RCB: ಈ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಿ; ಆರ್‌ಸಿಬಿಗೆ ಮಾಜಿ ಕ್ರಿಕೆಟಿಗನ ಸಲಹೆ

ಐಪಿಎಲ್ 2025ರ ಆವೃತ್ತಿಗೆ ಮುನ್ನ ಮೆಗಾ ಹರಾಜು ನಡೆಯಲಿದ್ದು ಹಲವು ತಂಡಗಳು ಪ್ರಮುಖ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ. ಪ್ರಮುಖ ಆಟಗಾರರು ತಮ್ಮ ಹಳೆಯ ತಂಡದಿಂದ ಹೊರಬಂದು ಹೊಸ ತಂಡ ಸೇರುವ ಯೋಜನೆಯಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡ ಕಟ್ಟಲು ಯೋಜನೆ ರೂಪಿಸಿಕೊಂಡಿದೆ.

ಮೆಗಾ ಹರಾಜಿಗೆ ಮುನ್ನ ಎಲ್ಲಾ ತಂಡಗಳು ಆಟಗಾರರನ್ನು ಬಿಡುಗಡೆ ಮಾಡಬೇಕು. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುವ ಗೊಂದಲವಿದ್ದು, ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಗಬೇಕಿದೆ. ಈಗಿರುವ ಮಾಹಿತಿ ಪ್ರಕಾರ ಗರಿಷ್ಠ 5 ಆಟಗಾರರನ್ನು ತಂಡಗಳು ಉಳಿಸಿಕೊಳ್ಳಲು ಅವಕಾಶ ವಿದ್ದು, ಮೂವರು ಆಟಗಾರರನ್ನು ರೈಟ್ ಟು ಮ್ಯಾಚ್ (RTM) ಮೂಲಕ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಸಿಗುವ ಸಾಧ್ಯತೆ ಇದೆ.

Aakash Chopra Weighs in on RCB s IPL 2025 Retention Strategy

ಈ ನಡುವೆ ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಆರ್‌ಸಿಬಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾರನ್ನು ಬಿಡುಗಡೆ ಮಾಡಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿ ಎನ್ನುವಂತೆ ಆರ್ ಸಿಬಿ ನಾಯಕರಾಗಿರುವ ಫಾಫ್‌ ಡುಪ್ಲೆಸಿಸ್‌ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ.

ಆಕಾಶ್ ಚೋಪ್ರಾ ಹೇಳಿದ್ದೇನು?

ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳಲೇಬೇಕು, ಆದರೆ ಫಾಫ್ ಡುಪ್ಲೆಸಿಸ್ ಅವರನ್ನು ಮೂರು ವರ್ಷಗಳ ಕಾಲ ಉಳಿಸಿಕೊಳ್ಳಲು ಸಾಧ್ಯವೇ ಎನ್ನುವುದು ದೊಡ್ಡ ಪ್ರಶ್ನೆ, ಆದರೆ ಫಾಫ್‌ ಡುಪ್ಲೆಸಿಸ್ ಅವರನ್ನು ಮೂರು ವರ್ಷಗಳು ಉಳಿಸಿಕೊಳ್ಳುವುದು ಖಚಿತವಿಲ್ಲ ಎಂದರು.

ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ನಾನು ಬಯಸುತ್ತೇನೆ. ಸಿರಾಜ್ ಉತ್ತಮ ವೇಗದ ಬೌಲರ್ ಆಗಿದ್ದು, ಅವರು ತಂಡದಲ್ಲಿ ಇರಬೇಕು ಎಂದರು. ರಜತ್ ಪಾಟಿದಾರ್ ಅವರನ್ನು ಕೂಡ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ನಾನು ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಬಿಡುಗಡೆ ಮಾಡುತ್ತೇನೆ. ಮ್ಯಾಕ್ಸ್‌ವೆಲ್ ಉತ್ತಮ ಆಟಗಾರ, ಆದರೆ ಅವರು ಬೇರೊಂದು ತಂಡಕ್ಕೆ ಹೋದರೂ ಸಮಸ್ಯೆಯಿಲ್ಲ ಎಂದರು.

ವಿಲ್‌ ಜ್ಯಾಕ್ಸ್ ಕೂಡ ಉತ್ತಮ ಆಲ್‌ರೌಂಡರ್, ಅವರನ್ನು ಉಳಿಸಿಕೊಳ್ಳುವುದು ಕೂಡ ಉತ್ತಮ ನಿರ್ಧಾರ. ಗ್ಲೆನ್ ಮ್ಯಾಕ್ಸ್‌ವೆಲ್ ಅಥವಾ ವಿಲ್‌ ಜ್ಯಾಕ್ಸ್ ನಡುವೆ ಯಾರನ್ನು ಉಳಿಸಿಕೊಳ್ಳಬೇಕು ಎಂದರೆ ವಿಲ್‌ ಜ್ಯಾಕ್ಸ್ ಉತ್ತಮ ಆಯ್ಕೆಯಾಗಲಿದ್ದಾರೆ.

ಆರ್‌ಸಿಬಿ ಮುಖ್ಯವಾಗಿ ಉತ್ತಮ ಬೌಲಿಂಗ್ ಪಡೆಯನ್ನು ಕಟ್ಟಲು ಯೋಜಿಸಬೇಕು. ವಿರಾಟ್ ಕೊಹ್ಲಿ ಇದ್ದೇ ಇದ್ದಾರೆ, ಅವರಿಗೆ ಪೂರಕವಾಗಿ ಬ್ಯಾಟಿಂಗ್ ಕ್ರಮಾಂಕ ಯೋಜಿಸಬೇಕು. ಮುಖ್ಯವಾಗಿ ಟಿ20 ಸ್ಪೆಷಲ್ ಬೌಲರ್ ಗಳು ತಂಡಕ್ಕೆ ಅಗತ್ಯ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+