ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್... AB de Villiers

ಆರ್‌ಸಿಬಿ ಅಂದ್ರೆ ನಮ್ಮ ಬೆಂಗಳೂರು ಐಪಿಎಲ್ ತಂಡ ಬೇರೆ ಅಲ್ಲ, ಕನ್ನಡಿಗರ ಕ್ರಿಕೇಟ್ ಪ್ರೀತಿ ಬೇರೆ ಅಲ್ಲ. ಯಾಕಂದ್ರೆ ಕಳೆದ 18 ವರ್ಷಗಳಿಂದ ಒಂದೇ ಒಂದು ಬಾರಿಯೂ ಕಪ್ ಗೆಲ್ಲದೇ ಹೋಗಿದ್ದರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡವನ್ನು ಬಿಟ್ಟುಕೊಟ್ಟಿಲ್ಲ. ಇನ್ನು 1000 ವರ್ಷ ಕಳೆದರೂ ಕನ್ನಡಿಗರು ಆರ್‌ಸಿಬಿ ತಂಡವನ್ನು ಬಿಟ್ಟುಕೊಡಲ್ಲ. ಅದರಲ್ಲೂ ನಮ್ಮ ಆರ್‌ಸಿಬಿ ತಂಡಕ್ಕಾಗಿ ಆಡಿ, ದೊಡ್ಡ ಹವಾ ಎಬ್ಬಿಸಿದ್ದ ಎಬಿ ಡೀ ವಿಲಿಯರ್ಸ್ ಬಗ್ಗೆ ಭಾರಿ ಕುತೂಹಲ ಮನೆಮಾಡಿತ್ತು....

ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್ ಅಂತಾನೇ ಅಭಿಮಾನಿಗಳು ಕರೆಯುತ್ತಿದ್ದರು. ಯಾಕಂದ್ರೆ ಅದೆಷ್ಟೋ ಸೋಲುವ ಮ್ಯಾಚ್‌ಗಳನ್ನ, ಬಾಯಿಗೆ ಬರಿಸಿದ್ದ ಪಂದ್ಯಗಳನ್ನ ಕೂಡ ಗೆಲ್ಲಿಸಿ ಕೊಟ್ಟಿರುವ ಕೀರ್ತಿ ಇದೇ ಎಬಿ ಡೀ ವಿಲಿಯರ್ಸ್ ಅವರಿಗೆ ಇತ್ತು. ಎಬಿ ಡೀ ವಿಲಿಯರ್ಸ್ ಬ್ಯಾಟ್ ಹಿಡಿದು ಫೀಲ್ಡ್‌ಗೆ ಎಂಟ್ರಿ ಕೊಟ್ಟರೆ ಸಾಕು, ಎದುರಾಳಿ ಬೌಲರ್‌ಗಳ ತೊಡೆ ನಡುಗಿ ಹೋಗುತ್ತಿತ್ತು. ಹೀಗಿದ್ದಾಗಲೇ, ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್...

AB de Villiers Surprise Visit Chances to The Royal Challengers Bengaluru Team

ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್...

ಹೌದು, ಪ್ರತಿಬಾರಿ ಐಪಿಎಲ್ ಟೂರ್ನಿ ಶುರುವಾದಾಗಲೂ 'ಈ ಸಲ ಕಪ್ ನಮ್ದೆ...' ಅಂತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಫ್ಯಾನ್ಸ್ ಕಡೆಯಿಂದ ಮತ್ತೊಂದು ಭರ್ಜರಿ ಸುದ್ದಿ ಸಿಗುತ್ತಿದೆ. ಅದು ಏನಪ್ಪಾ ಅಂದ್ರೆ, ಆರ್‌ಸಿಬಿ ತಂಡ 2025ರ ಐಪಿಎಲ್ ಕಪ್ ಎತ್ತುವುದು ಗ್ಯಾರಂಟಿ ಅಂತಾ. ಹೀಗಿದ್ದಾಗಲೇ, ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್...

ಎಬಿ ಡೀ ವಿಲಿಯರ್ಸ್... ಎಬಿ ಡೀ ವಿಲಿಯರ್ಸ್...

