ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾಸಾ' ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿ ಜೊತೆ 1.20 ಕೋಟಿ ರೂ. ಗೆದ್ದ ಶಿರಸಿಯ ಕುವರ

|
Google Oneindia Kannada News

ಕಾರವಾರ, ಆಗಸ್ಟ್ 19: 'ನಾಸಾ' ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿ ಜೊತೆ 1.20 ಕೋಟಿ ರೂ. ಗೆದ್ದಿರುವ ಶಿರಸಿಯ ಕುವರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತರ ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಹಂಟ್ಸ್‌ವಿಲ್ಲೆಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ್ ವಸಂತ ಹೆಗಡೆ NASA ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಈ ಸಾಧನೆ ಮಾಡಿದ ಅಪರೂಪದ ಭಾರತೀಯನಾಗಿ ಮೂಡಿ ಬಂದಿದ್ದಾರೆ.

ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ಹೆಗಡೆ ಮತ್ತು ಕ್ಯಾಥರೀನ್ ಡೇವಿಡ್ಸನ್ ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು (UAH) ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Karwar: Sirsi Based Student Won NASA Future Investigator Award Along With Rs 1.2 Cr

ಇಬ್ಬರು ವಿದ್ಯಾರ್ಥಿಗಳಿಗೂ ತಲಾ 135,000(1 ಕೋಟಿ 20 ಲಕ್ಷ) ಅಮೇರಿಕನ್ ಡಾಲರ್ ಸ್ಟೈಫಂಡ್ ಅನ್ನು ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ನೀಡಲಾಗುವುದು ಎಂದು ವಿಶ್ವವಿದ್ಯಾನಿಲಯ ತನ್ನ ಅಧಿಕೃತ ವೆಬ್‌ಸೈಟ್ ತನ್ನ ನ್ಯೂಸ್‌ನಲ್ಲಿ ತಿಳಿಸಿದೆ.

ಎರಡನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ಹೆಗಡೆ, ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಮತ್ತು ಯುಎಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್‌ನಲ್ಲಿ ಪದವಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕರಾದ ಡಾ. ನಿಕೊಲಾಯ್ ಪೊಗೊರೆಲೋವ್ ಇವರಿಗೆ ಸಲಹೆ ಮತ್ತು ಮಾರ್ಗದರ್ಶನದಲ್ಲಿ "ಅನಿಶ್ಚಿತತೆಯಿಂದ ಕೂಡಿರುವ ಬಾಹ್ಯಾಕಾಶ ಹವಾಮಾನವನ್ನು ಅಭ್ಯಾಸ ಮಾಡುವ ವಿಧಾನ'ವನ್ನು ಸಂಶೋಧನಾ ವಿಷಯವಾಗಿ ಅಭ್ಯಸಿಸುತ್ತಿದ್ದಾರೆ.

ಶಿರಸಿಯ ದಿನೇಶ್ ಹೆಗಡೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ತನ್ನ ಬಿ.ಎಸ್ಸಿ ಪದವಿ ಮುಗಿಸಿ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ಎಂ.ಎಸ್ಸಿ ಪದವಿ ಗಳಿಸಿ, ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಾಕ್ಕೆ ತೆರಳಿದ್ದರು.

ಸೌರ ಮಾರುತದ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ದಿನೇಶ್, ಪ್ಲಾಸ್ಮಾ ಸ್ಥಿತಿಯಲ್ಲಿ ಪ್ರೋಟಾನ್‌ಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಒಳಗೊಂಡಿರುವ ನಿರಂತರ ಹರಿವು ಸೂರ್ಯನಿಂದ ಹೊರಕ್ಕೆ ಹೇಗೆ ಹರಿಯುತ್ತದೆ ಮತ್ತು ತನ್ನ ಒಳಗೆ ಹುದುಗಿರುವ ಸೌರ ಕಾಂತೀಯ ಕ್ಷೇತ್ರವನ್ನು ಅದರೊಂದಿಗೆ ಹೇಗೆ ಒಯ್ಯುತ್ತದೆ ಎನ್ನುವ ವಿಚಾರದ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

ಈಗ ದಿನೇಶ್‌ರವರ ಸಂಶೋಧನಾ ವಿಷಯ ಗಮನಿಸಿದ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) 1 ಕೋಟಿ 20 ಲಕ್ಷ ಹಣದ ಜೊತೆಗೆ ಪ್ರಶಸ್ತಯನ್ನೂ ಗೆದ್ದುಕೊಂಡಿದ್ದಾರೆ.

English summary
Sirsi Based Student Dinesh Vasanth Hegde won NASA Future Investigator award along with Rs 1.2 Cr.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X