AB de Villiers: ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಬಗ್ಗೆ Mr.360 ಎಬಿ ಡೀ ವಿಲಿಯರ್ಸ್ ಹೇಳಿದ್ದಿಷ್ಟು
ಟಿ-20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಟ್ರೋಪಿ ತನ್ನ ಮೂಡಿಗೇರಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ಹಿಡಿದ ಆ ಅದ್ಭುತ ಕ್ಯಾಚ್ ಟೀಂ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಹಾಗೆಯೇ ಇದೀಗ Mr.360 ಅಂತಲೇ ಖ್ಯಾತಿಯಾಗಿರುವ ದಕ್ಷಿಣ ಆಫ್ರಿಕಾ ತಂಡದ ಕ್ರಿಕೇಟಿಗ ಎಬಿ ಡೀ ವಿಲಿಯರ್ಸ್ ಕೂಡ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಫೈನಲ್‌ನಲ್ಲಿ ಗೆಲುವು ಸಾಧಿಸಿದ ತಂಡಗಳ ಮೇಲೆ ಆರೋಪಗಳು ಕೇಳುಬರುತ್ತಲೇ ಇರುತ್ತವೆ. ಹಾಗೆಯೇ ಸೂರ್ಯಕುಮಾರ್ ಯಾದವ್ ಅವರು ಕ್ಯಾಚ್ ಹಿಡಿದು ಮಿಲ್ಲರ್ ಔಟ್‌ಗೆ ಪ್ರಮುಖ ಪಾತ್ರವಹಿಸಿದ್ದು, ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಫೈನಲ್‌ನಲ್ಲಿ ಗೆಲುವು ಸಾಧಿಸಿತ್ತು. ಇನ್ನು ಈ ಬಗ್ಗೆ ಇದೀಗ ಸಾಮಾಜಿಕ ಜಾಲಾತಣಗಳಲ್ಲಿ ಚರ್ಚೆಗಳು ನಡೆಯುತ್ತಿದೆ.

ಬಹುತೇಕರು ಸೂರ್ಯಕುಮಾರ್ ಯಾದವ್ ಹಿಡಿದ ಬಗ್ಗೆ ಹೊಗಳಿದರೆ, ಇನ್ನೂ ಕೆಲವೇ ಮಂದಿ ಮಾತ್ರ ಸೂರ್ಯಕುಮಾರ್ ಕ್ಯಾಚ್ ಹಿಡಿಯುವಾಗ ತಮ್ಮ ಕಾಲನ್ನು ಬೌಂಡರಿ ಲೈನ್ ಟಚ್ ಮಾಡಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಇದರ ನಡುವೆಯೇ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಬಿ ಡೀ ವಿಲಿಯರ್ಸ್ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯೋಣ ಬನ್ನಿ.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೊನೆಯ ಓವರ್‌ನಲ್ಲಿ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದು, 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ ಗೆದ್ದಿರುವುದು ಸಂತಸದ ವಿಚಾರವಾಗಿದೆ. ಒಂದು ಹಂತದಲ್ಲಿ ಫೈನಲ್ ಪಂದ್ಯವನ್ನ ಪ್ರಾರಂಭಿಕ ಸಮಯದಿಂದಲೂ ನೋಡಿಕೊಂಡು ಬಂದರೆ ಭಾರತ ಗೆಲ್ಲುವಂತಹ ಸಾಧ್ಯತೆ ಕಡಿಮೆಯಿತ್ತು.
ಆದರೆ ಬೌಲಿಂಗ್‌ಗೆ ಬಂದ ಬುಮ್ರಾ ಅವರ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ತಂಡ ಕೊನೇ ಕ್ಷಣದಲ್ಲಿ ಮತ್ತೆ ಪಂದ್ಯದಲ್ಲಿ ಕಂಬ್ಯಾಕ್ ಮಾಡುವುದಕೆ ಸಾಧ್ಯವಾಯಿತು. ನಂತರ ಬೌಲಿಂಗ್ ಮಾಡಿದ ಅರ್ಶದೀಪ್ ಸಿಂಗ್ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಮೂಲಕ ತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟರು.
