ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಿಂದ ಅಮೆಜಾನ್ ಹೊರಕ್ಕೆ

|
Google Oneindia Kannada News

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಗಳ ನೇರಪ್ರಸಾರದ ಹಕ್ಕುಗಳಿಗಾಗಿ ಬಿಡ್ ಮಾಡುವ ನಿರ್ಧಾರದಿಂದ ಅಮೆಜಾನ್ ಸಂಸ್ಥೆ ಹಿಂದೆ ಸರಿದಿದೆ. ಹರಾಜಿನಲ್ಲಿ ತೀವ್ರ ಪೈಪೋಟಿ ನೀಡುತ್ತದೆ ಎಂದೇ ನಿರೀಕ್ಷಿಸಿದ್ದ ಅಮೆಜಾನ್‌ನ ಈ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಮೆಜಾನ್ ಈಗಾಗಲೇ ಭಾರತದಲ್ಲಿ 6 ಶತಕೋಟಿ ಡಾಲರ್‍‌ಗಿಂತ ಹೆಚ್ಚಿನ ಹೂಡಿಕೆ ಮಾಡಿದ್ದರೆ, ನೇರಪ್ರಸಾರದ ಹಕ್ಕುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

IPL 2022 Final : ಮೋದಿ ಸ್ಟೇಡಿಯಂ ತುಂಬಿದ ಪ್ರೇಕ್ಷಕರು, ಹೊಸ ದಾಖಲೆIPL 2022 Final : ಮೋದಿ ಸ್ಟೇಡಿಯಂ ತುಂಬಿದ ಪ್ರೇಕ್ಷಕರು, ಹೊಸ ದಾಖಲೆ

2023 ರಿಂದ 2027ರವರೆಗೆ ಐಪಿಎಲ್ ಪ್ರಸಾರ ಹಕ್ಕಿಗಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ಅಮೆಜಾನ್ ಹೇಳಿಕೊಂಡಿತ್ತು. ಅಮೆಜಾನ್ ಹಿಂದೆ ಸರಿದಿರುವುದರಿಂದ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ., ಸೋನಿ ಮತ್ತು ವಾಲ್ಟ್ ಡಿಸ್ನಿ ನಡುವೆ ಪ್ರತಿಸ್ಪರ್ಧೆ ಏರ್ಪಡಲಿದೆ.

ಈ ವಿಚಾರದ ಬಗ್ಗೆ ಅಮೆಜಾನ್‌ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆಜಾನ್ ಅನಿರೀಕ್ಷಿತವಾಗಿ ಹಿಂದೆ ಸರಿಯುತ್ತಿರುವುದು ರಿಲಯನ್ಸ್, ಡಿಸ್ನಿ ಮತ್ತು ಸೋನಿ ಗ್ರೂಪ್‌ಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಬಿಡ್ಡಿಂಗ್‌ ಪ್ರಸಾರ ಹಕ್ಕುಗಳ ಬೆಲೆ 7.7 ಬಿಲಿಯನ್ ಡಾಲರ್ ಅಂದರೆ ಅಂದಾಜು 60 ಸಾವಿರ ಕೋಟಿವರೆಗೆ ಹರಾಜಾಗುವ ಲೆಕ್ಕಾಚಾರ ಮಾಡಲಾಗಿತ್ತು

 ಹಲವು ಕಂಪನಿಗಳ ನಡುವೆ ಸ್ಪರ್ಧೆ

ಹಲವು ಕಂಪನಿಗಳ ನಡುವೆ ಸ್ಪರ್ಧೆ

ಡಿಸ್ನಿ ಸ್ಟಾರ್, ಸೋನಿ, ಜೀ ಮತ್ತು ರಿಲಯನ್ಸ್ ಕಂಪನಿಗಳು ಐಪಿಎಲ್ ಬಿಡ್ಡಿಂಗ್‌ಗಾಗಿ ಪೈಪೋಟಿ ನಡೆಸಲಿವೆ. ಆನ್‌ಲೈನ್ ಮಾಧ್ಯಮದ ಮೂಲಕ ಭಾರತೀಯ ಗ್ರಾಹಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಐಪಿಎಲ್ ಸಹಾಯ ಮಾಡಲಿದೆ.

140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಕ್ರಿಕೆಟ್‌ಗೆ ಧರ್ಮದ ಸ್ಥಾನ ಹೊಂದಿದೆ. ಅದರಲ್ಲೂ ಐಪಿಎಲ್ ಎಂದರೆ ಭಾರತದಲ್ಲಿ ಹಬ್ಬ ಎಂದೇ ಭಾವಿಸುತ್ತಾರೆ. ವೀಕ್ಷಕರನ್ನು ತನ್ನೆಡೆ ಸೆಳೆಯಲು, ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲು ನೇರ ಪ್ರಸಾರ ಹಕ್ಕು ಮುಖ್ಯ ಎನ್ನಲಾಗಿದೆ.

 ಫುಟ್ಬಾಲ್ ನಂತರ ಜಗತ್ತಿನ ಜನಪ್ರಿಯ ಲೀಗ್

ಫುಟ್ಬಾಲ್ ನಂತರ ಜಗತ್ತಿನ ಜನಪ್ರಿಯ ಲೀಗ್

ಎರಡು ತಿಂಗಳು ನಡೆಯುವ ಐಪಿಎಲ್ ಪಂದ್ಯಾವಳಿ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತದೆ. ವಿದೇಶಿ ಆಟಗಾರರನ್ನು ಒಳಗೊಂಡ ಹತ್ತು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತವೆ. ಪ್ರತಿ ಪಂದ್ಯ ಮೂರು ಗಂಟೆಗಳ ಕಾಲ ನಡೆಯುತ್ತದೆ.

