RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ
Ananya Birla RCB Post Viral: ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿವೆ. ಈ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ ಆರ್ಯಮನ್ ವಿಕ್ರಮ್ ಬಿರ್ಲಾ ಅವರ ಸಹೋದರಿ ಅನನ್ಯಾ ಬಿರ್ಲಾ ಅವರು ವಿಶೇಷ ಪೋಸ್ಟ್ ಹಂಚಿಕೊಂಡು ಕನ್ನಡ ಅಭಿಮಾನಿಗಳ ಮನಸು ಗೆದ್ದಿದ್ದಾರೆ. ಇದು ಇದೀಗ ಭಾರೀ ವೈರಲ್ ಆಗುತ್ತಿದೆ.
ಆರ್ಸಿಬಿ ತಂಡದ ಹೊಸ ಮಾಲೀಕತ್ವದ ಭಾಗವಾಗಿರುವ ಅನನ್ಯಾ ಬಿರ್ಲಾ ಅವರು ಆರ್ಸಿಬಿ ಕುರಿತ ಸ್ಕೆಚ್ವೊಂದನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಕಲಾವಿದ ಅಮಿತ್ ಮಾಲೆ ಅವರು ಬಿಡಿಸಿರುವ ಈ ಚಿತ್ರದಲ್ಲಿ ಅರ್ಧ ಭಾಗ ಅನನ್ಯಾ ಬಿರ್ಲಾ ಅವರ ಮುಖ ಮತ್ತು ಇನ್ನರ್ಧ ಭಾಗ ಆರ್ಸಿಬಿ ಹೆಲ್ಮೆಟ್ ಧರಿಸಿದ ಮುಖವನ್ನು ಬಹಳ ಸುಂದರವಾಗಿ ಸಂಯೋಜಿಸಲಾಗಿದೆ.

ಆರ್ಸಿಬಿ ಹೆಸರು ಬದಲಾವಣೆ ವದಂತಿಗಳಿಗೆ ತೆರೆ
ಇತ್ತೀಚೆಗಷ್ಟೇ ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಆರ್ಸಿಬಿ ಫ್ರಾಂಚೈಸಿಯನ್ನು ಸುಮಾರು $1.78 ಬಿಲಿಯನ್ (₹16,700 ಕೋಟಿ) ಮೊತ್ತಕ್ಕೆ ಖರೀದಿಸಿದೆ. ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಈ ಮಾಲೀಕತ್ವದ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದಾರೆ. ಖರೀದಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಆರ್ಸಿಬಿ ಹೆಸರು ಬದಲಾವಣೆ ಆಗುತ್ತದೆ ಎನ್ನುವ ವದಂತಿಗಳು ಹಬ್ಬಿದ್ದವು. ಇದಕ್ಕೆ ಅನನ್ಯಾ ಅವರು ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
'ಆರ್ಸಿಬಿ ಹೆಸರು ಬದಲಾವಣೆ ಇಲ್ಲ
ತಂಡದ ಮಾಲೀಕತ್ವ ಬದಲಾದ ತಕ್ಷಣ "ರಾಯಲ್ ಚಾಲೆಂಜರ್ಸ್ ಬೆಂಗಳೂರು" ಎಂಬ ಹೆಸರನ್ನು ಬದಲಾಯಿಸಲಾಗುತ್ತದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅನನ್ಯಾ ಬಿರ್ಲಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕನ್ನಡದ ಪ್ರಸಿದ್ಧ ಸ್ಲೋಗನ್ "ಈ ಸಲ ಕಪ್ ನಮ್ದು" (Ee Sala Cup Namdu) ಎಂದು ಬರೆಯುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಅನನ್ಯಾ ಅವರ ಸಹೋದರ ಮತ್ತು ಮಾಜಿ ಕ್ರಿಕೆಟಿಗ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಆರ್ಸಿಬಿ ತಂಡದ ನೂತನ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನೂ ಅನನ್ಯಾ ಹಂಚಿಕೊಂಡಿರುವ ಈ ಸ್ಕೆಚ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದು ಹೊಸ ಮಾಲೀಕತ್ವಕ್ಕೆ ಅಭಿಮಾನಿಗಳು ನೀಡುತ್ತಿರುವ ಸ್ವಾಗತದ ಸಂಕೇತವಾಗಿದೆ. ಅನನ್ಯಾ ಬಿರ್ಲಾ ಅವರು ಕೇವಲ ಉದ್ಯಮಿಯಷ್ಟೇ ಅಲ್ಲದೆ, ಪ್ರಸಿದ್ಧ ಗಾಯಕಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಅವರು ತಂಡದೊಂದಿಗೆ ಸೇರಿಕೊಂಡಿರುವುದು ಆರ್ಸಿಬಿ ಬ್ರ್ಯಾಂಡ್ ಮೌಲ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.
-
ಚಿನ್ನಸ್ವಾಮಿಯಲ್ಲಿ ಕನ್ನಡಿಗ ದೇವ್, ವಿರಾಟ್ ಅಬ್ಬರದ ಬ್ಯಾಟಿಂಗ್: ಆರ್ಸಿಬಿ ವಿರುದ್ಧ ಎಸ್ಆರ್ಎಚ್ ಹೀನಾಯು ಸೋಲು -
MI Vs KKR: 14 ವರ್ಷಗಳ ಬಳಿಕ ಹೊಸ ಇತಿಹಾಸ ಬರೆದ ಮುಂಬೈ ಇಂಡಿಯನ್ಸ್; ಕೆಕೆಆರ್ ವಿರುದ್ಧ ಭರ್ಜರಿ ಜಯ -
IPL 2026 RCB Vs SRH: ಎಸ್ಆರ್ಎಚ್ನಿಂದ 13,00,00,000 ರೂಪಾಯಿ ಮೌಲ್ಯದ ಸ್ಟಾರ್ ಆಟಗಾರ ಔಟ್ -
RCB Vs SHR: ಚಿನ್ನಸ್ವಾಮಿಯಲ್ಲಿ ಎಸ್ಆರ್ಎಚ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಸಿಎಸ್ಕೆ ಕಪ್ 5 ರೂಪಾಯಿ, ಆರ್ಸಿಬಿ ಟ್ರೋಫಿ ಬೆಲೆ 5 ಕೋಟಿ ರೂಪಾಯಿ: ಪುಟ್ಟ ಬಾಲಕನ ಹೇಳಿಕೆ ಭಾರೀ ವೈರಲ್ -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
IPL 2026: RCB ಫ್ಯಾನ್ಸ್ಗಾಗಿ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ, ಎಲ್ಲಿಂದ ಎಲ್ಲಿಗೆ? ಮಾರ್ಗ ಡಿಟೇಲ್ಸ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ









Click it and Unblock the Notifications