ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿ ಸಂಭ್ರಮಿಸಿದ ಪಾಕಿಸ್ತಾನದ ಅಭಿಮಾನಿಗಳು

|
Google Oneindia Kannada News

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ. ವಿರಾಟ್ ಕೊಹ್ಲಿ ಸದ್ಯ ರನ್ ಬರ ಅನುಭವಿಸುತ್ತಿದ್ದರೂ ಅಭಿಮಾನಕ್ಕೆ ಎಂದಿಗೂ ಬರ ಅನುಭವಿಸಿಲ್ಲ. ಕೋಟ್ಯಂತರ ಅಭಿಮಾನಿಗಳು ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಅಂತಹ ಪಾಕಿಸ್ತಾನದ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಆದರೆ, ಅವರು ಸಾಮಾನ್ಯ ಅಭಿಮಾನಿಯಲ್ಲ, ವಿಶೇಷ ಚೇತನ ಮಹಿಳಾ ಅಭಿಮಾನಿ.

100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

ದುಬೈನಲ್ಲಿ ಟೀಂ ಇಂಡಿಯಾದ ಅಭ್ಯಾಸದ ವೇಳೆ ತಮ್ಮನ್ನು ಭೇಟಿಯಾಗಲು ಬಂದಿದ್ದ ಪಾಕಿಸ್ತಾನದ ವಿಶೇಷ ಚೇತನ ಮಹಿಳೆಯೊಬ್ಬರ ಆಸೆಯನ್ನು ವಿರಾಟ್ ಕೊಹ್ಲಿ ಪೂರೈಸಿದ್ದಾರೆ. ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸಿದ ವಿರಾಟ್ ಕೊಹ್ಲಿ ಸರಳತೆಗೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2022ರಲ್ಲಿ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಭಾರತ ಕ್ರಿಕೆಟ್ ತಂಡದ ಇತರ ಸದಸ್ಯರೊಂದಿಗೆ ಕೊಹ್ಲಿ ತಯಾರಿ ಆರಂಭಿಸಿದ್ದಾರೆ. ಟೂರ್ನಮೆಂಟ್ ಇನ್ನೂ ಪ್ರಾರಂಭವಾಗದಿದ್ದರೂ, ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿಯಾಗಲು ಹಲವಾರು ಮಂದಿ ಕ್ರಿಡಾಂಗಣದತ್ತ ಆಗಮಿಸುತ್ತಾರೆ. ತಮ್ಮ ನೆಚ್ಚಿನ ಕ್ರಿಕೆಟಿಗನ ಭೇಟಿಯಾಗಲು ಬಯಸುವ ಕಥೆಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

 ಅಭಿಮಾನಿಯ ಬಹುದಿನದ ಕನಸು

ಅಭಿಮಾನಿಯ ಬಹುದಿನದ ಕನಸು

ಪಾಕಿಸ್ತಾನದ ವಿರುದ್ಧದ ತನ್ನ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಭಾರತೀಯ ಕ್ರಿಕೆಟ್ ತಂಡ ಅಭ್ಯಾಸ ನಡೆಸುತ್ತಿದ್ದ ಸ್ಥಳಕ್ಕೆ ವಿಶೇಷ ಚೇತನ ಅಭಿಮಾನಿಯೊಬ್ಬರು ಆಗಮಿಸಿ ತನ್ನ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗಲು ಕಾಯುತ್ತಿದ್ದರು. ಅಂತಿಮವಾಗಿ ಅಭಿಮಾನಿಯ ಬಗ್ಗೆ ತಿಳಿದುಕೊಂಡ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿ ಸೆಲ್ಫಿಗೆ ಫೋಸ್ ನೀಡಿದರು.

ವಿರಾಟ್ ಕೊಹ್ಲಿಯನ್ನು ಭೇಟಿಯಾದ ಬಗ್ಗೆ ಪಾಕಿಸ್ತಾನದ ಮಹಿಳೆಯನ್ನು ಕೇಳಿದಾಗ, ಭಾರತೀಯ ಕ್ರಿಕೆಟ್ ತಾರೆ ತನ್ನನ್ನು ಆತ್ಮೀಯವಾಗಿ ಮಾತನಾಡಿಸಿದರು. ನನಗೆ ಹೇಗಿದ್ದೀರಿ ಎಂದು ಕೇಳಿದರು ಎಂದು ಅವರು ಹೇಳಿದರು.