ಸಾಂಪ್ರದಾಯಿಕ ಐದು-ದಿನದ ಟೆಸ್ಟ್ ಕ್ರಿಕೆಟ್‌ಗೆ ಹೋಲಿಸಿದರೆ ಟಿ-20 ಪಂದ್ಯ ಸಂಕ್ಷಿಪ್ತ ಮತ್ತು ಹೆಚ್ಚು ಮನರಂಜನೆಯ ಸ್ವರೂಪವಾಗಿದೆ. ಅರ್ಧ-ಶತಕೋಟಿಗೂ ಹೆಚ್ಚು ವೀಕ್ಷಕರನ್ನು ಸೆಳೆಯುವ ವಾರ್ಷಿಕ ಐಪಿಎಲ್ ಪಂದ್ಯಾವಳಿಯು ಇಂಗ್ಲಿಷ್ ಫುಟ್ಬಾಲ್ ಲೀಗ್ ಮತ್ತು ರಾಷ್ಟ್ರೀಯ ಫುಟ್‌ಬಾಲ್ ಲೀಗ್ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಟೂರ್ನಿಯಾಗಿದೆ.

 16,347 ಕೋಟಿ ನೀಡಿದ್ದ ಸ್ಟಾರ್ ಇಂಡಿಯಾ

16,347 ಕೋಟಿ ನೀಡಿದ್ದ ಸ್ಟಾರ್ ಇಂಡಿಯಾ

ಐಪಿಎಲ್ ಪ್ರಸಾರ ಹಕ್ಕು 2008-2017ರವರೆಗೆ ಸುಮಾರು 78,200 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ನಂತರ 2018ರಿಂದ 22ರವರೆಗಿನ ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕು ಸುಮಾರು 16,347 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದವು. 5 ವರ್ಷಗಳ ನೇರಪ್ರಸಾರ ಹಕ್ಕಿಗಾಗಿ ಸ್ಟಾರ್ ಇಂಡಿಯಾ 16,347 ಕೋಟಿ ರುಪಾಯಿ ಪಾವತಿ ಮಾಡಿತ್ತು. ಇದೀಗ ಸುಮಾರು 50 ಸಾವಿರ ಕೋಟಿ ರೂ. ಮೊತ್ತಕ್ಕೆ ನೇರಪ್ರಸಾರ ಹಕ್ಕು ಮಾರಾಟವಾಗುವ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ.

 ಇದೇ ಮೊದಲ ಬಾರಿಗೆ ಇ-ಹರಾಜು

ಇದೇ ಮೊದಲ ಬಾರಿಗೆ ಇ-ಹರಾಜು

ಇದೇ ಮೊದಲ ಬಾರಿಗೆ ಬಿಸಿಸಿಐ ಇ-ಹರಾಜು ಮೂಲಕ ಬಿಡ್ಡಿಂಗ್ ನಡೆಸಲು ನಿರ್ಧರಿಸಿದೆ. ಜೂನ್ 12, ಭಾನುವಾರ ಬೆಳಿಗ್ಗೆ 11 ಗಂಟೆಗೆ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಕೊನೆಯಾಗಲು ಅಂತಿಮ ದಿನಾಂಕ ನಿಗದಿಯಾಗಿಲ್ಲ. ಬಿಡ್‌ಗಳು ಖಾಲಿಯಾಗುವವರೆಗೆ ಹರಾಜು ಪ್ರಕ್ರಿಯೆ ಮುಂದುವರೆಯಲಿದೆ.

ಐಪಿಎಲ್ ಪ್ರಸಾರದ ಹಕ್ಕನ್ನು ನೀಡಲು ನಾಲ್ಕು ಪ್ಯಾಕೇಜ್‌ನಲ್ಲಿ ನೀಡಲಾಗಿದೆ. ಎ, ಬಿ,ಸಿ ಮತ್ತು ಡಿ ಪ್ಯಾಕೇಜ್ ಎಂದು ವಿಂಗಡಿಸಲಾಗಿದೆ. ಎ ಪ್ಯಾಕೇಜ್ ಎಂದರೆ ಭಾರತದಲ್ಲಿ ಮಾತ್ರ ಟಿವಿ ಪ್ರಸಾರಕ್ಕಾಗಿ ಹಕ್ಕುಗಳನ್ನು ನೀಡುವುದು. ಬಿ ಪ್ಯಾಕೇಜ್‌ನಲ್ಲಿ ಭಾರತದಲ್ಲಿ ಡಿಜಿಟಲ್ ಪ್ರಸಾರಕ್ಕಾಗಿ ಹಕ್ಕುಗಳನ್ನು ನೀಡುತ್ತದೆ. ಸಿ ಪ್ಯಾಕೇಜ್ ಭಾರತದಲ್ಲಿ ಪ್ಲೇ ಆಫ್ ಸೇರಿದಂತೆ ಪಂದ್ಯಗಳ ಪ್ರಸಾರಕ್ಕಾಗಿ ಹಕ್ಕುಗಳನ್ನು ಒಳಗೊಂಡಿದೆ. ಇನ್ನು ಡಿ ಪ್ಯಾಕೇಜ್‌ನಲ್ಲಿ ಪ್ರಪಂಚದ ಇತರೆ ಭಾಗಗಳಿಗೆ ಟಿವಿ ಮತ್ತು ಡಿಜಿಲಟ್ ಪ್ರಸಾರಕ್ಕಾಗಿ ಹಕ್ಕುಗಳನ್ನು ಒಳಗೊಂಡಿದೆ.

(ಒನ್ಇಂಡಿಯಾ ಸುದ್ದಿ)

English summary
Amazon has backed down from its decision to bid for Indian Premier League (IPL) cricket live streaming rights. This move by Amazon, which was expected to be a fierce competition at the auction, surprised everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X