ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಫುಟ್ಬಾಲ್‌ಗೆ ಮತ್ತೊಂದು ಆಘಾತ: ಸಿಂಗಾಪುರ, ವಿಯೆಟ್ನಾಂ ವಿರುದ್ಧ ನಡೆಯಬೇಕಿದ್ದ ಪಂದ್ಯಗಳು ರದ್ದು

|
Google Oneindia Kannada News

ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅನ್ನು ಅಮಾನತುಗೊಳಿಸುವ ಫಿಫಾ ನಿರ್ಧಾರದ ಬೆನ್ನಲ್ಲೇ ಭಾರತೀಯ ಫುಟ್ಬಾಲ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಸೆಪ್ಟೆಂಬರ್‌ನಲ್ಲಿ ಸಿಂಗಪುರ ಮತ್ತು ವಿಯೆಟ್ನಾಂ ಭಾರತ ಆಡಬೇಕಿದ್ದ ಅವಳಿ ಸೌಹಾರ್ದ ಪಂದ್ಯಗಳು ರದ್ದಾಗಿವೆ.

ಭಾರತ ಫುಟ್ಬಾಲ್ ತಂಡ ಸೆಪ್ಟೆಂಬರ್ 24 ರಂದು ಸಿಂಗಾಪುರ ತಂಡದ ವಿರುದ್ಧ ಪಂದ್ಯವನ್ನಾಡಲು ನಿರ್ಧರಿಸಲಾಗಿತ್ತು. ನಂತರ ಸೆಪ್ಟೆಂಬರ್ 27 ರಂದು ವಿಯೆಟ್ನಾಂ ವಿರುದ್ಧ ಪಂದ್ಯವನ್ನು ಆಯೋಜಿಸಲಾಗಿತ್ತು. ಮುಂದಿನ ವರ್ಷದ ಏಷ್ಯನ್ ಕಪ್‌ ಪಂದ್ಯಾವಳಿಗೆ ಭಾರತದ ತಯಾರಿಗಾಗಿ ನಿರ್ಣಾಯಕವಾದ ಪಂದ್ಯಗಳನ್ನು ವಿಯೆಟ್ನಾಂ ಆಯೋಜಿಸಿತ್ತು ಮತ್ತು ಹೋ ಚಿ ಮಿನ್ಹ್ ಸಿಟಿಯಲ್ಲಿರುವ ಥಾಂಗ್ ನಾಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ಸಾಧ್ಯತೆ ಇತ್ತು.

ಎಐಎಫ್‌ಎಫ್‌ಗೆ ಫೀಫಾ ನಿಷೇಧ; ಭಾರತೀಯ ಫುಟ್ಬಾಲ್‌ಗೆ ಮರ್ಮಾಘಾತಎಐಎಫ್‌ಎಫ್‌ಗೆ ಫೀಫಾ ನಿಷೇಧ; ಭಾರತೀಯ ಫುಟ್ಬಾಲ್‌ಗೆ ಮರ್ಮಾಘಾತ

ಮೂಲಗಳ ಪ್ರಕಾರ, ವಿಯೆಟ್ನಾಂ ಫುಟ್‌ಬಾಲ್ ಫೆಡರೇಶನ್ ಕಳೆದ ವಾರ ಭಾರತ ತಂಡ ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ಗೆ ತಿಳಿಸಿತು. ಆಗಸ್ಟ್ 14 ರಂದು ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿದ ನಂತರ, ಫಿಫಾ ತನ್ನ ಎಲ್ಲಾ ಸದಸ್ಯ ಸಂಘಗಳಿಗೆ ಪತ್ರ ಬರೆದಿದ್ದು, ಅಮಾನತುಗೊಂಡಿರುವ ಎಐಎಫ್‌ಎಫ್ ಮತ್ತು ಅದರ ತಂಡಗಳೊಂದಿಗೆ ಯಾವುದೇ ಕ್ರೀಡಾ ಸಂಪರ್ಕವನ್ನು ಹೊಂದಿರುವಂತಿಲ್ಲ ಎಂದು ಹೇಳಿದೆ.

