ಯಕ್ಷಗಾನ ಅರ್ಥಧಾರಿ ಎಂಎ ಹೆಗಡೆಗೆ ಚಿಟ್ಟಾಣಿ ಪ್ರಶಸ್ತಿ

Subscribe to Oneindia Kannada

ಶಿರಸಿ, ಆಗಸ್ಟ್, 17: ಯಕ್ಷಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ಮೊದಲಿನಿಂದಲೂ ಆರಾಧಿಸಿಕೊಂಡು ಬಂದಿರುವ ಮೈಸೂರಿನ ಇನ್ನೋವೇಟಿವ್ ಸಂಸ್ಥೆ ಅವರ ಹೆಸರಿನಲ್ಲಿಯೇ ಪ್ರಶಸ್ತಿಯೊಂದನ್ನು ನೀಡುತ್ತಿದೆ.

ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವಿದ್ವಾ೦ಸ ಉತ್ತರ ಕನ್ನಡ ಜಿಲ್ಲೆಯ ಪ್ರೊ.ಎ೦.ಎ.ಹೆಗಡೆ ಅವರನ್ನು ಮೈಸೂರಿನ ಇನ್ನೋವೇಟಿವ್ ಸ೦ಸ್ಥೆ ಚಿಟ್ಟಾಣಿ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿದೆ.[ಉಮಾಶ್ರೀ ಮೇಡಂ,, ನೀವು ಕಲಾವಿದರಿಗೆ ಮಾಡಿದ ಅಪಮಾನ ಸರಿಯೆ?]

Famous Yakshagana artist M A Hegde gets Chittai award

ಚಿಟ್ಟಾಣಿ ಹೆಸರಿನ ಪ್ರಶಸ್ತಿ 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಒಳಗೊ೦ಡಿರುತ್ತೆ. ಮೈಸೂರಿನ ಜಗನ್ಮೋಹನ ಅರಮನೆಯ ಸಭಾ೦ಗಣದಲ್ಲಿ ಸೆಪ್ಟೆ೦ಬರ್ 12, 13ರ೦ದು ನಡೆಯಲಿರುವ ಬಡಗು ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.[ಸಿಂಗಪುರದಲ್ಲಿ ರಸದೌತಣ ಬಡಿಸಿದ ವೈಭವದ ಯಕ್ಷಸಿರಿ]

ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಿರುವ ಎ೦.ಎ.ಹೆಗಡೆ ತ ಮ್ಮ 16ನೇ ವಯಸ್ಸಿನಲ್ಲಿಯೇ ಕೆರೆಮನೆ ಮೇಳದಲ್ಲಿ ಶಿವರಾಮ ಹೆಗಡೆ ಅವರೊ೦ದಿಗೆ ಬಣ್ಣ ಹಚ್ಚಿದ್ದರು. ತ್ರಿಶ೦ಕು ಚರಿತ್ರೆ, ಸೀತಾ ವಿಯೋಗ, ಪ್ರಚ೦ಡ ಚಾಣಕ್ಯ ಸೇರಿ ಇಪ್ಪತ್ತಕ್ಕೂ ಅಧಿಕ ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ. ಎಂ ಎ ಹೆಗಡೆ ಅವರಿಗೆ ಪ್ರಶಸ್ತಿ ಸಂದಿರುವುದು ಅವರ ಅಭಿಮಾನಿಗಳಲ್ಲಿ ಅಪಾರ ಸಂತಸ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Famous Yakshagana artist Pro. M A Hegde got Chittai award, Mysuru baised innovative organization giving this award in the name of veteran Yakshagana Artist, padma shri Ramachandra Hegde chittani.
Please Wait while comments are loading...