ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 8: ತನ್ನ ಬೇಡಿಕೆ ಈಡೇರಿಸದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೆ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಗಾಡಿಕೊಪ್ಪ ಸಮೀಪದ ಡಾ.ಅಂಬೇಡ್ಕರ್ ನಗರದ ರಾಜು (29) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜು, ತನ್ನ ಬೈಕಿಗೆ ಬೆಂಕಿ ಹಚ್ಚಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಕೆಲವೇ ಕ್ಷಣದಲ್ಲಿ ಬೈಕು ಹೊತ್ತಿ ಉರಿದಿದೆ. ಇದನ್ನು ಗಮನಿಸಿದ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ ಬಂದಿದ್ದ ಸಾರ್ವಜನಿಕರು ಆತಂಕಕ್ಕೀಡಾದರು. ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯಕ್ಕೆ 68,640 ಹೆಕ್ಟೇರ್ ಮೀಸಲುಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯಕ್ಕೆ 68,640 ಹೆಕ್ಟೇರ್ ಮೀಸಲು

ಆಕ್ರೋಶಕ್ಕೆ ಕಾರಣವೇನು?

ಡಾ. ಅಂಬೇಡ್ಕರ್ ಕಾಲೋನಿಯ ನಿವಾಸಿಗಳು ತುಂಗಾ ಏತ ನೀರಾವರಿ ಯೋಜನೆ ಜಾಗ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಅದನ್ನು ತೆರವುಗೊಳಿಸಲಾಗಿತ್ತು. ಈ ಸಂದರ್ಭ ನಿವಾಸಿಗಳು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮಾಡಿದ್ದರು.

Youth sets Fire on his Bike in front of Shivamogga DC Office

ಆದರೆ ಈ ತನಕ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ರಾಜು ಆಕ್ರೋಶಗೊಂಡಿದ್ದ. ಪ್ಲಾಸ್ಟಿಕ್ ಹೂವುಗಳನ್ನು ಮಾರಾಟ ಮಾಡುವ ಉದ್ಯೋಗ ಮಾಡುತ್ತಿದ್ದ ರಾಜು, ತಮಗೆ ಯಾರೂ ನ್ಯಾಯ ಒದಗಿಸುತ್ತಿಲ್ಲ ಎಂದು ಬೇಸಗೊಂಡು ಕೃತ್ಯ ಎಸಗಿದ್ದಾನೆ. ಜಯನಗರ ಠಾಣೆ ಪೊಲೀಸರು ರಾಜುನನ್ನು ವಶಕ್ಕೆ ಪಡೆದಿದ್ದಾರೆ.

ಅಪ್ರಾಪ್ತ ಬಾಲಕನ ಕೈಗೆ ಬೈಕ್ ಕೊಟ್ಟು ಪೋಷಕರಿಗೆ ದಂಡ

ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟಿದ್ದ ಪೋಷಕರು ಈಗ ಪೇಚಿಗೆ ಸಿಲುಕಿದ್ದು, ಈ ತಪ್ಪಿಗೆ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. 16 ವರ್ಷದ ಬಾಲಕನೊಬ್ಬ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದ. ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಬಳಿ ಆತನನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

Youth sets Fire on his Bike in front of Shivamogga DC Office

ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಆತನ ತಂದೆ ತೀರ್ಥಹಳ್ಳಿಯ ಆಸಿಫ್ ಬಾಷಾ ವಿರುದ್ಧ ಲಘು ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶರು, ದ್ವಿಚಕ್ರ ವಾಹನದ ಮಾಲೀಕ, ಅಪ್ರಾಪ್ತ ಬಾಲಕನ ತಂದೆ ಆಸಿಫ್ ಬಾಷಾ ಅವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.

English summary
A Youth sets bike on fire in front of Shivamogga district administration for not fulfilling his demand. Raju (29) of Dr. Ambedkar Nagar near Gadikoppa has been taken into custody by the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X