1 ಲಕ್ಷ ಕೋಟಿ ಐಪಿಎಲ್ ಬ್ರ್ಯಾಂಡ್ ಮೌಲ್ಯ: ಇಲ್ಲಿದೆ ಇಂಟ್ರಸ್ಟಿಂಗ್ & ಆಘಾತಕಾರಿ ಮಾಹಿತಿ!

ಐಪಿಎಲ್ ಇತಿಹಾಸದಲ್ಲೇ ಭಾರೀ ದೊಡ್ಡ ದುರಂತ ಸಂಭವಿಸಿದೆ. ಇದರ ಬೆನ್ನಲ್ಲೇ ಐಪಿಎಲ್‌ನ ಕೋಟಿ ಕೋಟಿ.. ಬಂಡವಾಳ ಹಾಗೂ ಹಣದ ಚಕ್ರವ್ಯೂಹದ ಬಗ್ಗೆ ಭಾರೀ ಚರ್ಚೆ ನಡೆದಿದೆ. ಐಪಿಎಲ್ ಪ್ರಾರಂಭದಿಂದಲೂ ಇದರ ಬೆಟ್ಟಿಂಗ್ ದಂಧೆ ಹಾಗೂ ಕ್ರೀಡಾಪಟುಗಳ ಹರಾಜು ಪ್ರಕ್ರಿಯೆಯ ಬಗ್ಗೆ ಚರ್ಚೆಗಳು ನಡೆಯುತ್ತಲ್ಲೇ ಇವೆ. ಇದೀಗ ಆರ್‌ಸಿಬಿ ದುರಂತದ ಬಗ್ಗೆ ಹಾಗೂ ಐಪಿಎಲ್ ಮೌಲ್ಯದ ಬಗ್ಗೆ ಚರ್ಚೆ ನಡೆದಿದೆ. ಇದು ನಾವ್ಯಾರೂ ಅಂದಾಜು ಸಹ ಮಾಡಲಾಗದಷ್ಟು ದೊಡ್ಡ ಹಣದ ಸಮುದ್ರ. ಈ ಬಗ್ಗೆ ಬರಹಗಾರರಾದ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ.

ಐಪಿಎಲ್ ಬ್ರ್ಯಾಂಡ್ ಮೌಲ್ಯ ಇಂದಿಗೆ ಕನಿಷ್ಠ ಒಂದು ಲಕ್ಷ ಕೋಟಿ. ಆಟಗಾರರು, ಉಳಿದ ಸಿಬ್ಬಂದಿ ಎಲ್ಲಾ ಸೇರಿಸಿದರು ಸುಮಾರು ಐದು ಸಾವಿರ ಜನರು ಐಪಿಎಲ್‌ಗಾಗಿ ಕೆಲಸ ಮಾಡುತ್ತಾರಷ್ಟೇ. ಇಷ್ಟು ಕಡಿಮೆ ಜನರು ಕೆಲಸ ಮಾಡುವ ಐಪಿಎಲ್, ಇಂತಹ ಹುಚ್ಚು ಬ್ರ್ಯಾಂಡ್ ವ್ಯಾಲ್ಯೂ ಪಡೆಯುವುದಾದರು ಹೇಗೆ ? ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಸೃಷ್ಟಿಯಾಗುವುದೇ ಸಾಮೂಹಿಕ ಹುಚ್ಚುತನದಿಂದ. ಈ ಹುಚ್ಚುತನ ಬಹಳ ಡೆಲಿಬರೆಟ್ ಆಗಿ ಕ್ರಿಯೇಟ್ ಮಾಡಲಾಗುತ್ತದೆ . ಜಗತ್ತಿನಲ್ಲಿ ಬೇರಾವುದೇ ಭಾಗದಲ್ಲಿ ಕ್ರಿಕೆಟ್ ನಡೆಯದಂತೆ ಖಾತರಿ ಪಡಿಸಿಕೊಂಡು ಐಪಿಎಲ್ ವಿಂಡೋ ತಯಾರಾಗುತ್ತೆ. ಪ್ರಪಂಚದ ಎಲ್ಲಾ ಕ್ರಿಕೆಟಿಗರು ಇಲ್ಲಿ ಭಾಗವಹಿಸಲೇಬೇಕು. ಹರಾಜು, ಖರೀದಿಗೆ ತಮ್ಮನ್ನ ತಾವು ಒಡ್ಡಿಕೊಳ್ಳಲೇಬೇಕು. ಆಮೇಲೆ ನಡೆಯುತ್ತೆ ನೋಡಿ ಸಾಮೂಹಿಕ ಉನ್ಮಾದ (mass hysteria) ಹರಡುವ ಕಾಯಕ.

