ಹುಡುಗಿಯರಿಗೆ ಕಾಟ ಕೊಡುತ್ತಿದ್ದ ಪೋಲಿ ಮಂಗಣ್ಣ ಸಿಕ್ಕಿಬಿದ್ದ!

Subscribe to Oneindia Kannada

ಹಳಿಯಾಳ , ಆಗಸ್ಟ್, 26: ಈ ಮಂಗಣ್ಣನಿಗೆ ವಿದ್ಯಾರ್ಥಿನಿಯರ ಮೇಲೆ ಅದೆಂಥದೋ ಪ್ರೀತಿ, ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿನಿಯರಿಗೆ ಕಾಟ ಕೊಡುವುದು ಕಪಿರಾಯನ ಅಭ್ಯಾಸ-ಹವ್ಯಾಸ. ಶಾಲೆಗೆ ತೆರಳುವಾಗ ರಸ್ತೆ ಮಧ್ಯೆ ಧುತ್ ಎಂದು ಪ್ರತ್ಯಕ್ಷವಾಗುತ್ತಿದ್ದ ವಾನರ ಯಾವ ಬೀದಿ ಪೋಕರಿಗೂ ಕಡಿಮೆ ಇರಲಿಲ್ಲ.

ಪ್ರವಾಸಿ ತಾಣಗಳಲ್ಲಿ ಮಂಗಗಳು ಕಾಟ ಕೊಡುವುದು ಸಾಮಾನ್ಯ. ಆಹಾರದ ಪೊಟ್ಟಣ ಕಸಿಯುವುದು, ಮೊಬೈಲ್ ಕಸಿಯುವುದು ಇಂಥ ಚೇಷ್ಟೆಗಳನ್ನು ಅನುಭವಿಸಿದವರಿಗೆ ಮಾತ್ರ ಅದರ ಮಜಾ ಗೊತ್ತು![ಅಂಗನೆಯ ಸ್ತನ ತಡಕಾಡಿ ಎದೆ ವಸ್ತ್ರ ಕಳಚಿದ ಮಂಗ ]

monkey

ಇದೇ ರೀತಿ ನಿರಂತರವಾಗಿ ವಿದ್ಯಾರ್ಥಿನಿಯರ ಗೋಳು ಹೊಯ್ದುಕೊಳ್ಳುತ್ತಿದ್ದ ಮಂಗಣ್ಣ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳ ಸುಪರ್ದಿಯಲ್ಲಿ ಇದ್ದಾನೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಪೋಲಿ ಮಂಗಣ್ಣ ಸಿಕ್ಕಿಬಿದ್ದಿದ್ದಾನೆ.[ಕೋಲ್ಕತಾ ಐಪಿಎಲ್ ಪಂದ್ಯದಲ್ಲಿ ಕಪಿಚೇಷ್ಟೆ, ಡಬಲ್ ಮನರಂಜನೆ]

ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಕಾಟ ಕೊಡುತ್ತಿದ್ದ ಮಂಗವನ್ನು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಸೆರೆ ಹಿಡಿದಿದ್ದಾರೆ. ಹಳಿಯಾಳದ ತೆಗ್ನಳ್ಳಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಮಂಗಣ್ಣನ ಮಂಗಾಟಕ್ಕೆ ಫುಲ್ ಸ್ಟಾಪ್ ಬಿದ್ದಿದೆ.[ಮುಂದಿನ ವರ್ಷ ಮಂಗಳನ ಮೇಲೆ 'ರಷ್ಯಾ' ಮಂಗಗಳ ಸಂಸಾರ]

ಮಂಗನ ಕಾಟಕ್ಕೆ ಹೆದರಿ ಬಾಲಕಿಯರು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಮಂಗಾಟ ಸಂಗತಿ ಗೊತ್ತಾದ ನಂತರ ಪಾಲಕರು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಕಾರ್ಯಾಚರಣೆ ಕೈಗೆತ್ತಿಕೊಂಡ ಸಿಬ್ಬಂದಿ ಮಂಗವನ್ನು ಹಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Forest officials capture Rogue monkey causing trouble to teenage girls in Uttara Kannada district Haliyal.
Please Wait while comments are loading...