿಯಲ್ಲಿ ಬಿದ್ದಿದ್ದರು, ಆದರೆ ಇವರ ಮದುವೆ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಹೀಗೆ ಇದ್ದಾಗ ಡಿಸೆಂಬರ್ 11, 2017ರ ಸುಸಂದರ್ಭದಲ್ಲಿ ಇಬ್ಬರೂ ಸಪ್ತಪದಿ ತುಳಿದರು. ಹಾಗೇ 2021 ರ ಜನವರಿಯಲ್ಲಿ ಕೊಹ್ಲಿ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿತ್ತು. ಇನ್ನು ಮೊದಲ ಮಗು ಜನಿಸುವಾಗಲೂ ಈ ರೀತಿ ಗುಟ್ಟು ಕಾಪಾಡಿಕೊಂಡಿದ್ರು ಕೊಹ್ಲಿ ದಂಪತಿ. ಈಗಲೂ ಹಾಗೇ ಮಾಡ್ತಿದ್ದಾರಾ? ಶೀಘ್ರದಲ್ಲೇ ಸರ್ಪ್ರೈಸ್ ಕೊಡ್ತಾರಾ? ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.
ಒಟ್ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಈ ವಿಶ್ವಕಪ್ ಅತ್ಯಂತ ಮಹತ್ವದ್ದು. ಏಕೆಂದರೆ ಇದು ತವರು ನೆಲದಲ್ಲೇ ನಡೆಯುತ್ತಿರುವ ವಿಶ್ವಕಪ್. ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿಗೂ ಕೊಹ್ಲಿ ಸಿದ್ಧವಾಗಿದ್ದಾರೆ ಎಂಬ ಮಾತು ಸಂಭ್ರಮ ಹೆಚ್ಚಿಸಿದೆ. 1983 & 2011ರಲ್ಲಿ ವಿಶ್ವಕಪ್ ಗೆದ್ದು ಬೀಗಿರುವ ಭಾರತ ತಂಡ ಈ ಬಾರಿ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಕೊಹ್ಲಿ ಅವರು ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡಲು ಸಜ್ಜಾಗಿದ್ದಾರೆ. ಮತ್ತೊಂದು ಕಡೆ ವಿರಾಟ್ ಕೊಹ್ಲಿ ಅವರ ಕುಟುಂಬದಿಂದಲೂ ಕ್ರಿಕೆಟ್ ಫ್ಯಾನ್ಸ್‌ಗೆ ಸಿಹಿಸುದ್ದಿ ಕಾದಿದೆ ಅಂತಾ ಹೇಳಲಾಗ್ತಿದೆ.












Click it and Unblock the Notifications