• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್‌: ಚಾಂಪಿಯನ್ ಪಟ್ಟ ಅಲಂಕರಿಸಿದ ಅಸಾದ್ ಖಾನ್

|
Google Oneindia Kannada News

ಬೆಂಗಳೂರು, ನವೆಂಬರ್ 08: ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಆಯೋಜಿಸಿದ್ದ ಡರ್ಟ್‌ ಬೈಕ್‌ ಚಾಲೆಂಜ್‌ ಚಾಂಪಿಯನ್‌ಶಿಪ್ ಅಂತ್ಯಗೊಂಡಿದ್ದು, ಅಸಾದ್‌ ಖಾನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC)ನ ಫೈನಲ್‌ ರೇಸ್‌ನಲ್ಲಿ ಸವಾರರು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಿದರು. ಫೈನಲ್ ರೇಸ್‌ನಲ್ಲಿ ಅಸಾದ್ ಖಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ರಾಕೇಶ್ ಎನ್. ಮತ್ತು ಗಿಡ್ಯುನ್ ಬೆಂಜಮಿನ ರು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಮಿಂಚಿದರು.

ಮುಂದಿನ 5 ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ: ಅರುಣ್ ಧುಮಾಲ್ಮುಂದಿನ 5 ವರ್ಷಗಳಲ್ಲಿ ಐಪಿಎಲ್ ವಿಶ್ವದ ಅತಿದೊಡ್ಡ ಲೀಗ್ ಆಗಲಿದೆ: ಅರುಣ್ ಧುಮಾಲ್

ರೇಸ್‌ನಲ್ಲಿ ಗೆದ್ದ ಚಾಂಪಿಯನ್‌ಗೆ Hero Xpulse 200 4V ಜನಪ್ರಿಯ ಮೋಟಾರ್‌ ಸೈಕಲ್ ಜತೆಗೆ ಹಾಗೂ 10 ಲಕ್ಷ ರೂ ನಗದು ಬಹುಮಾನ ಹಾಗೂ ಎರಡನೇ ಸ್ಥಾನ ಪಡೆದವರಿಗೆ ಮೋಟರ್ ಸೈಕಲ್ ಜತೆಗೆ ರೂ. 6 ಲಕ್ಷ ಹಾಗೂ 3ನೇ ಸ್ಥಾನ ಪಡೆದ ಬೈಕರ್‌ ಮೋಟರ್‌ ಸೈಕಲ್ ಜೊತೆಗೆ ರೂ. 4 ಲಕ್ಷ ಮೌಲ್ಯದ ಪ್ರಾಯೋಜಕತ್ವಗಳ ಒಪ್ಪಂದಗಳನ್ನು ಸ್ವೀಕರಿಸಿದರು.

ಎಲ್ಲಾ ಸುತ್ತುಗಳಲ್ಲಿ ರೋಚಕ ಪ್ರದರ್ಶನ ನೀಡಿದ ಒಲೆಸ್ಯಾ ಡಯಾಸ್ ಅವರನ್ನು ಅತ್ಯುತ್ತಮ ಮಹಿಳಾ ಆಫ್-ರೋಡ್ ರೈಡರ್ ಎಂದು ಗೌರವಿಸಲಾಯಿತು.

ಜೈಪುರದಲ್ಲಿರುವ ಹೀರೋ ಮೋಟೋಕಾರ್ಪ್‌ನ ವಿಶ್ವದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಸಿಐಟಿಯ ಆವರಣದಲ್ಲಿ ಅಂತಿಮ ವಾರದ ಸ್ಪರ್ಧೆಗಳನ್ನು ನಡೆಸಲಾಯಿತು. ಇನ್ನು ಸ್ಪರ್ಧೆಯಲ್ಲಿ ಅತ್ಯುನ್ನತ ಅನುಭವ ಇರಲೆಂದು ಅಂತಾರಾಷ್ಟ್ರೀಯ ಇವೆಂಟ್‌ಗಳಿಗೆ ಸರಿ ಸಮಾನವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿ ಫೈನಲ್ ರೌಂಡ್‌ನ ಪೂರ್ಣ ಸ್ಪರ್ಧೆಯನ್ನು ಸಂಯೋಜಿಸಿತ್ತು.

Asad Khan won first ever Hero Dirt Bike Challenge

ದೇಶವ್ಯಾಪಿಯಾಗಿ ನಾಲ್ಕು ಹಂತಗಳಲ್ಲಿ ನಡೆದ ಕಠಿಣ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ ಪಟ್ಟಕ್ಕಾಗಿ ಸುಮಾರು 1,00,000 ಸ್ಪರ್ಧಿಗಳು ನೋಂದಾಯಿಸಿದ್ದರು. 41 ನಗರಗಳಲ್ಲಿ 120ಕ್ಕಿಂತ ಹೆಚ್ಚು ದಿನಗಳಿಗೆ ಈ ಸ್ಪರ್ಧೆ ನಡೆದಿತ್ತು. ಇದರಲ್ಲಿ ಟಾಪ್-20 ಸ್ಪರ್ಧಿಗಳನ್ನು ಶಾರ್ಟ್‌ ಲಿಸ್ಟ್ ಮಾಡಲಾಗಿತ್ತು.