Another Shock For Indian Football : Matches Against Singapore, Vietnam Cancelled

ಏಷ್ಯಾಕಪ್‌ಗಾಗಿ ತಯಾರಿಯಲ್ಲಿದ್ದ ಭಾರತ ತಂಡ

ಇನ್ನೂ ಒಂದು ತಿಂಗಳು ಇರುವಾಗಲೇ ಭಾರತದ ವಿರುದ್ಧದ ಪಂದ್ಯಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ವಿಯೆಟ್ನಾಂ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

AIFF ಮೇಲಿನ ನಿಷೇಧ ತೆರವಿನ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆAIFF ಮೇಲಿನ ನಿಷೇಧ ತೆರವಿನ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

"ವಿಯೆಟ್ನಾಂ ನಿರ್ಣಾಯಕ ಫಿಫಾದಿಂದ ವಿರೋಧ ಕಟ್ಟಿಕೊಳ್ಳಲು ಸಿದ್ಧವಾಗಿಲ್ಲ. ಎಐಎಫ್‌ಎಫ್‌ನ ಸ್ಥಿತಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಕಾರಣ, ವಿಯೆಟ್ನಾಂ ಭಾರತದ ವಿರುದ್ಧದ ಪಂದ್ಯಗಳನ್ನು ರದ್ದುಗೊಳಿಸಿದ್ದು, ಪರ್ಯಾಯ ಎದುರಾಳಿ ತಂಡಕ್ಕಾಗಿ ತಮ್ಮ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ.

Another Shock For Indian Football : Matches Against Singapore, Vietnam Cancelled

2022ರ ಎಎಫ್‌ಎಫ್‌ ಮಿತ್ಸುಬಿಷಿ ಎಲೆಕ್ಟ್ರಿಕ್ ಕಪ್‌ ಪಂದ್ಯಾವಳಿಗಾಗಿ ವಿಯೆಟ್ನಾಂ ತಯಾರಿಯ ಭಾಗವಾಗಿ ಭಾರತದ ವಿರುದ್ಧ ಪಂದ್ಯವನ್ನು ಆಯೋಜನೆ ಮಾಡಿತ್ತು. ಏಷ್ಯನ್‌ಕಪ್‌ಗಾಗಿ ತಯಾರಿ ಆರಂಭಿಸಲು ಭಾರತ ತಂಡ ಈ ಅವಕಾಶ ಬಳಸಿಕೊಳ್ಳಲು ಆಶಿಸಿತ್ತು.

ಭಾರತ ಫುಟ್ಬಾಲ್ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್, ಅವರ ಒಪ್ಪಂದದ ನವೀಕರಣವನ್ನು ಇನ್ನೂ ದೃಢೀಕರಿಸಬೇಕಾಗಿದೆ. ಅವರು ಆಗಸ್ಟ್ ತಿಂಗಳ ಆರಂಭದಲ್ಲಿ ಭಾರತ-ವಿಯೆಟ್ನಾಂ, ಭಾರತ-ಸಿಂಗಪುರ ಪಂದ್ಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ಭಾರತವು ಪ್ರಸ್ತುತ ಫುಟ್ಬಾಲ್ ರ್‍ಯಾಂಕಿಂಗ್‌ನಲ್ಲಿ 104 ನೇ ಸ್ಥಾನದಲ್ಲಿದೆ, ವಿಯೆಟ್ನಾಂ 97ನೇ ಸ್ಥಾನದಲ್ಲಿದ್ದು, ಸಿಂಗಾಪುರ 159ನೇ ಸ್ಥಾನದಲ್ಲಿದೆ.

Recommended Video

ಆತ್ಮ ನಿರ್ಭರ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ | Oneindia Kannada

English summary
Amidst FIFA suspension continues, the Indian Football national team’s twin friendly matches against Singapore and Vietnam in September have been cancelled. India were scheduled to face Singapore on September 24 and Vietnam on September 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X