ಶಿವಮೊಗ್ಗದಲ್ಲಿ ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ
ಶಿವಮೊಗ್ಗ, ಜನವರಿ 2: ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಗಾಂಜಾ ಮತ್ತಿನಲ್ಲಿದ್ದ ಇಬ್ಬರು ಯುವಕರು ಕುಂಸಿ ಪೊಲೀಸ್ ಠಾಣೆಯ ಪೇದೆ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಬಳಿ ಇಬ್ಬರು ಯುವಕರು ಹಣ ಕೇಳಿದ್ದಾರೆ, ಹಣ ನೀಡದ ಪೊಲೀಸ್ ಮೇಲೆ ಕೈ, ಕಾಲು, ಕುತ್ತಿಗೆಗೆ ಬ್ಲೇಡ್‌ನಿಂದ ಇರಿದು ಹಲ್ಲೆ ಮಾಡಿದ್ದಾರೆ.
ಜನರು ಅತ್ತ ಧಾವಿಸುತ್ತಿದ್ದಂತೆ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ, ಗಾಯಗೊಂಡಿದ್ದ ಮಂಜುನಾಥ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ ನದೀಂ ಹಾಗೂ ನಜೀರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಮಂಜುನಾಥ್ ಅವರು ಮೂಲತಃ ಬಾಗಲಕೋಟೆಯವರು ಕುಂಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications