ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ: ಎರಡೂ ತಂಡಗಳ ಬಲಾಬಲ ಹೇಗಿದೆ ಗೊತ್ತಾ?

|
Google Oneindia Kannada News

ಕ್ರಿಕೆಟ್ ಅಭಿಮಾನಿಗಳ ಬಹುಕಾಲದ ಕಾಯುವಿಕೆ ಕೊನೆಯಾಗುವ ದಿನ ಬಂದಿದೆ. ಸಾಕಷ್ಟು ನಿರೀಕ್ಷೆಗಳ ನಡುವೆಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಭಾನುವಾರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಎದುರಾಗುತ್ತಿವೆ. ಪ್ರಪಂಚದ ಮೂಲೆ ಮೂಲೆಗಳಿಂದ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎರಡೂ ದೇಶದ ಅಭಿಮಾನಿಗಳು ಕಾಯುತ್ತಿದ್ದಾರೆ.

ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಏಷ್ಯಾ ಕಪ್ 2022ರ ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಗೆಲುವಿನ ಮೂಲಕ ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆಯಬೇಕೆಂದು ಎರಡೂ ತಂಡಗಳು ನೋಡುತ್ತಿವೆ.

ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿ ಸಂಭ್ರಮಿಸಿದ ಪಾಕಿಸ್ತಾನದ ಅಭಿಮಾನಿಗಳುವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿ ಸಂಭ್ರಮಿಸಿದ ಪಾಕಿಸ್ತಾನದ ಅಭಿಮಾನಿಗಳು

ಎರಡೂ ತಂಡಗಳಿಗೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದೆ. ಪಾಕಿಸ್ತಾನದ ಪ್ರಮುಖ ಬೌಲರ್ ಶಾಹಿನ್ ಅಫ್ರಿದಿ ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿದಿದ್ದರೆ, ಭಾರತದ ಜಸ್ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಇದುವರೆಗೆ 13 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 7 ಬಾರಿ ಜಯಗಳಿಸಿದೆ. ಪಾಕಿಸ್ತಾನ 5 ಪಂದ್ಯಗಳಲ್ಲಿ ಜಯಸಾಧಿಸಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಯಾಗಿದೆ. ಏಷ್ಯಾಕಪ್ ಪಂದ್ಯಾವಳಿ ಈ ಏಕದಿನ ಮಾದರಿಯಲ್ಲಿ ನಡೆಯುತ್ತಿತ್ತು, ಆದರೆ 2016ರಲ್ಲಿ ಮೊದಲ ಬಾರಿ ಟಿ20 ಮಾದರಿಯಲ್ಲಿ ನಡೆಯಿತು ಮತ್ತು ಈ 2022ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆಯುತ್ತಿದೆ. 2016ರ ಟಿ20 ಮಾದರಿ ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾವನ್ನು ಸೋಲಿಸಿತ್ತು.

 ಪಾಕಿಸ್ತಾನ ವಿರುದ್ಧ ಆಡಲು ಯಾರಿಗೆ ಸಿಗುತ್ತೆ ಅವಕಾಶ

ಪಾಕಿಸ್ತಾನ ವಿರುದ್ಧ ಆಡಲು ಯಾರಿಗೆ ಸಿಗುತ್ತೆ ಅವಕಾಶ

ಭಾರತ ತಂಡದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿ ಇರುವುದಂತೂ ನಿಜ. ಪಾಕಿಸ್ತಾನದ ವಿರುದ್ಧದ ಪಂದ್ಯ ಭಾರತಕ್ಕೆ ಮಹತ್ವದ್ದಾಗಿದ್ದು, ಯಾರು ಸ್ಥಾನಪಡೆಯಲಿದ್ದಾರೆ? ಎನ್ನುವುದು ಕುತೂಹಲ ಮೂಡಿಸಿದೆ.

ಆರಂಭಿಕರಾಗಿ ರೋಹಿತ್ ಶರ್ಮಾ, ಕೆ. ಎಲ್‌. ರಾಹುಲ್ ಕಣಕ್ಕಿಳಿಯುವುದು ಖಚಿತ, ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು, ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ನಂತರ ರಿಷಬ್ ಪಂತ್ ಕಣಕ್ಕಿಳಿಯುವ ಸಾಧ್ಯತೆ ಇದೆ, ಆದರೆ ಅನುಭವಿ ದಿನೇಶ್ ಕಾರ್ತಿಕ್‌ಗೆ ಮಣೆ ಹಾಕಿದರೆ, ರಿಷಬ್ ಪಂತ್ ಹೊರಗುಳಿಯಬೇಕಾಗುತ್ತದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಸ್ಥಾನ ಖಚಿತವಾಗಿದೆ. ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಬೌಲಿಂಗ್ ಆಡುವ ಸಾಧ್ಯತೆ ಇದೆ.