1 00 00 00 00 000 lakh Crore IPL brand value Know interesting and shocking information rcb virat kohli

1. ಐಪಿಎಲ್ ಬಹಳ ಸುದೀರ್ಘವಾಗಿ ಆಡಿಸಲಾಗುತ್ತದೆ. ಯಾವುದೇ ಐಸಿಸಿ ಪಂದ್ಯಾವಳಿ ಕೂಡ ಇಷ್ಟು ಸುದೀರ್ಘವಾಗಿ ನಡೆಯದು.

2. ಐಪಿಎಲ್ ಶುರುವಾಗುವ ಒಂದು ತಿಂಗಳ ಮುನ್ನವೆ ಪ್ರಚಾರದ ಅಬ್ಬರ ಚುರುಕಾಗುತ್ತದೆ.

3. ನಿಮ್ಮ ಟಿವಿ, ಮೊಬೈಲ್‌ಗಳಲ್ಲಿ ಐಪಿಎಲ್ ಕಹಳೆಯ ಸದ್ದು ಮೊಳಗುತ್ತದೆ.

4. ಬಹುತೇಕ ಜಾಹೀರಾತುಗಳು ಐಪಿಎಲ್ ಆಟಗಾರರನ್ನೇ ಬಳಸಿಕೊಳ್ಳತೊಡಗುತ್ತವೆ.

5. ನಗರದ ಬೀದಿ ಬೀದಿಗಳಲ್ಲಿ ಬೋರ್ಡ್‌ಗಳು ತಲೆ ಎತ್ತುತ್ತವೆ.

6. ಪೊಲಿಟಿಕಲ್ ಸೈಂಟಿಸ್ಟ್ ಬೆನೆಡಿಕ್ಟ್ ಆಂಡರ್ಸನ್ ರಾಷ್ಟ್ರ ಎನ್ನುವುದೊಂದು ಕಲ್ಪಿತ ಸಮುದಾಯ (imagined community) ಎಂದು ಹೇಳಿದ್ದರು. ಯಾವುದೇ ಸಾಮ್ಯತೆಗಳಿಲ್ಲದ ಸಮುದಾಯಗಳು ಒಂದು ರಾಷ್ಟ್ರವೆಂದು ಒಗ್ಗೂಡುವುದಕ್ಕೆ ರಾಷ್ಟ್ರಗೀತೆ, ರಾಷ್ಟ್ರ ಧ್ವಜ, ರಾಷ್ಟ್ರ ಲಾಂಛನ ಅತ್ಯಾವಶ್ಯಕ ಎಂಬುದು ಅವರ ಅನಿಸಿಕೆ. ಅದೇ ರೀತಿ ಬೇರೆ ಬೇರೆ ರಾಜ್ಯಗಳಿಂದ ಬಂದ, ಬೇರೆ ದೇಶದವರಾದ ಆಟಗಾರರು ನಮ್ಮವರು ಎಂಬ ಕಲ್ಪನೆ ಅಭಿಮಾನಿಗಳ ಮನದಲ್ಲಿ ಮೂಡಬೇಕಾದರೆ RCB ಧ್ವಜ ಬೇಕು, RCB anthem, RCB ಜರ್ಸಿ ಬೇಕಾಗುತ್ತದೆ.

