CSK: ಸತತ ಸೋಲಿನಿಂದ ಕಂಗೆಟ್ಟಿರುವ ಸಿಎಸ್‌ಕೆ ತಂಡಕ್ಕೆ ಅನಿಲ್ ಕುಂಬ್ಳೆ ಮಹತ್ವದ ಸಲಹೆ
2025ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತಿರುವ ಸಿಎಸ್‌ಕೆ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಸಿಎಸ್‌ಕೆ ಇನ್ನೂ 5 ಪಂದ್ಯಗಳನ್ನು ಆಡಲಿದೆ. ತಂಡದಲ್ಲಿ ಬದಲಾವಣೆ ಮಾಡಲು ಮತ್ತು ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಮುಂದಿನ ಆವೃತ್ತಿಗಾಗಿ ಸಿದ್ಧತೆ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ.
ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಿಎಸ್‌ಕೆ ತಂಡಕ್ಕೆ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಐದು ವಿಕೆಟ್‌ಗಳಿಂದ ಸೋಲು ಕಂಡ ಬಳಿಕ ತಂಡದಲ್ಲಿ ಸಾಕಷ್ಟು ಸಮಸ್ಯೆಯಿದೆ ಎಂದು ಹೇಳಿದ್ದಾರೆ.

ಉಳಿದ ಪಂದ್ಯಗಳಲ್ಲಿ ತಂಡದ ಸಂಯೋಜನೆ ಮತ್ತು ತಂತ್ರಗಳಲ್ಲಿ ಸುಧಾರಣೆ ಮಾಡುವತ್ತ ಗಮನಹರಿಸಬೇಕು ಎಂದು ಕುಂಬ್ಳೆ ಹೇಳಿದ್ದಾರೆ. ಸಿಎಸ್‌ಕೆ ಈಗ ಪ್ಲೇಆಫ್ ರೇಸ್‌ನಿಂದ ಹೊರಗಿದೆ, ಅವರು ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೂ ಸಹ ಪ್ಲೇಆಫ್‌ಗೆ ಹೋಗುವ ಸಾಧ್ಯತೆ ಬಹುತೇಕ ಇಲ್ಲವಾಗಿದೆ.
ಸಿಎಸ್‌ಕೆ ತಂಡದಲ್ಲಿರುವ ಸಮಸ್ಯೆಗಳೇನು?
ತಂಡದ ಆರಂಭಿಕ ಆಟಗಾರ ಡಿವೋನ್ ಕಾನ್ವೇ ಅವರ ಪ್ರಸ್ತುತ ಫಾರ್ಮ್ ಕುಸಿತದ ಹೊರತಾಗಿಯೂ, ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಅವರಂತೆ ಉತ್ತಮ ಆರಂಭ ನೀಡುವ ಜೋಡಿ ಬೇಕಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ. ರುತುರಾಜ್ ಮತ್ತು ಡೆವೊನ್ ಕಾನ್ವೇ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೂ ಆವೃತ್ತಿಯ ಆರಂಭದಲ್ಲಿ ಒಟ್ಟಿಗೆ ಆರಂಭಿಸಬೇಕಿತ್ತು. ಈ ಜೋಡಿ ಕೆಲವು ವರ್ಷಗಳ ಹಿಂದೆ ಸಿಎಸ್‌ಕೆ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದಿದ್ದಾರೆ.
ಸಿಎಸ್‌ಕೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ರಚಿನ್ ರವೀಂದ್ರ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂದು ಹೇಳಿದ್ದಾರೆ. ರಚಿನ್ ರವೀಂದ್ರ ಸಾಮರ್ಥ್ಯ ಇರುವ ಆಟಗಾರ, ಆದರೆ ಟಿ20 ಮಾದರಿಯಲ್ಲಿ ಅವರು ಆತುರಪಡುತ್ತಾರೆ ಎಂದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ಆಡಿದರೆ ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಬಳಿಕ ದೊಡ್ಡ ಹೊಡೆತಗಳಿಗೆ ಹೋಗಬಹುದು ಎಂದಿದ್ದಾರೆ.
ಮಧ್ಯಮ ಕ್ರಮಾಂಕದ ಸಮಸ್ಯೆಗಳ ಬಗ್ಗೆ ಮಾತನಾಡಿರುವಾ ಅವರು, ಶಿವಂ ದುಬೆ ಅವರನ್ನು ಹೊರತುಪಡಿಸಿದರೆ ಸ್ಫೋಟಕ ಬ್ಯಾಟರ್ ಗಳ ಕೊರತೆ ಇದೆ ಎಂದಿದ್ದಾರೆ. ಡೆವಾಲ್ಡ್ ಬ್ರೆವಿಸ್ ಮತ್ತು ಆಯುಷ್ ಮ್ಹಾತ್ರೆ ತಂಡಕ್ಕೆ ಸೇರಿರುವುದು ಉತ್ತಮ ನಿರ್ಧಾರ ಎಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ, ಮಥೀಷ ಪತಿರಾನ ಅವರನ್ನು ಮೀರಿ ಬೇರೆ ಆಯ್ಕೆಗಳನ್ನು ಪರಿಗಣಿಸುವಂತೆ ಡೆತ್ ಬೌಲಿಂಗ್‌ನಲ್ಲಿ ನಾಥನ್ ಎಲಿಸ್‌ಗೆ ಹೆಚ್ಚು ನಿಯಮಿತ ಪಾತ್ರವನ್ನು ನೀಡುವುದನ್ನು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ. ನಾಥನ್ ಎಲಿಸ್ ಒಬ್ಬ ಅನುಭವಿ ಡೆತ್ ಬೌಲರ್, ಅವರು ಮೊದಲು ಬೌಲಿಂಗ್ ಮಾಡಿದ್ದಾರೆ, ಆದರೆ ಮೊದಲ ಪಂದ್ಯದ ನಂತರ ಸ್ಥಾನ ಸಿಕ್ಕಿಲ್ಲ ಎಂದರು.
ಸಿಎಸ್‌ಕೆ ಉಳಿದ ಐದು ಪಂದ್ಯಗಳಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಮೂಲಕ ಅವರಿಗೆ ಆತ್ಮವಿಶ್ವಾಸ ಹೆಚ್ಚುವಂತೆ ನೋಡಿಕೊಳ್ಳಬೇಕು. ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಇದು ಅಗತ್ಯವಾಗಿದೆ ಎಂದಿದ್ದಾರೆ.












Click it and Unblock the Notifications