ಕುಮಟಾದಿಂದ ಟಿಕೆಟ್ ಬೇಡಿಕೆ ಇಟ್ಟ ಸಂಸದ ಅನಂತ್‌ಕುಮಾರ್ ಹೆಗಡೆ?
Recommended Video

ಶಿರಸಿ, ಏಪ್ರಿಲ್ 20: ಕರ್ನಾಟಕದಲ್ಲಿ ಬಿಜೆಪಿಯ ಹಿಂದುತ್ವದ ಮುಖವಾಣಿ ಸಂಸದ ಅನಂತಕುಮಾರ್ ಹೆಗಡೆ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉತ್ಸಾಹ ತೋರಿಸಿದ್ದಾರೆ.
ಸಂಸದರಾದ ಶ್ರೀರಾಮುಲುಗೆ ಈಗಾಗಲೇ ವಿಧಾನಸಭೆ ಟಿಕೆಟ್ ಕೊಟ್ಟಿದ್ದು, ಶೋಭಾ ಕರಂದ್ಲಾಜೆಗೂ ಟಿಕೆಟ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಶಿರಸಿಯ ತಮ್ಮ ನಿವಾಸದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ಅನಂತಕುಮಾರ್ ಹೆಗಡೆ ಟಿಕೆಟ್‌ಗಾಗಿ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಕುಮಟಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬೇಡಿಕೆ ಇಟ್ಟಿರುವ ಅನಂತಕುಮಾರ್ ಹೆಗಡೆ ಅವರು, 'ಶೋಭಾ ಕರಂದ್ಲಾಜೆ, ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದ ಮೇಲೆ ತಾವು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ' ಎಂದು ಕಾರ್ಯಕರ್ತರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರಿಗೆ ಮನವರಿಕೆ ಮಾಡಿದ್ದಾರೆ.

ಈಗಾಗಲೇ ತಮ್ಮ ಹರಿತ ಮಾತು ಪ್ರಖರ ಹಿಂದುತ್ವವಾದಿಂದ ಜನಪ್ರಿಯತೆಯ ಜೊತೆಗೆ ವಿರೋಧಕ್ಕೂ ತುತ್ತಾಗಿರುವ ಅನಂತ್‌ಕುಮಾರ್ ಹೆಗಡೆ ಅವರನ್ನು ರಾಜ್ಯರಾಜಕಾರಣಕ್ಕೆ ಪಾದಾರ್ಪಣೆ ಮಾಡಲು ಇಚ್ಛಿಸಿದ್ದು, ಅನಂತ್‌ಕುಮಾರ್ ಹೆಗಡೆ ಅವರ ಮನವಿಗೆ ಹೈಕಮಾಂಡ್ ಸೊಪ್ಪು ಹಾಕುತ್ತದೆಯೋ ಕಾದು ನೋಡಬೇಕು.











Click it and Unblock the Notifications