7. ಐಪಿಎಲ್ ಆಡುವ ಪ್ರತೀ ತಂಡಗಳಲ್ಲಿ ಭಾರತದ ಸ್ಟಾರ್ ಆಟಗಾರನೊಬ್ಬ ಇರುವಂತೆ ನೋಡಿಕೊಳ್ಳಲಾಗುತ್ತದೆ. ಪಂದ್ಯಾವಳಿ ಹತ್ತಿರವಾದಂತೆ ಈ ಆಟಗಾರರು ತಮ್ಮ ತಂಡದ ಜರ್ಸಿ ತೊಟ್ಟು ಹೆಚ್ಚೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳತೊಡಗುತ್ತಾರೆ. (ಒಮ್ಮೆ ಯೋಚನೆ ಮಾಡಿ CSK ಯಲ್ಲಿ ಧೋನಿಯವರನ್ನು ಏಕೆ ಉಳಿಸಿಕೊಳ್ಳಲಾಗಿದೆ ಎಂದು. ಮುಂದಿನ ಐಪಿಎಲ್ Do it for Dhoni ಎಂಬ ಕೂಗಿನೊಂದಿಗೆ ಶುರುವಾದರು ಅಚ್ಚರಿಪಡಬೇಡಿ)

1 00 00 00 00 000 lakh Crore IPL brand value Know interesting and shocking information rcb virat kohli

8. "ಈ ವರುಷ ಐಪಿಎಲ್ ವಿಶಿಷ್ಟವಾದ್ದು" ಎಂದು ಪ್ರತಿ ವರುಷವೂ ಬಿಂಬಿಸಲಾಗುತ್ತದೆ- you will have something to claim that particular year as special!( ಈ ಬಾರಿಯ ವಿಶಿಷ್ಟ - ನಂಬರ್ 18 ಜರ್ಸಿ ತೊಟ್ಟು, 18 ವರುಷ ಒಂದೇ ತಂಡಕ್ಕೆ ವಿರಾಟ್ ಆಡುತ್ತಿರುವುದು... ವಿರಾಟ್ loyalty ಅಂತು ಒಂದು ತಂಡಕ್ಕೆ ಇದ್ದಿರಬಹುದು ಆದರೆ ಅವರು ಇಷ್ಟು ವರ್ಷ RCB ತಂಡಕ್ಕೆ ಕಡಿಮೆ ಮೊತ್ತಕ್ಕಂತು ಆಡಿಲ್ಲ ಅನ್ನೋದು ನಮಗಿರಬೇಕಾದ ವಿವೇಕ)

9. ಇವುಗಳ ಜೊತೆಗೆ ಸೋಶಿಯಲ್ ಮೀಡಿಯಾ influencer ಗಳು ಜ್ವರ ವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. (ಫೈನಲ್ ಮುನ್ನ vickypedia ಮತ್ತು raghuvinestore ರೀಲ್ಸ್ ಗಮನಿಸಿ... everyone wants a pie out of IPL.)

10. ಈ ಹುಚ್ಚರ ಜಾತ್ರೆಯಲ್ಲಿ ದಿನಪತ್ರಿಕೆಗಳು (ತಮ್ಮ ಪಂದ್ಯಾವಳಿಯ ಶೆಡ್ಯೂಲ್, ದಿನನಿತ್ಯದ ಕವರೇಜ್ ಮತ್ತು ಪಾಯಿಂಟ್ಸ್ ಟೇಬಲ್ಗಳ ಜೊತೆಗೆ) , ಯಾವ ತಂಡಗಳು ಗೆಲ್ಲಲಿವೆ ಎಂದು ಪ್ರೆಡಿಕ್ಟ್ ಮಾಡುವ ಜ್ಯೋತಿಷಿಗಳು ಭಾಗವಹಿಸದಿದ್ದರೆ ಹೇಗೆ ?

