ಉತ್ತರ ಕನ್ನಡದ ಕುಮಟಾದಲ್ಲಿ ಕಾಣಿಸಿಕೊಂಡ ಇಲಿಜ್ವರ

Written By:
Subscribe to Oneindia Kannada

ಕುಮಟಾ, ಆಗಸ್ಟ್, 22: ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಲಿಪಡೆದುಕೊಂಡಿದೆ. ಕುಮಟಾ ಪಟ್ಟಣಕ್ಕೆ ಸಮೀಪವಿರುವ ಹೆಗಡೆಯಲ್ಲಿ ಕಾಣಿಸಿಕೊಂಡಿರುವ ಇಲಿ ಜ್ವರ ಮೂಡಕೇರಿಯ ಗಜಾನನ ಪಟಗಾರ(23) ಎಂಬಾತನ ಪ್ರಾಣ ಪಡೆದುಕೊಂಡಿದೆ.

ಹೆಗಡೆ ಗ್ರಾಮದಲ್ಲಿ ಮತ್ತಿಬ್ಬರಿಗೆ ಇಲಿ ಜ್ವರದ ಸೋಂಕು ಇರುವುದು ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಹೆಗಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಜಿನಕೇರಿ, ಜನಮಕ್ಕಿ, ಮಡಿವಾಳಕೇರಿ, ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.[ಮಲೇರಿಯಾ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು]

rat

ಜಿಲ್ಲಾ ಆರೋಗ್ಯ ಇಲಾಖೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ಗ್ರಾಮದ ಜನರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಿಕೊಟ್ಟಿದೆ. ಇಲಿ ಜ್ವರ ತಡೆಯ ಮುನ್ನೆಚ್ಚರಿಕೆ ಕ್ರಮಗಳ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದೆ.[ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?]

ಲಾರ್ವಾ ಪರೀಕ್ಷೆ, ಜ್ವರ ಸಮೀಕ್ಷೆ ಮಾಡಲಾಗುತ್ತಿದೆ. ಅನಾರೋಗ್ಯ ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಪಡಲು ಜನರಿಗೆ ಮಾಹಿತಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kumata: Due to the rise of Rat Fever in Kumata, Uttara Kannada district, Gajanan Patagar (23) has lost his life. Rat fever is a serious bacterial infection that affects many parts of the human body, eventually death.
Please Wait while comments are loading...