100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ100ನೇ ಟಿ20: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ ಹಿಡಿದು ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

 ಬಲಿಷ್ಠವಾಗಿದೆ ಪಾಕಿಸ್ತಾನ ತಂಡ

ಬಲಿಷ್ಠವಾಗಿದೆ ಪಾಕಿಸ್ತಾನ ತಂಡ

ಇತ್ತ ಪಾಕಿಸ್ತಾನ ತಂಡ ಕೂಡ ಭಾರೀ ಬಲಿಷ್ಠವಾಗಿದೆ ಸದ್ಯ ವಿಶ್ವದ ನಂ.1 ಬ್ಯಾಟರ್ ಆಗಿರುವ ಬಾಬರ್ ಆಜಂ ಪಾಕಿಸ್ತಾನ ಬ್ಯಾಟಿಂಗ್‌ ಬಹುದೊಡ್ಡ ಶಕ್ತಿ. ಮೊಹಮ್ಮದ್ ರಿಜ್ವಾನ್ ಉತ್ತಮ ಫಾರ್ಮ್‌ನಲ್ಲಿದ್ದು ಬ್ಯಾಟಿಂಗ್‌ನಲ್ಲಿ ಬಲ ತುಂಬಲಿದ್ದಾರೆ. ಫಖಾರ್ ಜಮಾನ್ ಪಾಕಿಸ್ತಾನದ ಮತ್ತೊಬ್ಬ ಪ್ರಮುಖ ಬ್ಯಾಟರ್, ಖುಶ್ದಿಲ್ ಶಾ, ಆಸಿಫ್ ಅಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದು, ಅಂತಿಮ ಓವರ್ ಗಳಲ್ಲಿ ವೇಗವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ.

ಮೊಹಮ್ಮದ ನವಾಜ್, ಶಾದಾಬ್ ಖಾನಿ ಪ್ರಮುಖ ಆಲ್‌ರೌಂಡರ್ ಆಗಿ ಸ್ಥಾನ ಪಡೆಯಲಿದ್ದಾರೆ. ಹ್ಯಾರಿಸ್ ರೌಫ್, ನಸೀಮ್ ಶಾ, ಉಸ್ಮಾನ್ ಖಾದಿರ್ ಪ್ರಮುಖ ಬೌಲರ್ ಆಗಿದ್ದಾರೆ. ಶಹಿನ್ ಅಫ್ರಿದಿ ಬದಲಾಗಿ ತಂಡದಲ್ಲಿ ಸ್ಥಾನ ಪಡೆದಿರುವ ಮೊಹಮ್ಮದ್ ಹಸ್ನೈನ್ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

 ಪಂದ್ಯದ ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್ ವಿವರ

ಪಂದ್ಯದ ಸಮಯ, ಸ್ಥಳ, ಲೈವ್ ಸ್ಟ್ರೀಮಿಂಗ್ ವಿವರ

ಆಗಸ್ಟ್ 28, ಭಾನುವಾರದಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು. ಭಾರತೀಯ ಕಾಲಮಾನ ಸಂಜೆ 7-30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆ ಮಾಡುವವರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ.

ಇನ್ನು ಆನ್‌ಲೈನ್‌ನಲ್ಲಿ ನೋಡುವವರಿಗೆ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು, ಕ್ರೀಡಾಂಗಣ ಭರ್ತಿಯಾಗಲಿದೆ, ಎರಡೂ ತಂಡದ ಅಭಿಮಾನಿಗಳ ಭಾರೀ ಬೆಂಬಲದ ನಡುವೆ ಎರಡೂ ತಂಡಗಳು ಜಯಕ್ಕಾಗಿ ಪೈಪೋಟಿ ನಡೆಸಲಿವೆ.

 ದುಬೈ ಕ್ರೀಡಾಂಗಣದ ಪಿಚ್‌ ರಿಪೋರ್ಟ್

ದುಬೈ ಕ್ರೀಡಾಂಗಣದ ಪಿಚ್‌ ರಿಪೋರ್ಟ್

ದುಬೈನಲ್ಲಿ ನಡೆಯುವ ಸಂಜೆಯ ಪಂದ್ಯಗಳಲ್ಲಿ ಇಬ್ಬನಿ ಪ್ರಮುಖಪಾತ್ರ ವಹಿಸಲಿದೆ, ಮೊದಲು ಬೌಲಿಂಗ್ ಮಾಡುವ ತಂಡವೇ ಇಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್ ಗಳಿಗೆ ಇಬ್ಬನಿ ಬೀಳುವುದರಿಂದ ಬೌಲರ್ ಗಳು ಪರದಾಡಬೇಕಾಗುತ್ತದೆ.

ಟಾಸ್ ಗೆಲ್ಲುವ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೂ ಭಾರತ 2021ರ ವಿಶ್ವಕಪ್ ನಂತರ ಆಡಿದ 16 ಟಿ20 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ ಜಯಗಳಿಸಿದ್ದು, ಭಾರತದ ವಿಚಾರಕ್ಕೆ ಟಾಸ್ ಪ್ರಮುಖ ವಿಚಾರವಾಗದು ಎನ್ನಲಾಗಿದೆ.

English summary
India and Pakistan will clash against one another in Group A of the ongoing Asia Cup 2022 on Sunday at the Dubai International Stadium. On Sunday, the Rohit Sharma-led team will look to play its A game in a bid to win the high-octane clash. Know When And Where To Watch Live Telecast, Live Streaming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X