11. ಕೊನೆಗೆ ಡ್ರೀಮ್ ಇಲೆವೆನ್ ನಂತಹ platform ಗಳು ಜೂಜು ಆಡಲು ಪ್ರೇರೇಪಿಸುವುದೇ ಅಲ್ಲದೆ ಅಭಿಮಾನಿಗಳಿಗೆ ಒಂದು immersive ಅನುಭವವನ್ನೂ ಕೊಡುತ್ತವೆ.

ಇಷ್ಟೆಲ್ಲಾ ತಂತ್ರಗಳನ್ನು ಬಳಸಿಯೂ ಐಪಿಎಲ್ ಕ್ರಿಕೆಟ್ ನಶೆ ಅಭಿಮಾನಿಗಳಲ್ಲಿ ಏರದಿರಬಹುದು! why does IPL appeal to so many? ಮೇಲೆ ಸೂಚಿಸಿರುವ ಕಾರಣಗಳಿಂದ ಅಭಿಮಾನಿಗಳಲ್ಲಿ ಈ ಹಿಸ್ಟೀರಿಯಾ ಮೂಡುತ್ತಿದೆಯೇ? ಉತ್ತರ ಕ್ರಿಕೆಟ್ ಕ್ರೀಡಾಂಗಣ ಮೀರಿದ Work place ನಲ್ಲಿದೆ!

ಇಂದು ದೆಹಲಿ, ಮುಂಬೈ, ಚೆನೈ, ಬೆಂಗಳೂರಿನಂತಹ ಮಹಾನಗರಗಳಲ್ಲಿ ದುಡಿಯುತ್ತಿರುವವರಲ್ಲಿ ಒಂದು alienation ಇದೆ. ಇದು ಆಧುನಿಕ ಕಾಲದ ಬಹುದೊಡ್ಡ ಬಿಕ್ಕಟ್ಟುಗಳಲ್ಲಿ ಒಂದು. ಮಾಡುತ್ತಿರುವ ಕೆಲಸ ತೃಪ್ತಿ ನೀಡುವುದಿಲ್ಲ. ಏರದು ಸಂಬಳ ಆದರೆ ದಿನೇ ದಿನೇ ಏರುತ್ತಲೇ ಸಾಗುತ್ತದೆ ಟಾರ್ಗೆಟ್, ಅನಾರೋಗ್ಯಕರ ಪೈಪೋಟಿ, ಮೇಲಧಿಕಾರಿಗಳ ದರ್ಪ, ಅವರ unrealistic ಬೇಡಿಕೆಗಳು ( ವಾರಕ್ಕೆ 72 ಗಂಟೆ ದುಡಿಯಿರಿ!) , ಕಲೀಗ್ಸ್ ಎಂದು ಕರೆಸಿಕೊಳ್ಳುವವರ ಅಸೂಯೆ, ಮೋಸದ ಪ್ರವೃತ್ತಿಯನ್ನು ಅರಗಿಸಿಕೊಂಡು ಸಂಜೆ ಏಳಕ್ಕೆ ರೋಡಿಗೆ ಇಳಿದರೆ ಕಾಡುವ ಟ್ರಾಫಿಕ್... ಉಫ್... ಇಂತಹ ಹಾಳು ಜೀವನ ಯಾರಿಗೆ ಬೇಕಪ್ಪ ಅನ್ನುವ ಕರಾಳ ಯೋಚನೆ ಮನದಲ್ಲಿ ಹರಡುತ್ತಿರುವಾಗ ಐಪಿಎಲ್ ಎಂಬ ರವಿ ಸಣ್ಣ ಪರದೆಯ ಮೇಲೆ ಉದಯಿಸುತ್ತಾನೆ.

