ಶಿರಸಿಯಲ್ಲಿ ಲಾಕ್ ಡೌನ್ ಉಲ್ಲಂಘಿಸುವವರ ಮೇಲೆ ‘ಡ್ರೋಣ್’ ಕಣ್ಣು

ಕಾರವಾರ, ಮಾರ್ಚ್ 31: ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡುವವರನ್ನು ಗುರುತಿಸಲು ಡ್ರೋಣ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲು ಇದೀಗ ಪೊಲೀಸ್ ಇಲಾಖೆ ಶುರು ಮಾಡಿದೆ.

ಈಗಾಗಲೇ ಶಿರಸಿ ನಗರದಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಪೊಲೀಸರು ತಮ್ಮ ಕೆಲಸ ಪ್ರಾರಂಭಿಸಿದ್ದಾರೆ. ಜಿಲ್ಲೆಯ ಪ್ರಮುಖ ನಗರಗಳಾದ ಕಾರವಾರ, ಭಟ್ಕಳ, ದಾಂಡೇಲಿಯಲ್ಲೂ ಡ್ರೋಣ್ ಕ್ಯಾಮೆರಾ ಬಳಸಿ ದೃಶ್ಯಗಳನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನರು ಸುರಕ್ಷತೆಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದರೂ ಕೆಲವರು ಅನವಶ್ಯಕವಾಗಿ ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆ. ಮನೆಯಿಂದ ಕಾರಣವಿಲ್ಲದೇ ಹೊರ ಬಂದು ಓಡಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ಮಾಡುತ್ತಿದ್ದಾರೆ. ಹೀಗಾಗಿ ಡ್ರೋಣ್ ಓಡಾಟಕ್ಕಿಳಿದಿದೆ.

 ಡ್ರೋಣ್ ನಲ್ಲಿ ಗುರುತಿಸಿ ಪ್ರಕರಣ ದಾಖಲು

ಡ್ರೋಣ್ ನಲ್ಲಿ ಗುರುತಿಸಿ ಪ್ರಕರಣ ದಾಖಲು

ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲಿ, ಅದರಲ್ಲೂ ಶಿರಸಿ, ದಾಂಡೇಲಿ, ಭಟ್ಕಳ ಹಾಗೂ ಕಾರವಾರದಲ್ಲಿ ಜನರ ಓಡಾಟಕ್ಕೆ ಕಡಿವಾಣ ಹಾಕುವ ಅಗತ್ಯವಿರುವ ಹಿನ್ನೆಲೆಯಲ್ಲಿ ಡ್ರೋನ್ ಬಳಸಿಕೊಳ್ಳಲಾಗುತ್ತಿದೆ. ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಡ್ರೋಣ್ ಕ್ಯಾಮೆರಾ ಮೂಲಕ ದೃಶ್ಯಗಳನ್ನು ಸೆರೆ ಹಿಡಿಯಲಿದ್ದು, ಅನಗತ್ಯ ಓಡಾಡುವವರನ್ನು ದೃಶ್ಯದಲ್ಲಿ ಗುರುತಿಸಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

 ಕ್ಷಮೆ ಯಾಚಿಸಿದ ಯುವಕರು

ಕ್ಷಮೆ ಯಾಚಿಸಿದ ಯುವಕರು

ಡ್ರೋಣ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿಯುವಾಗ ನಗರದ ಕೋಟೆಕೆರೆ ಬಳಿ ಯುವಕರ ಗುಂಪೊಂದು ಕ್ರಿಕೆಟ್ ಆಡುವ ದೃಶ್ಯ ಸೆರೆಯಾಗಿತ್ತು. ತಕ್ಷಣ ಶಿರಸಿ ಡಿವೈಎಸ್ ‍ಪಿ ಜಿ.ಟಿ.ನಾಯಕ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಯುವಕರಿಗೆ ಬುದ್ಧಿವಾದ ಹೇಳಿದ್ದಾರೆ. ಯುವಕರೂ ಕ್ಷಮೆ ಕೇಳಿದ್ದಾರೆ. ಅಲ್ಲದೇ ತಾನು ಲಾಕ್ ಡೌನ್ ಉಲ್ಲಂಘನೆ ಮಾಡಿದ್ದೇನೆ. ತನ್ನನ್ನು ಕ್ಷಮಿಸಿ ಎಂದು ಬೋರ್ಡ್ ಅನ್ನು ಯುವಕರಿಗೆ ಪೊಲೀಸರು ಕೊಡುವ ಮೂಲಕ ವಿಭಿನ್ನ ರೀತಿಯಲ್ಲಿ ಶಿರಸಿ ಪೊಲೀಸರು ಜನರಿಗೆ ಮನೆಯಿಂದ ಹೊರಬರದಂತೆ ಮನವಿ ಮಾಡಿಕೊಳ್ಳುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 ಕಾರವಾರದಲ್ಲಿ ವಾಹನ ಸವಾರರಿಗೆ ದಂಡದ ಬಿಸಿ