ಕೊನೆಯ ಓವರ್ ಹಾರ್ದಿಕ್ ಪಾಂಡ್ಯ ಎಸೆದಿದ್ದು, ಈ ಓವರ್‌ನಲ್ಲಿ ಅವರು ಮೋಡಿಯನ್ನೇ ಮಾಡಿ ಸ್ಟ್ರೈಕ್‌ನಲ್ಲಿದ್ದ ಡೇವಿಡ್ ಮಿಲ್ಲರ್ ಅವರ ವಿಕೆಟ್ ಕಿತ್ತರು. ಆಗ ಭಾರತಕ್ಕೆ ಗೆಲುವಿನ ಭರವಸೆ 30% ಇದ್ದಿದ್ದು 99ಕ್ಕೆ ಬಂದಿತು. ಹಾರ್ದಿಕ್ ಪಾಂಡ್ಯ ಮಾಡಿದ ಬೌಲಿಂಗ್‌ನಲ್ಲಿ ಮಿಲ್ಲರ್ ಸೂರ್ಯಕುಮಾರ್ ಯಾದವ್ ಕೈಗೆ ಕ್ಯಾಚ್ ಕೊಟ್ಟು ನಿರಾಸೆಯಿಂದ ಪೆವಿಲಿಯನ್ ಅತ್ತ ಸಾಗಿದರು.
ಇನ್ನು ಮಿಲ್ಲರ್ ಹೊಡೆದ ಈ ಶಾಟ್ ಪಕ್ಕಾ ಸಿಕ್ಸ್ ಹೋಗುತ್ತದೆ ಅಂತಾ ಬಹುತೇಕ ಮಂದಿ ಅಂದುಕೊಂಡಿದ್ದರು. ಆದರೆ ಬೌಂಡರಿ ಲೈನ್‌ನಲ್ಲಿ ಸೂರ್ಯಕುಮಾರ್ ಹಿಡಿದ ಅದ್ಭುತ ಕ್ಯಾಚ್ ಪಂದ್ಯ ಗತಿಯನ್ನೇ ಬದಲಾಯಿಸಿಬಿಟ್ಟಿತು. ಆದರೆ ಅದಕ್ಕಿಂತಲೂ ವಿಶೇಷವಾಗಿ ಅವರು ಎಸೆದಂತಹ ಮೊದಲ ಎಸೆದಲ್ಲಿ ಸೂರ್ಯ ಕುಮಾರ್ ಯಾದವ್ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅನ್ನು ಬೌಂಡರಿ ಲೈನ್‌ನಲ್ಲಿ ಜಂಪ್ ಮಾಡಿ ಹಿಡಿದಿದ್ದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ಗೆಲ್ಲುವ ಹಾಗೆ ಮಾಡಿದೆ.
ಆದರೆ ಈ ಬಗ್ಗೆ ಇದೀಗ ಸಾಮಾಜಿಕ ಜಲಾತಾಣದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಬೌಂಡರಿ ಗೆರೆಯನ್ನು ಹಿಂದೆ ಸರಿಸಿದ ಕಾರಣಕ್ಕಾಗಿ ಈ ರೀತಿ ಆಯ್ತು ಎಂಬುದಾಗಿ ತುಂಬಾ ಜನರು ಮಾತನಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಎ.ಬಿ.ಡೀ ವಿಲಿಯರ್ಸ್ ಅವರು ಇದಕ್ಕಿಂತಲೂ ಮುಂಚೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಸೌತ್ ಆಫ್ರಿಕಾ ಬೌಲರ್ ಆಗಿರುವಂತಹ ನೋಕಿಯಾ ಬೌಂಡ್ರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಸ್ಲೈಡ್ ಮಾಡಿದ ಕಾರಣದಿಂದಾಗಿಯೇ ಅದು ಗೆರೆಗಿಂತ ಹಿಂದೆ ಹೋಯಿತು ಅನ್ನೋದಾಗಿ ಹೇಳಿದ್ದು ಭಾರತದ ಆಟದ ಬಗ್ಗೆ ಯಾವುದೇ ಪ್ರಶ್ನೆ ಎತ್ತುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಭಾರತ ತಂಡ ಇಲ್ಲಿ ಉತ್ತಮ ಪ್ರದರ್ಶನವನ್ನು ತೋರಿದೆ. ಆದೇ ಕಾರಣಕ್ಕಾಗಿ ವಿಶ್ವಕಪ್ ಗೆದ್ದಿದೆ ಎಂದು ಭಾರತದ ಪರವಾಗಿ ಎ.ಬಿ.ಡೀ ವಿಲಿಯರ್ಸ್ ಬ್ಯಾಟಿಂಗ್ ಮಾಡಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.












Click it and Unblock the Notifications