ಅಹಮದಾಬಾದ್ ವಿಮಾನ ದುರಂತ: ಕ್ರಿಕೆಟ್ ಆಟಗಾರರ ಸಂತಾಪ
ಗುರುವಾರ ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ದುರ್ಘಟನೆ ಸಂಭವಿಸಿದೆ. ಏರ್ ಇಂಡಿಯಾ ಸಂಸ್ಥೆಗೆ ವಿಮಾನ ಸಂಖ್ಯೆ AI-171 ಅಹಮದಾಬಾದ್‌ನಿಂದ ಮಧ್ಯಾಹ್ನ 1.38ಕ್ಕೆ ಹಾರಾಟ ನಡೆಸಿತು. ಆದರೆ ಟೇಕ್ ಆಫ್ ಆಗುವ ವೇಳೆ ವಿಮಾನ ಅಪಘಾತಕ್ಕೆ ಈಡಾಯಿತು. ಈ ವಿಮಾನ ಸುಮಾರು 242 ಜನರನ್ನು ಹೊತ್ತು ಹೊರಟಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ವಿಮಾನ ನಿಲ್ದಾಣವನ್ನು ಬಿಟ್ಟ 10 ನಿಮಿಷದ ಒಳಗೆ ವಿಮಾನ ದುರ್ಘಟನೆ ಸಂಭವಿಸಿದೆ.
ವಿಮಾನದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಚಲಾಯಿಸುತ್ತಿದ್ದರು. ಇವರು ಸುಮಾರು 8,250 ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ. ಇವರೊಂದಿಗೆ ಇದ್ದ ಸಹ-ಪೈಲಟ್ ಕ್ಲೈವ್ ಕುಂದರ್ 1,000 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ಮಾಡಿದ ಅನುಭವ ಹೊಂದಿದ್ದರು. ಆದರೆ ಈ ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ದುರಂತ ಸಂಭವಿಸಿದೆ. ವಿಮಾನ ಟೇಕ್ ಆಫ್ ಆದ ತಕ್ಷಣ, ಕ್ಯಾಪ್ಟನ್‌ಗೆ ವಿಮಾನದಲ್ಲಿನ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ಇದಕ್ಕೆ ಸರಿಯಾದ ಸ್ಪಂದನೆ ಸಿಗದ ಕಾರಣ ವಿಮಾನ ದುರಂತಕ್ಕೆ ಈಡಾಗಿದೆ. ಆದರೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನು ನಿಖರವಾಗಿ ಹೊರ ಬಂದಿಲ್ಲ.

ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗುವ ಮುನ್ನ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ, ವಿಮಾನ ಮೊದಲು ಒಂದು ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಕಟ್ಟಡಕ್ಕೆ ಬಡೆದಿದೆ.
Breaking!🚨
— 𝗩eena Jain (@DrJain21) June 12, 2025
Nationality of Passengers travelling in crashed plane in Ahmedabad, confirmed by Air India
169 Indian nationals
53 British nationals
1 Canadian national
7 Portuguese nationals
The worst air crash in recent times 😑#planecrash #Boeing pic.twitter.com/yLlk6XQQcg
ಕ್ರಿಕೆಟ್ ಆಟಗಾರರ ಸಂತಾಪ
ಈ ದುರಂತದ ಬಗ್ಗೆ ಕ್ರಿಕೆಟ್ ಆಟಗಾರರು ಸಮಾಜಿಕ ತಾಣದಲ್ಲಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಈ ಅಪಘಾತದ ಬಗ್ಗೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದು, ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದು ನನಗೆ ತೀವ್ರ ಆಘಾತ ಹಾಗೂ ದುಃಖವಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸಂತಾಪಗಳು. ಈ ದುರ್ಘಟನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇದರಲ್ಲಿ ಅಪಘಾತಾಕ್ಕಿಡಾದ ಸಂತ್ರಸ್ತರಿಗೆ ಶಕ್ತಿ, ಧೈರ್ಯ ಹಾಗೂ ಬೆಂಬಲ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸಹ ಸಾಮಾಜಿಕ ತಾಣದಲ್ಲಿ ತಮ್ಮ ದುಃಖವನ್ನು ಹೊರ ಹಾಕಿದ್ದಾರೆ. ಇಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಿಂದ ತುಂಬಾ ದುಃಖವಾಗಿದೆ. ಪ್ರಯಾಣಿಕರು, ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ನಾನು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬರೆದಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಸಹ ತಮ್ಮ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ದುರ್ಘಟನೆ ನೋವು ತಂದಿದೆ. 'ಮೇಘನಿ ಬಳಿ ಅಪಘಾತದಿಂದ ಹಾನಿಗೊಳಗಾದ ಎಲ್ಲರಿಗೂ ನನ್ನ ಸಂತಾಪ. ಅವರ ಕುಟುಂಬಕ್ಕೆ ನಾನು ಶಕ್ತಿ ಮತ್ತು ಪ್ರಾರ್ಥನೆಗಳನ್ನು ಬಯಸುತ್ತೇನೆ ಎಂದು ಶಿಖರ್ ಧವನ್ ಬರೆದುಕೊಂಡಿದ್ದಾರೆ.












Click it and Unblock the Notifications