ಕಾರವಾರದಲ್ಲಿ ವಾಹನ ಸವಾರರಿಗೆ ದಂಡದ ಬಿಸಿ

ಲಾಕ್ ಡೌನ್ ಇದ್ದರೂ ಕಾರವಾರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ತಡೆದು, ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದೇಶದಾದ್ಯಂತ ಏಪ್ರಿಲ್ 14ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ತುರ್ತು ಅವಶ್ಯಕತೆಗೆ ಮಾತ್ರ ಅವಕಾಶ ಒದಗಿಸಲಾಗಿದೆ. ಆದರೆ, ಇದನ್ನೇ ಮುಂದಿಟ್ಟುಕೊಂಡು ಕಾರವಾರದಲ್ಲಿ ಕೆಲವರು ಮೆಡಿಕಲ್ ಶಾಪ್, ಆಸ್ಪತ್ರೆ ಹೆಸರಿನಲ್ಲಿ ಅನಗತ್ಯವಾಗಿ ತಿರುಗಾಡುತ್ತಿರುವುದು ಕಂಡುಬಂದಿತ್ತು. ಲಾಠಿ ಬೀಸಿದರೂ ಜನರು ಬಗ್ಗದ್ದರಿಂದ ಪೊಲೀಸರು ನಗರದ ಸುಭಾಷ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆ ಹಾಗೂ ಪಿಕಳೆ ರಸ್ತೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಅನಗತ್ಯವಾಗಿ, ನಿಯಮಗಳನ್ನು ಉಲ್ಲಂಘಿಸಿ ತಿರುಗಾಡುತ್ತಿದ್ದ ಸಾಕಷ್ಟು ಮಂದಿಗೆ ದಂಡ ವಿಧಿಸಿ ಬುದ್ಧಿಮಾತು ಹೇಳಿದ್ದಾರೆ.

 ಮನೆ ಬಾಗಿಲಿಗೇ ಸಾಮಗ್ರಿ ಬಂದರೂ ಓಡಾಟ ನಿಂತಿಲ್ಲ

ಮನೆ ಬಾಗಿಲಿಗೇ ಸಾಮಗ್ರಿ ಬಂದರೂ ಓಡಾಟ ನಿಂತಿಲ್ಲ

ನಗರ ಪ್ರದೇಶಗಳಲ್ಲಿ ಈಗಾಗಲೇ ತರಕಾರಿ, ಹಣ್ಣು, ಕಿರಾಣಿ ವಸ್ತುಗಳನ್ನು ಮನೆ ಬಾಗಿಲಿಗೇ ಪೂರೈಕೆ ಮಾಡಲಾಗುತ್ತಿದೆ. ಆದರೂ ಜನರು ಕಾರಣವಿಲ್ಲದೇ ತಿರುಗಾಡುತ್ತಿದ್ದು, ಅಂಥವರನ್ನು ಹಿಡಿದು ಪೊಲೀಸರು ದಂಡ ಹಾಕುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಲಾಕ್ ಡೌನ್ ಇದ್ದರೂ ಆರೋಗ್ಯ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದು, ಚಿಕಿತ್ಸೆ ಪಡೆಯಲು, ಔಷಧಗಳ ಖರೀದಿಗೆ ಆಗಮಿಸಿದ್ದವರನ್ನು ಪೊಲೀಸರು ಯಾವುದೇ ದಂಡ ವಿಧಿಸದೇ ಬಿಟ್ಟು ಕಳುಹಿಸಿದ್ದಾರೆ.
ಆದರೆ ಕೆಲವರು ಮೆಡಿಕಲ್ ಶಾಪ್ ಗೆ ಬಂದ ನೆಪದಲ್ಲಿ ನಗರದಾದ್ಯಂತ ವಿನಾಕಾರಣ ಓಡಾಡಿಕೊಂಡಿದ್ದು, ಇನ್ನೂ ಕೆಲವರು ಹೆಲ್ಮೆಟ್ ಸಹ ಧರಿಸದೇ ವಾಹನ ಚಲಾಯಿಸಿಕೊಂಡು ಬಂದಿದ್ದರು. ಅಂಥವರನ್ನು ತಡೆದ ಪೊಲೀಸರು ದಂಡ ಹಾಕುವುದರ ಜೊತೆಗೆ ಮತ್ತೆ ಅನಗತ್ಯವಾಗಿ ವಾಹನ ತೆಗೆದುಕೊಂಡು ಬಂದಲ್ಲಿ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಕೆಯನ್ನು ಸಹ ನೀಡಿ ಕಳುಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+