ಭಾರತ ಟೆಸ್ಟ್ ಕ್ರಿಕೆಟ್‌ಗೆ ನೂತನ ನಾಯಕ ಆಯ್ಕೆ
India's Test Cricket New Captain: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ಭಾರತದ ತಂಡ ಹಾಗೂ ನೂತನ ನಾಯಕ, ಉಪನಾಯಕನನ್ನು ಸಹ ಪ್ರಕಟಿಸಿದೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ಇಂದು ಭಾರತ ತಂಡ ಹಾಗೂ ನೂತನ ನಾಯಕನನ್ನು ಸಹ ಪ್ರಕಟ ಮಾಡಿದೆ. ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಮುಂದಿನ ತಿಂಗಳು ಭಾರತ-ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ಟೆಸ್ಟ್ ಕ್ರಿಕೆಟ್‌ಗೆ ಹೊಸ ನಾಯಕ: ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದರು. ಬಳಿಕ ವಿರಾಟ್ ಕೊಹ್ಲಿ ಅವರು ಸಹ ಈ ಮಾದರಿ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಹೊಸ ನಾಯಕ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿದ್ದು, ಇದಕ್ಕೆ ಇದೀಗ ಉತ್ತರ ಸಿಕ್ಕಂತಾಗಿದೆ.
ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾದ ನಾಯಕನಾಗಿ 25 ವರ್ಷದ ಶುಭಮನ್ ಗಿಲ್, ಉಪನಾಯಕನಾಗಿ ರಿಷಬ್ ಪಂತ್ ಅರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನಾಯಕ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಗಳಿಗೆ ತೆರೆ ಎಳೆಯುವ ಕೆಲಸವನ್ನು ಬಿಸಿಸಿಐ ಮಾಡಿದೆ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರು ಜಂಟಿ ಪ್ರತ್ರಿಕಾಗೋಷ್ಠಿ ನಡೆಸಿ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ.
ಭಾರತ ಪುರುಷರ ಟೆಸ್ಟ್ ತಂಡ
* ಶುಭಮನ್ ಗಿಲ್ (ನಾಯಕ)
* ರಿಷಭ್ ಪಂತ್ (ವಿ.ಕೀ. & ಉಪನಾಯಕ)
* ಯಶಸ್ವಿ ಜೈಸ್ವಾಲ್
* ಕೆಎಲ್ ರಾಹುಲ್
* ಸಾಯಿ ಸುದರ್ಶನ್
* ಅಭಿಮನ್ಯು ಈಶ್ವರನ್
* ಕರುಣ್ ನಾಯರ್
* ನಿತೀಶ್ ಕುಮಾರ್ ರೆಡ್ಡಿ
* ರವೀಂದ್ರ ಜಡೇಜಾ
* ಧ್ರುವ್ ಜುರೆಲ್ (ವಿಕೆಟ್ ಕೀಪರ್)
* ವಾಷಿಂಗ್ಟನ್ ಸುಂದರ್
* ಶಾರ್ದೂಲ್ ಠಾಕೂರ್
* ಜಸ್ಪ್ರೀತ್ ಬುಮ್ರಾ
* ಮೊಹಮ್ಮದ್ ಸಿರಾಜ್
* ಪ್ರಸಿದ್ಧ್ ಕೃಷ್ಣ
* ಆಕಾಶ್ ದೀಪ್
* ಅರ್ಷದೀಪ್ ಸಿಂಗ್
* ಕುಲದೀಪ್ ಯಾದವ್
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
* ಮೊದಲ ಟೆಸ್ಟ್ - ಜೂನ್ 20ರಿಂದ ಜೂನ್ 24ರ ವರೆಗೆ
* ಎರಡನೇ ಟೆಸ್ಟ್ - ಜುಲೈ 2ರಿಂದ ಜುಲೈ 6ರ ವರೆಗೆ
* ಮೂರನೇ ಟೆಸ್ಟ್ - ಜುಲೈ 10ರಿಂದ ಜುಲೈ 14ರ ವರೆಗೆ
* ನಾಲ್ಕನೇ ಟೆಸ್ಟ್ - ಜುಲೈ 23ರಿಂದ ಜುಲೈ 27ರ ವರೆಗೆ
* ಐದನೇ ಟೆಸ್ಟ್ - ಜುಲೈ 31ರಿಂದ ಆಗಸ್ಟ್ 4ರ ವರೆಗೆ












Click it and Unblock the Notifications