HDBC ಕುರಿತು ಪ್ರತಿಕ್ರಿಯಿಸಿದ ಹೀರೋ ಮೋಟೋಕಾರ್ಪ್ ಸಂಸ್ಥೆಯ ಚೀಫ್ ಗ್ರೋಥ್ ಆಫೀಸರ್ ರಂಜೀವ್‌ಜಿತ್‌ ಸಿಂಗ್ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್‌ನಲ್ಲಿ ಸ್ಪರ್ಧಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದರು. ದೇಶದಲ್ಲಿ ಆಫ್-ರೋಡ್ ರೈಡಿಂಗ್ ವಿಭಾಗವು ಬೆಳೆಯುತ್ತಿರುವುದಕ್ಕೆ ಇದು ನಿದರ್ಶನವಾಗಿದೆ. ಈ ಸಂಸ್ಕೃತಿಯನ್ನು ಪ್ರಚಾರ ಮಾಡುವಲ್ಲಿ ಹೀರೋ ಮೋಟೋಕಾರ್ಪ್ ತನ್ನ Hero Xpulse 200 4V ಮೂಲಕ ಮುಂಚೂಣಿಯಲ್ಲಿದೆ. ಇದು ಎಕ್ಸ್‌ಪಲ್ಸ್ ರೈಡರ್‌ಗಳು, ವೃತ್ತಿಪರರು, ಹವ್ಯಾಸಿಗಳು ಮತ್ತು ದೈನಂದಿನ ಬಳಕೆದಾರರ ನೆಚ್ಚಿನ ಬೈಕ್ ಆಗಿದೆ.

HDBC ದೇಶದ ಉತ್ಸಾಹಿ ರೈಡರ್‌ಗಳಿಗೆ ತಮ್ಮ ಕೌಶಲ್ಯಗಳನ್ನು ತೋರ್ಪಡಿಸಲು ಅವಕಾಶಗಳ ಮುಕ್ತವಾಗಿ ತೆರೆದಿಟ್ಟಿದೆ ಮತ್ತು ಭಾರತಕ್ಕೆ ಭವಿಷ್ಯದ ಚಾಂಪಿಯನ್‌ಗಳನ್ನು ಒದಗಿಸುವ ಕಾರ್ಯ ಮಾಡುತ್ತಿದೆ. ವಿಜೇತರನ್ನು ಅಭಿನಂದಿಸುತ್ತೇವೆ ಮತ್ತು ಫೈನಲ್‌ನಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ" ಎಂದರು.

ದೇಶದ ಪ್ರತಿಭೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಹೀರೋ ಮೋಟೋಕಾರ್ಪ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಅರುಣ್ ಜೌರಾ ಅವರು "ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿಯು ಜಾಗತಿಕವಾಗಿ ಭಾರತೀಯ ಆಫ್-ರೋಡ್ ರೇಸಿಂಗ್‌ನ ಮುಂಚೂಣಿಯಲ್ಲಿದೆ . ಇದು ದೇಶದ ಹವ್ಯಾಸಿಗಳು ಮತ್ತು ವೃತ್ತಿಪರರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸುವುದಕ್ಕೆ ಪ್ರೇರೇಪಿಸುತ್ತಿದೆ. ಉನ್ನತ ತಂತ್ರಜ್ಞಾನ ಮತ್ತು ನಾವೀನ್ಯಗಳೊಂದಿಗೆ, Xpulse 200 4V ಸವಾರರಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು, ತಮ್ಮ ಮಿತಿಗಳನ್ನು ಮೀರಿ ಸಾಧಿಸಲು ಸೂಕ್ತವಾದ ಬೈಕ್ ಎನಿಸಿಕೊಂಡಿದೆ. ನಮ್ಮ ಪ್ರಯತ್ನಗಳು ಫಲ ನೀಡುತ್ತಿರುವುದನ್ನು ಕಂಡು ನಮಗೆ ಖುಷಿಯಾಗಿದೆ. ಈ ಕ್ರೀಡೆಯು ಇನ್ನಷ್ಟು ವೇಗವಾಗಿ ಬೆಳೆಯುತ್ತದೆ ಎಂಬ ವಿಶ್ವಾಸವಿದೆ'' ಎಂದು ಹೇಳಿದರು.

English summary
Hero MotoCorp announced biker Asad Khan has been won title its inaugural Hero Dirt Biking Challenge. Rakesh Nagaraja and Gideon Benjamin were the first and second runners-up, respectively,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X