Get Updates
Get notified of breaking news, exclusive insights, and must-see stories!

Jog Falls: ಭಾರೀ ಮಳೆಯಿಂದ ಮರುಳಿಸಿದ ವಿಶ್ವವಿಖ್ಯಾತ ಜೋಗ್ ಫಾಲ್ಸ್ ಸೌಂದರ್ಯ ಸವಿಯಬಯಸುವ ಪ್ರವಾಸಿಗರಿಗೆ ಗುಡ್‌ ನ್ಯೂಸ್‌

Jog Falls: ರಾಜ್ಯದೆಲ್ಲೆಡೆ ಮಳೆರಾಯನ ಆರ್ಭಟ ಮುಂದುವರೆದಿದ್ದು, ಜಲಮೂಲಗಳಿಗೆ ಜೀವಕಳೆ ಬಂದಂರಾಗಿದೆ. ಅಲ್ಲದೆ ಮಲೆನಾಡಿನ ಪ್ರವಾಸಿ ತಾಣಗಳ ಹೆಬ್ಬಾಗಿಲು ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆರಾಯ ಆರ್ಭಟ ಮುಂದುರೆಸಿದ ಹಿನ್ನೆಲೆ ಇಲ್ಲಿನ ವಿಶ್ವಪ್ರಸಿದ್ಧ ತಾಣವಾದ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ. ಈ ಹಿನ್ನೆಲೆ ಪ್ರವಾಸಿಗರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಲಾಗಿದೆ. ಹಾಗಾದರೆ ಆ ಪ್ರಮುಖ ಮಾಹಿತಿ ಇಲ್ಲಿದೆ ಗಮನಿಸಿ.

ಭಾರೀ ಹಿನ್ನೆಲೆ ಇಷ್ಟು ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ಜೋಗಜಲಪಾತಕ್ಕೆ ಇದೀಗ ಕಳೆ ಬಂದಂತಾಗಿದೆ. ಅದರಲ್ಲೂ ಶರಾವತಿ ಕೊಳ್ಳದ ಪ್ರದೇಶದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಇದರಿಂದ ಲಿಂನಮಕ್ಕಿ ಜಲಾನಯನ ಪ್ರದೇಶದ ಕೆಳದಂಡೆ ಭಾಗದಲ್ಲಿ ಮಳೆ ನೀರು ರಭಸದಿಂದ ಹರಿದುಬರುತ್ತಿದೆ. ಈ ಹಿನ್ನೆಲೆ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ ಬಂದಿದ್ದು, ರಾಜ, ರಾಣಿ, ರೋರರ್ ರಾಕೆಟ್ ಜಲಧಾರೆ ಧುಮ್ಮುಕ್ಕುತ್ತದೆ. ಈ ಮೂಲಕ ಇದು ಪ್ರವಾಸಿಗರನ್ನ ತನ್ನತ್ತ ಕೈಬಿಸಿ ಕರೆಯುತ್ತಿದೆ.

World-famous Jog Falls beauty enhanced due to heavy rain

2023ರಲ್ಲಿ ರಾಜ್ಯದಲ್ಲಿ ಮಳೆಯಿಲ್ಲದೆ, ಭರದ ವಾತಾವರಣ ನಿರ್ಮಾಣವಾಗಿ, ಹಲವು ಜಲಮೂಲಗಳು ಬತ್ತಿಹೋಗಿದ್ದವು. ಅಷ್ಟೇ ಅಲ್ಲದೆ ವಿಶ್ವಪ್ರಸಿದ್ದ ಜೋಗ ಜಲಪಾತದ ಸೌಂದರ್ಯದ ಕಳೆಯೂ ಮಾಯವಾಗಿತ್ತು. ಇದೀಗ 2024ರ ಮೇನಲ್ಲಿ ಸುರಿಯುತ್ತಿರುವ ಮಳೆಯಿಂದ ಜೋಗದ ಸೌಂದರ್ಯದ ಕಳೆ ಮರುಕಳಿಸಿದಂತಾಗಿದೆ. ಇನ್ನು ಈ ನೀರನ್ನು ಆಶ್ರಯಿಸಿದ್ದ ಜೀವಸಂಕುಲಗಳು, ಸರೀಸೃಪಗಳು ಹಾಗೂ ಜಲಚರಗಳಲ್ಲೂ ಹೊಸ ಚೈತನ್ಯ ಮೂಡಿದಂತಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಜೋಗದ ವಿವಿಧ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಪ್ರವಾಸಿಗರು ಅತಿ ಹತ್ತಿರದಿಂದ ಜಲಪಾದ ಜಲಸಿರಿಯ ವೈಭವವನ್ನು ಕಣ್ತಂಬಿಕೊಳ್ಳಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಬೃಹತ್‌ ವೀಕ್ಷಣಾ ಗೋಪುರಗಳು ತಲೆ ಎತ್ತುತ್ತಿವೆ. ಇದರಿಂದ ಪ್ರವಾಸಿಗರು ಹತ್ತಿರದಿಂದಲೇ ಜೀಗ ವೈಭವವನ್ನು ಸವಿಯಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+