Women's T20 World Cup: ಭಾರತದಲ್ಲಿ ವಿಶ್ವಕಪ್ ಆಯೋಜಿಸಲು ಒಪ್ಪದ ಬಿಸಿಸಿಐ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯಿಂದ ಮುಂಬರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಮೇಲೆ ಪ್ರಭಾವ ಬೀರಿದೆ. ಬಾಂಗ್ಲಾದೇಶದಲ್ಲಿ ಈ ಬಾರಿ ಮಹಿಳಾ ಟಿ20 ಪಂದ್ಯ ನಡೆಯಬೇಕಿತ್ತಾದರೂ, ದೇಶದಲ್ಲಿ ನಡೆಯುತ್ತಿರುವ ಗಲಬೆಯ ಕಾರಣ, ಪಂದ್ಯಾವಳಿಯನ್ನು ಸ್ಥಳಾಂತರಿಸುವ ಬಗ್ಗೆ ಐಸಿಸಿ ಚಿಂತಿಸುತ್ತಿದೆ. ಇದಕ್ಕಾಗಿ ಭಾರತದಲ್ಲಿ ಪಂದ್ಯಾವಳಿ ಆಯೋಜಿಸಲು ಬಿಸಿಸಿಐಗೆ ಕೇಳಿದೆ.

ಐಸಿಸಿ ಮಾಡಿದ ಮನವಿಯನ್ನು ಬಿಸಿಸಿಐ ತಿರಸ್ಕರಿಸಿದೆ. ಮುಂಬರುವ ಟಿ20 ಮಹಿಳಾ ವಿಶ್ವಕಪ್ 2024 ಅನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಹೇಳಿದೆ. ಇದರಿಂದಾಗಿ ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆ ಐಸಿಸಿಗೆ ತಲೆನೋವಾಗಿದೆ.

BCCI Declines ICC s Request to Host Women s T20 World Cup in India

ಐಸಿಸಿ ಮನವಿ ತಿರಸ್ಕರಿಸಿದ ಜಯ್ ಶಾ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿ ಮನವಿಯನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಕಳೆದ ವರ್ಷ ಪುರುಷರ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಮತ್ತು ಮುಂದಿನ ವರ್ಷ ಮಹಿಳೆಯರ ಏಕದಿನ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಲಿದ್ದು, ಈಗ ಮತ್ತೊಂದು ವಿಶ್ವಕಪ್ ಅನ್ನು ಆಯೋಜಿಸುವ ಐಸಿಸಿ ವಿನಂತಿಯನ್ನು ತಿರಸ್ಕರಿಸಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆಯೋಜಿಸಬಹುದೇ ಎಂದು ಬಿಸಿಸಿಐಗೆ ಕೇಳಿದ್ದರು, ಆದರೆ ನಾನು ಸಾರಾಸಗಟಾಗಿ ನಿರಾಕರಿಸಿದೆ. ಈಗ ಮಳೆಗಾಲದಲ್ಲಿದ್ದೇವೆ ನಾವು ಏಕದಿನ ಮಹಿಳಾ ವಿಶ್ವಕಪ್ (2025) ಅನ್ನು ಆಯೋಜಿಸಲಿದ್ದೇವೆ. ಸತತ ವಿಶ್ವಕಪ್‌ಗೆ ಆತಿಥ್ಯ ವಹಿಸಲು ಬಯಸುತ್ತೇನೆ ಎಂಬ ಅನಿಸಿಕೆ ನೀಡಲು ನಾನು ಬಯಸುವುದಿಲ್ಲ ಟೈಮ್ಸ್ ಆಫ್‌ ಇಂಡಿಯಾಗೆ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ಮಹಿಳಾ ಟಿ20 ವಿಶ್ವಕಪ್?

ಭಾರತದಲ್ಲಿ ಮಹಿಳಾ ಟಿ20 ವಿಶ್ವಕಪ್ ಆಯೋಜಿಸಲು ಜಯ್‌ ಶಾ ನಿರಾಕರಿಸಿದ ಬಳಿಕ ಐಸಿಸಿಗೆ ಹೊಸ ತಲೆನೋವು ಶುರುವಾಗಿದೆ. ಇದೀಗ ಐಸಿಸಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅನ್ನು ಕೇಳುವ ಸಾಧ್ಯತೆ ಇದೆ. ಶ್ರೀಲಂಕಾ ಜುಲೈನಲ್ಲಿ 8-ತಂಡಗಳ ಟೂರ್ನಮೆಂಟ್, ಮಹಿಳಾ ಏಷ್ಯಾ ಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ ಮತ್ತು ನಾಕೌಟ್ ಹಂತಗಳಲ್ಲಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+