Bengaluru Bulls: ಬೆಂಗಳೂರು ಗೂಳಿಗಳ ಅಬ್ಬರಕ್ಕೆ ತತ್ತರಿಸಿದ ತೆಲುಗು ಟೈಟಾನ್ಸ್

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೋ ಕಬಡ್ಡಿ ಲೀಗ್ ಸೀಸನ್ 10ರ 78 ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಆರಂಭದಲ್ಲಿ ತೆಲುಗು ಟೈಟಾನ್ಸ್ ಮುನ್ನಡೆ ಪಡೆದುಕೊಂಡರು. ನಂತರ ಗೂಳಿಗಳ ಅಬ್ಬರ ಜೋರಾಗಿತ್ತು. ಮೊದಲಾರ್ಧದ ವೇಳೆಗೆ ತೆಲುಗು ಟೈಟಾನ್ಸ್ 12-9 ಅಂಕಗಳಿಂದ ಮುನ್ನಡೆ ಪಡೆದುಕೊಂಡಿದ್ದರು. ಆದರೆ ದ್ವಿತೀಯಾರ್ಧ ಸಂಪೂರ್ಣವಾಗಿ ಅಬ್ಬರಿಸಿದ್ದು ಬೆಂಗಳೂರು ಗೂಳಿ ಪಡೆ.

Bengaluru Bulls Dominate Telugu Titans, Secure 42-26 Victory with a 16-Point Lead In PKL

ಮೊದಲಾರ್ಧ ಬೆಂಗಳೂರು ಬುಲ್ಸ್ ವಿರುದ್ಧ ಹೋರಾಟ ಕೊಟ್ಟ ತೆಲುಗು ಟೈಟಾನ್ಸ್ ತಂಡ ದ್ವಿತೀಯಾರ್ಧ ಸಂಪೂರ್ಣವಾಗಿ ಮಂಕಾಯಿತು. ಮೊದಲಾರ್ಧ 12 ಅಂಕ ಗಳಿಸ್ದ ಟೈಟಾನ್ಸ್ ದ್ವಿತೀಯಾರ್ಧದಲ್ಲಿ 14 ಅಂಕಗಳನ್ನು ಮಾತ್ರ ಕಲೆಹಾಕಿತು. ಆದರೆ ಮೊದಲಾರ್ಧ 9 ಅಂಕ ಮಾತ್ರ ಗಳಿಸಿದ್ದ ಬೆಂಗಳೂರು ಬುಲ್ಸ್ ದ್ವಿತೀಯಾರ್ಧದಲ್ಲಿ 33 ಅಂಕ ಕಲೆ ಹಾಕಿತು.

ಸುರ್ಜೀತ್, ಅಕ್ಷಿತ್ ಮಿಂಚು

ಬೆಂಗಳೂರು ಬುಲ್ಸ್‌ ಪರವಾಗಿ ರೈಡರ್ ಗಳಾದ ಅಕ್ಷಿತ್ ಧುಲ್, ವಿಕಾಶ್ ಖಂಡೋಲಾ ಮಿಂಚಿದರು. ಇವರಿಬ್ಬರೂ ತಲಾ 9 ಮತ್ತು 7 ಪಾಯಿಂಟ್ ಗಳಿಸಿದರು. ಸುರ್ಜೀತ್ ಸಿಂಗ್ ಬಲವಾದ ರಕ್ಷಣಾ ಕೋಟೆ ಕಟ್ಟಿ ತೆಲುಗು ಟೈಟಾನ್ಸ್‌ ತಂಡವನ್ನು ಕಟ್ಟಿಹಾಕಿದರು ಅವರು 7 ಟ್ಯಾಕಲ್ ಪಾಯಿಂಟ್ ಗಳಿಸಿದರು.

ಉಳಿದಂತೆ ಪ್ರತೀಕ್ 4 ಟ್ಯಾಕಲ್ ಅಂಕ ಗಳಿಸಿದರೆ ಸೌರಭ್ ನಂದಾಲ್ ಮತ್ತು ರಣ್ ಸಿಂಗ್ ತಲಾ ಎರಡು ಟ್ಯಾಕಲ್ ಪಾಯಿಂಟ್ ಗಳಿಸಿ ಮಿಂಚಿದರು. ಭರತ್ ಕೇವಲ ಒಂದು ರೈಡಿಂಗ್ ಪಾಯಿಂಟ್ ತಂದುಕೊಟ್ಟರು. ಅಂತಿಮವಾಗಿ ಬೆಂಗಳೂರು ಬುಲ್ಸ್ 42-26 ಅಂಕಗಳೊಂದಿಗೆ 16 ಅಂಕಗಳ ಬೃಹತ್ ಮುನ್ನಡೆ ಮೂಲಕ ಗೆಲುವು ಪಡೆದುಕೊಂಡಿದೆ.

ಕಳೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ತೆಲುಗು ಟೈಟನ್ಸ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಜಯದ ಹಳಿಗೆ ಮರಳಿದೆ. ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 37 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಈವರೆಗೂ 14 ಪಂದ್ಯಗಳಲ್ಲಿ ಆಡಿರುವ ಬುಲ್ಸ್ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳನ್ನು ಸೋತಿದೆ.

ಬುಲ್ಸ್ ಮುಂದಿನ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಜನವರಿ 21ರಂದು ಹೈದಾರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+