ಬ್ಯಾಟಿಂಗ್ ಮೂಲಕವೇ ವಿರಾಟ್ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಲಿದ್ದಾರೆ: ರವಿಶಾಸ್ತ್ರಿಬ್ಯಾಟಿಂಗ್ ಮೂಲಕವೇ ವಿರಾಟ್ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಲಿದ್ದಾರೆ: ರವಿಶಾಸ್ತ್ರಿ

 ಪಾಕ್‌ ಅಭಿಮಾನಿ ಭೇಟಿಗೆ ಅವಕಾಶ ಕೊಟ್ಟ ವಿರಾಟ್

ಪಾಕ್‌ ಅಭಿಮಾನಿ ಭೇಟಿಗೆ ಅವಕಾಶ ಕೊಟ್ಟ ವಿರಾಟ್

ಇದಕ್ಕೂ ಮುನ್ನ ಮತ್ತೊಬ್ಬ ಅಭಿಮಾನಿ ಕೊಹ್ಲಿಯನ್ನು ಭೇಟಿಯಾಗಲು ಭಾರತ ತಂಡದ ಅಭ್ಯಾಸದ ಸ್ಥಳಕ್ಕೆ ಆಗಮಿಸಿದ್ದರು. ಅಭಿಮಾನಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಭದ್ರತಾ ಅಧಿಕಾರಿಗಳು ಅವರನ್ನು ತಡೆದರು.

ದೂರದಲ್ಲಿ ಹೋಗುತ್ತಿದ್ದ ವಿರಾಟ್ ಕೊಹ್ಲಿ ಇದನ್ನು ಗಮನಿಸಿ, ಅಭಿಮಾನಿಯನ್ನು ಭೇಟಿಯಾಗಲು ಅವಕಾಶ ನೀಡುವಂಯೆ ಭದ್ರತಾ ಸಿಬ್ಬಂದಿಗೆ ಕೇಳಿದರು. ನಂತರ ಆ ಅಭಿಮಾನಿಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಅವಕಾಶ ನೀಡಲಾಯಿತು.

 ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಅಭಿಮಾನಿ

ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಅಭಿಮಾನಿ

ತನ್ನ ಹೆಸರನ್ನು ಮೊಹಮ್ಮದ್ ಜಿಬ್ರಾನ್ ಎಂದು ಹೇಳಿರುವ ಅಭಿಮಾನಿ, ನಾನು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ, ನಾನು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ನಿರೀಕ್ಷೆಯಲ್ಲಿ ಪಾಕಿಸ್ತಾನದಿಂದ ಬಂದಿದ್ದೇನೆ. ಅವರನ್ನು ಭೇಟಿ ಮಾಡಲು ನಾನು ಇಡೀ ತಿಂಗಳು ಕಾಯುತ್ತಿದ್ದೆ. ಇದಕ್ಕಾಗಿ ಅವರು ತಮ್ಮ ಅಭ್ಯಾಸವನ್ನು ಮುಗಿಸಿ ತಮ್ಮ ಹೋಟೆಲ್‌ಗೆ ಹಿಂತಿರುಗಲು ಹೊರಟಿದ್ದ ಕ್ಷಣದಲ್ಲಿ ನಾನು ಸಾಕಷ್ಟು ಪ್ರಯತ್ನಿಸಿದೆ. ಅವರು ಅದ್ಭುತ ಕ್ರಿಕೆಟಿಗನಲ್ಲದೆ ಅದ್ಭುತ ವ್ಯಕ್ತಿ. ಅವರು ನನ್ನ ಮಾತನ್ನು ಆಲಿಸಿದರು ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನನ್ನ ಮನವಿಗೆ ಒಪ್ಪಿದರು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

 ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ

ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ

ಏಷ್ಯಾಕಪ್ 2022 ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಶನಿವಾರದಿಂದ ಚಾಲನೆ ಸಿಗಲಿದೆ. ಟೂರ್ನಿ ಆರಂಭದ ಮೊದಲ ದಿನ ಶ್ರೀಲಂಕಾ-ಆಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.

ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ಆಗಸ್ಟ್ 28ರ ಭಾನುವಾರ ನಡೆಯಲಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ತಯಾರಿ ಆರಂಭಿಸಿದ್ದು, ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುವ ಬಗ್ಗೆ ಅಭಿಮಾನಿಗಳು ನಂಬಿಕೆ ಹೊಂದಿದ್ದಾರೆ.

English summary
Virat Kohli, fulfilled the lifelong dream of a disabled fangirl who had come to meet him during Team India's practice session in Dubai. Another fan had reached the venue of India's practice session to meet Kohli. he was stopped by security officials. While Kohli kept walking away initially, he eventually noticed the fan and asked the security guards to let him meet him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X