ಈ ಆಟ ನೀಡುವ respite ಗೆ ಬೆಲೆಯಿಲ್ಲ. ಇಡೀ ಐಪಿಎಲ್ superficiality ತಿಳಿದು ಕೂಡ ಅಭಿಮಾನಿ ಅದರೊಳಗೆ ಮುಳುಗಿ ಹೋಗುತ್ತಾನೆ. ಪಂದ್ಯ ಶುರುವಾಗುವ ಟೈಮಿಂಗ್ ಮಾಸ್ಟರ್ ಸ್ಟ್ರೋಕ್. Alienation at work creates the appeal. ಅಷ್ಟು ಜನ ಅಲ್ಲಿಗೆ ಹೋಗುವ ಅಗತ್ಯವೇನಿತ್ತು ಎಂದು ಬಹಳ ಜನ ಕೇಳುತ್ತಾರೆ. ದಿನವೆಲ್ಲಾ ಹೃದಯ ಕಸಿಯುವ ಕೆಲ್ಸ ಮಾಡುವವರಿಗೆ ಐಪಿಎಲ್ ನೀಡುವ ಹಿತದ ಅಂದಾಜು ನಮಗಿರಲಾರದು. ಬಸವಳಿದ ಮನಗಳಿಗೆ ಅದೊಂದು ಮುಲಾಮು ಇರಬಹುದು.

ಹನ್ನೊಂದು ಮಂದಿಯ ಸಾವಿಗೆ ಯಾರೂ ಹೊಣೆ, ಖಾಸಗಿ ತಂಡ ಒಂದಕ್ಕೆ ಇಷ್ಟೊಂದು ದೊಡ್ಡ ಗೌರವದ ಅಗತ್ಯವಿತ್ತೇ, ಕೆಲವರು ತಮ್ಮ instagram, tweeter handle ಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹೋಗಿ ಇಂತಹ ಸಾಹಸಕ್ಕೆ ಕೈ ಹಾಕಿದ್ದೆ ಈ ದುರಂತಕ್ಕೆ ಕಾರಣವಾಯಿತೇ ಎಂಬೆಲ್ಲಾ ಪ್ರಶ್ನೆಗಳು ಮುಖ್ಯವಾಹಿನಿಯಲ್ಲಿ ಹರಿದಾಡುತ್ತಿದೆ.

will anybod be held accountable? Dont Know. ಆದರೆ, ನನ್ನ ಕಣ್ಮುಂದೆ ನೀತಾ ಅಂಬಾನಿ, ಕಳೆದ ಬಾರಿ ಕೆ.ಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡ ಗೋಯಾಂಕ, ವಿದೇಶಕ್ಕೆ ಹಾರಿದ ಮಲ್ಯ, ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ ಮೂರ್ತಿ ಮಗಳು ಮತ್ತು ಅಳಿಯ, ಶಾರೂಖ್ ಖಾನ್, ವಾಡಿಯಾ ಇವರೆಲ್ಲಾ ಯಾಕ್ ಬರುತ್ತಿದ್ದಾರೆ ಅಂತ ತಿಳಿತಿಲ್ಲ. ಇದರ ನಡುವೆ ಜೇ ಶಾಹ್ ಆಪ್ತ ಮತ್ತು ಐಪಿಎಲ್ ಚೀಫ್ ಅರುಣ್ ಧುಮಲ್ " ನೋಡ್ರಪ್ಪ ನಾವು RCBಗೆ ಈ ಸಲ cup ನಿಮ್ದೇ ಅಂತ ಹೇಳಿ ಅವರ ಕೈಗೆ ಕಪ್ ನೀಡಿದ ಕ್ಷಣವೇ ನಮ್ ಜವಾಬ್ದಾರಿ ಮುಗೀತು. ಪಂದ್ಯಾವಳಿಯ ಮುಗೀತು" ಅಂತೇಳಿ ಎಲ್ಲದರಿಂದ ಕೈ ತೊಳೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+