ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಮಟ್ಟ ಏರಿಕೆ; ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್‌, 10: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಬುಧವಾರ ಗಂಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಒಂದು ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರನ್ನು ಹೊರಗೆ ಬಿಡಲಾಯಿತು.

ಲಿಂಗನಮಕ್ಕಿ ಡ್ಯಾಂ ಭರ್ತಿಯಾಗುವ ಹಂತ ತಲುಪಿದ ಹಿನ್ನೆಲೆ ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಗಂಗೆ ಪೂಜೆ ನೆರವೇರಿಸಿದರು. ಜಲಾಶಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಶರಾವತಿ ನದಿಗೆ ಬಾಗಿನ ಅರ್ಪಿಸಿದರು.

ಶಿವಮೊಗ್ಗ; ಆಗಸ್ಟ್ 12ರಂದು ಉದ್ಯೋಗ ಮೇಳ ಶಿವಮೊಗ್ಗ; ಆಗಸ್ಟ್ 12ರಂದು ಉದ್ಯೋಗ ಮೇಳ

ಗಂಗೆ ಪೂಜೆ ಬಳಿಕ ಲಿಂಗನಮಕ್ಕಿ ಜಲಾಶಯದ ಒಂದು ಕ್ರಸ್ಟ್ ಗೇಟನ್ನು ಮೇಲೆತ್ತಿ, ಸ್ವಲ್ಪ ಹೊತ್ತು ನೀರು ಹೊರಗೆ ಬಿಡುವ ಸಂಪ್ರದಾಯವಿದೆ. ಅದರಂತೆ ಜಲಾಶಯದ ಕ್ರಸ್ಟ್ ಗೇಟನ್ನು ಮೇಲೆತ್ತಿ ನೀರು ಹೊಳೆಗೆ ಹರಿಸಲಾಯಿತು. ಈ ವೇಳೆ ವಿದ್ಯುತ್ ನಿಗಮದ ಸಿಬ್ಬಂದಿಗಳು, ಕುಟುಂಬದವರು ಸಂಭ್ರಮ ವ್ಯಕ್ತಪಡಿಸಿದರು.

 Water Level Increase Ganga Pooja At Linganamakki Dam

ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ: ನಿರಂತರ ಮಳೆಯಾಗುತ್ತಿದ್ದು, ಕಳೆದ ಒಂದು ವಾರದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯ ಶೇಕಾಡಾ 77ರಷ್ಟು ಭರ್ತಿಯಾಗಿದೆ.

ಇದೇ ರೀತಿ ಮಳೆ ಮುಂದುವರೆದರೆ ಕೆಲವೇ ದಿನದಲ್ಲಿ ಲಿಂಗನಮಕ್ಕಿ ಡ್ಯಾಂ ಭರ್ತಿಯಾಗಲಿದ್ದು, ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತದೆ. ಸದ್ಯ ಲಿಂಗನಮಕ್ಕಿ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್‌ಗಿಂತಲೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ.

ಜಲಾಶಯದ ಗರಿಷ್ಠ ಮಟ್ಟ 1,819 ಅಡಿ ಇದೆ. ಈಗ 1,807.70 ಅಡಿಯಷ್ಟು ನೀರು ಭರ್ತಿಯಾಗಿದೆ. ನೀರಿನ ಮಟ್ಟ 1,816 ಅಡಿಗೆ ತಲುಪಿದಾಗ ಜಲಾಶಯದ ಮೂಲಕ ನೀರನ್ನು ಹೊರ ಬಿಡಲಾಗುತ್ತದೆ.

 Water Level Increase Ganga Pooja At Linganamakki Dam

ಮುನ್ನೆಚ್ಚರಿಕೆ ಕ್ರಮಗಳು: ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾದ ಹಿನ್ನೆಲೆ, ಜಲಾಶಯದ ವತಿಯಿಂದ ಎರಡು ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಜಲಾಶಯದಿಂದ ನೀರ ಹೊರ ಬಿಡುವ ಸಾಧ್ಯತೆ ಇದೆ.

ಹಾಗಾಗಿ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಮುಂಜಾಗ್ರತೆಗಾಗಿ ಅಲ್ಲಿನ ಜನರಿಗೆ ಎತ್ತರದ ಪ್ರದೇಶದಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯವನ್ನು ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಡ್ಯಾಂನಿಂದ ನೀರು ಹೊರಬಿಟ್ಟರೆ ವಿಶ್ವವಿಖ್ಯಾತ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗುತ್ತದೆ.

English summary
Ganga Puja performed on Wednesday after rising water level in Linganamakki reservoir of Shivamogga district. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X