ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಪಾರ್ಟ್‌ಟೈಂ ಸಿಎಂ: ನಳೀನ್ ಕಟೀಲ್
ಶಿರಸಿ, ಸೆಪ್ಟೆಂಬರ್ 18: ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಲನ್ ಸಿಎಂ ಎಂದೂ, ಕುಮಾರಸ್ವಾಮಿ ಅವರು ಪಾರ್ಟ್ ಟೈಂ ಸಿಎಂ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಗೇಲಿ ಮಾಡಿದ್ದಾರೆ.
ಶಿರಸಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ವಿಲನ್ ಸಿಎಂ, ಪಾರ್ಟ್ ಟೈ ಸಿಎಂ ನೋಡಿದ್ದಾರೆ' ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಲಿಂಗಾಯತ ಸಮಾಜ ಒಡೆಯುವ ಕಾರ್ಯ ಮಾಡಿದರು ಎಂದ ನಳೀನ್ ಕುಮಾರ್ ಕಟೀಲ್, ಯಾರಿಗೂ ಬೇಡದಾಗಿದ್ದ ಟಿಪ್ಪು ಜಯಂತಿ ಆಚರಿಸಿ ಸಮಾಜವನ್ನು ಒಡೆದು ಮತ ಬ್ಯಾಂಕ್ ತಯಾರಿಸಿಕೊಂಡರು ಎಂದರು.

ಹಿಂದು ಕಾರ್ಯಕರ್ತರು ಸತ್ತಾಗ ಒಂದು ಹನಿ ಕಣ್ಣೀರು ಹಾಕದ ಸಿದ್ದರಾಮಯ್ಯ, ಅದಕ್ಕೆ ರಾಜಕೀಯ ಬಣ್ಣ ಲೇಪಿಸಿದರು, ಇಷ್ಟೆಲ್ಲಾ ಮಾಡಿದ ಅವರು ವಿಲನ್ ಅಲ್ಲದೆ ಮತ್ತೇನು ಎಂದು ಹೇಳಿದರು.
ಪಾರ್ಟ್ ಟೈಂ ಸಿಎಂ ಕುಮಾರಸ್ವಾಮಿ, ಅವರ ಅಧಿಕಾರಾವಧಿ ಇರುವವರೆಗೂ ತಾಜ್ ಹೊಟೆಲ್ ಬಿಟ್ಟು ಹೊರಗೆ ಬರಲಿಲ್ಲ, ಇನ್ನು ಅವರ ಜೊತೆಗೆ ಸೈಡ್ ಆಕ್ಟರ್ ಸಹ ಇದ್ದರು, ಅವರೇ ದೇವೇಗೌಡ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಎಂದು ಕುಟುಕಿದರು ನಳೀನ್ ಕುಮಾರ್ ಕಟೀಲ್.












Click it and Unblock the Notifications