ಹೌದು, ಎಬಿ ಡೀ ವಿಲಿಯರ್ಸ್ & ವಿರಾಟ್ ಕೊಹ್ಲಿ ಇಬ್ಬರು ಇದ್ದರೆ ಸಾಕು 2025ರ ಐಪಿಎಲ್ ಕಪ್ ನಮ್ಮದೆ ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು. ಅದರಲ್ಲೂ ಬೆಂಗಳೂರಿನ ಭಗವಂತ ಅಂತಾ ಕರೆಸಿಕೊಳ್ಳುವ ಎಬಿ ಡೀ ವಿಲಿಯರ್ಸ್ ಕ್ರಿಕೆಟ್ ಅಖಾಡಕ್ಕೆ ವಾಪಸ್ ಬರುವ ಕುರಿತು ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿ ಮಾಡಿತ್ತು. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾ ತುಂಬಾ ಇದೀಗ ಭರ್ಜರಿ ಸುದ್ದಿಯೊಂದು ಹಬ್ಬಿದ್ದು, ಎಬಿ ಡೀ ವಿಲಿಯರ್ಸ್ ಅವರು ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ ಆಗಿದೆಯಂತೆ!

ಬೆಂಗಳೂರಿನ ಭಗವಂತ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್ ಅಂತಾ ಇದೀಗ ಸೋಷಿಯಲ್ ಮೀಡಿಯಾದ ತುಂಬಾ ಸುದ್ದಿ ಹಬ್ಬಿದೆ. ಅದರಲ್ಲೂ ಎಬಿ ಡೀ ವಿಲಿಯರ್ಸ್ ನಿವೃತ್ತಿ ವಾಪಸ್ ಪಡೆಯುವ ಬಗ್ಗೆ ನೀಡಿದ್ದ ಹೇಳಿಕೆ ಜೊತೆಗೆ ವಿಡಿಯೋ ಎಡಿಟ್ ಮಾಡಿ, ಇದೀಗ ಪೋಸ್ಟ್‌ಗಳನ್ನ ಹಾಕಲಾಗುತ್ತಿದೆ. ಆದರೆ ಈವರೆಗೂ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್ ಬರುವ ಬಗ್ಗೆ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಆರ್‌ಸಿಬಿ ತಂಡವೇ ಆಗಿರಲಿ & ಆರ್‌ಸಿಬಿ ಆಡಳಿತವೇ ಆಗಿರಲಿ ಎಬಿ ಡೀ ವಿಲಿಯರ್ಸ್ ಆರ್‌ಸಿಬಿ ತಂಡಕ್ಕೆ ವಾಪಸ್ ಬರುವ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಕುತೂಹಲ ಕೂಡ ದುಪ್ಪಟ್ಟಾಗಿದೆ....

ಮಳೆ.. ಮಳೆ.. ಭಾರಿ ಮಳೆ!

ಪಶ್ಚಿಮ ಬಂಗಾಳದ ರಾಜಧಾನಿ ಕಲ್ಕತ್ತಾ ನಗರದಲ್ಲಿ ಇಂದು ಆರ್‌ಸಿಬಿ & ಕೆಕೆಆರ್ ನಡುವಿನ ಮ್ಯಾಚ್ ನಡೆಯಲಿದೆ. ಆದರೆ ಮಳೆಯಿಂದ ಆರ್‌ಸಿಬಿ & ಕೆಕೆಆರ್ ಪಂದ್ಯ ಕ್ಯಾನ್ಸಲ್ ಅಂತಾ ಇದೀಗ ಸುದ್ದಿ ಹಬ್ಬಿದೆ. ಅಷ್ಟಕ್ಕೂ ಈ ಸುದ್ದಿ ಹಬ್ಬಲು ಕಾರಣವಾಗಿರುವುದು ಮಳೆ ಮೋಡಗಳ ಅಟ್ಟಹಾಸ, ಭಾರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಇದೀಗ ಕಲ್ಕತ್ತಾ ನಗರ ಒದ್ದೆಯಾಗಿದೆ. ಅಲ್ಲದೆ ಮ್ಯಾಚ್ ಶುರುವಾಗುವ ಸಮಯಕ್ಕೆ ಸರಿಯಾಗಿ ಅಂದ್ರೆ ಸಂಜೆ 7.30ರ ನಂತರ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಅಭಿಮಾನಿಗಳಿಗೆ ಭಯವೂ ಶುರು ಆಗಿದೆ. ಅಕಸ್ಮಾತ್ ಮಳೆ ಶುರುವಾದರೆ ಮ್ಯಾಚ್ ಶುರು ಮಾಡುವುದು ಕೂಡ ಅನುಮಾನವೇ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+