AB de Villiers: 'ಮನಸಿದ್ದರೆ ಮಾರ್ಗ' ಎಂದ ಎಬಿ ಡಿ ವಿಲಿಯರ್ಸ್
ಮಾಜಿ ಆರ್ ಸಿಬಿ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಕ್ರಿಕೆಟ್‌ನಿಂದ ದೂರವಿದ್ದರೂ ಆರ್ ಸಿಬಿ ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ.
ಬೆಂಗಳೂರಿನ ಮೇಲೆ ವಿಶೇಷ ಅಭಿಮಾನ ಹೊಂದಿರುವ ಎಬಿ ಡಿವಿಲಿಯರ್ಸ್ ಆರ್ ಸಿಬಿ ಅಭಿಮಾನಿಗಳನ್ನು ಕೂಡ ಅಷ್ಟೇ ಗೌರವದಿಂದ ಕಾಣುತ್ತಾರೆ. ಇತ್ತೀಚಿನ ಅವರ ವಿಡಿಯೋದಲ್ಲಿ ಕನ್ನಡದ ಪ್ರಸಿದ್ಧ ಮನಸಿದ್ದರೆ ಮಾರ್ಗ ಎನ್ನುವ ಗಾದೆಯನ್ನು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಯೂಟ್ಯೂಬ್ ಚಾನಲ್‌ನ 360 ಶೋ ಕಾರ್ಯಕ್ರಮದಲ್ಲಿ ಐಪಿಎಲ್ ಬಗ್ಗೆ ಮಾತನಾಡಿರುವ ಅವರು, ಆರ್ ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್ ಸಿಬಿ ಅತ್ಯುತ್ತಮ ಪ್ರದರ್ಶನ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಮನಸಿದ್ದರೆ ಮಾರ್ಗ ಎಂದು ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಮೃತಿ ಮಂಧಾನ ಪಡೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಂಜಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ ಜಗತ್ತಿನ ಕ್ರಿಕೆಟ್ ಆಗುಹೋಗುಗಳ ಬಗ್ಗೆ ಮಾತನಾಡಿದ್ದಾರೆ.
Pat Cummins is the new SRH captain. History for the Irish men as they clinch their first Test win. My school friend, Neil Wagner, makes takes a big step in his life. All that, and much more, in the latest #360Show. 🔁🏏⬇️
— AB de Villiers (@ABdeVilliers17) March 7, 2024
📺🔗: https://t.co/Ymo7jNRE46#CricketNews pic.twitter.com/1FJJweaRRy
ಬ್ಯಾಟಿಂಗ್ ಕೋಚ್ ಆಗ್ತಾರ?
2024ರ ಐಪಿಎಲ್ ಆರಂಭಕ್ಕೆ ಮುನ್ನ ಎಬಿ ಡಿವಿಲಿಯರ್ಸ್ ಮತ್ತೆ ಆರ್ ಸಿಬಿ ಪಾಳಯಕ್ಕೆ ಸೇರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನನ್ನನ್ನು ಸಂಪರ್ಕಿಸಿದ್ದು ಆರ್ ಸಿಬಿ ಆಟಗಾರರಿಗೆ ಬ್ಯಾಟಿಂಗ್ ಮಾರ್ಗದರ್ಶನ ನೀಡಲು ಕೇಳಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್‌ನಲ್ಲಿ ಎಬಿಡಿ ಕಾಮೆಂಟರಿ ಮಾಡಲಿದ್ದಾರೆ. ಅದಕ್ಕಾಗಿ ಮುಂಬೈಗೆ ಬರಲಿರುವ ಅವರು, ಬೆಂಗಳೂರಿಗೆ ಭೇಟಿ ನೀಡಿ ಆರ್ ಸಿಬಿ ಆಟಗಾರರ ಜೊತೆ ಕಾಲ ಕಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಕುಟುಂಬದ ಜೊತೆ ಕಾಲ ಕಳೆದಿರುವ ವಿರಾಟ್ ಕೊಹ್ಲಿ ದೀರ್ಘ ಬ್ರೇಕ್ ಬಳಿಕ ಮರಳಲಿದ್ದು, ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications