ಶಿವಮೊಗ್ಗ: ತುಂಗಾನದಿಗೆ ಹಾರಿ ಯುವ ಪ್ರೇಮಿಗಳ ಆತ್ಮಹತ್ಯೆ ಯತ್ನ
ಶಿವಮೊಗ್ಗ, ಆಗಸ್ಟ್ 14: ಯುವ ಪ್ರೇಮಿಗಳಿಬ್ಬರು ಇಂದು ಬೈಪಾಸ್ ರಸ್ತೆಯ ಹೊಸ ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ತುಂಗಾನದಿಗೆ ಇಬ್ಬರೂ ಪರಸ್ಪರ ಕೈಯಿಗೆ ಯುವತಿಯ ವೆಲ್ ಕಟ್ಟಿಕೊಂಡು ನದಿಗೆ ಹಾರಿದ್ದಾರೆ. ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತುಂಗಾ ನಗರ ಠಾಣೆ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಯುವತಿಯನ್ನು ನದಿಯಿಂದ ಮೇಲಕ್ಕೆ ತೆಗೆದುಕೊಂಡು ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನು ನೀರಿನಲ್ಲಿ ಕಣ್ಮೆರೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ತುಂಗಾ ನದಿಗೆ ಹಾರಿದ ಪ್ರೇಮಿಗಳನ್ನು ಅನುಷಾ(19) ಹಾಗೂ ಸಂತೋಷ್(22) ಎಂದು ಗುರುತಿಸಲಾಗಿದ್ದು, ತಾಲ್ಲೂಕಿನ ಹಸೂಡಿ ಗ್ರಾಮದವರು ಎಂದು ಹೇಳಲಾಗಿದೆ.












Click it and Unblock the Notifications