• search
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೋಗ ಭೇಟಿ ಸಮಯ ಪರಿಷ್ಕರಣೆ, ಪ್ರವಾಸಿಗರ ಆಕ್ರೋಶ

By Gururaj
|

ಶಿವಮೊಗ್ಗ, ಜುಲೈ 10 : ವಿಶ್ವಪ್ರಸಿದ್ಧ ಜೋಗ ಜಲಪಾತಕ್ಕೆ ಭೇಟಿ ನೀಡುವ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಜೋಗ ಅಭಿವೃದ್ಧಿ ಪ್ರಾಧಿಕಾರದ ಈ ನಿರ್ಧಾರದಿಂದ ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ.

ಜೂನ್‌ನಿಂದ ಅಕ್ಟೋಬರ್ ತನಕ ಸಾವಿರಾರು ಪ್ರವಾಸಿಗರು ಜೋಗಕ್ಕೆ ಭೇಟಿ ನೀಡುವರು. ಜೋಗ ಮುಖ್ಯ ದ್ವಾರದ ಬಳಿ ಇರುವ ವ್ಯೂ ಪಾಯಿಂಟ್‌ನಿಂದ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ.

ಚಿತ್ರಗಳು : ಜೋಗಕ್ಕೆ ಜಿಲ್ಲಾಧಿಕಾರಿ ಭೇಟಿ, ಸೌಲಭ್ಯಗಳ ಪರಿಶೀಲನೆ

ಕೆಲವು ಪ್ರವಾಸಿಗರು ಜಲಪಾತದ ಆಳಕ್ಕೆ ಇಳಿಯುತ್ತಾರೆ. 1,400 ಮೆಟ್ಟಿಲುಗಳನ್ನು ಇಳಿದು ಜೋಗದ ಗುಂಡಿಯಲ್ಲಿ ನಿಂತು ಶರಾವತಿ ಧುಮ್ಮಿಕ್ಕುವ ಸುಂದರ ದೃಶ್ಯವನ್ನು ನೋಡುತ್ತಾರೆ. ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ಜೋಗದ ಗುಂಡಿಗೆ ಇಳಿಯಲು ಅವಕಾಶವಿತ್ತು.

Tourists upset after Jog Falls visiting timings change

ಆದರೆ, ಜೂನ್ 1ರಿಂದ ಜೋಗ ಅಭಿವೃದ್ಧಿ ಪ್ರಾಧಿಕಾರ ಸಮಯವನ್ನು ಬದಲಾವಣೆ ಮಾಡಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮಾತ್ರ ಜೋಗದ ಗುಂಡಿಗೆ ಇಳಿಯಲು ಅವಕಾಶ ನೀಡಿದೆ. ಈ ನಿರ್ಧಾರಕ್ಕೆ ಪ್ರವಾಸಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮುಂದೆ ಸಾಗದ ಕಡತ: ಸರ್ವ ಋತು ಜೋಗ ಜಲಪಾತ ಯೋಜನೆಗೆ ಹಿನ್ನಡೆ?

ಜೋಗ ಜಲಪಾತ ನೋಡಲು ಕೆಳಗೆ ಹೋದವರು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ದರಿಂದ, ಜಲಪಾತದ ಕೆಳಗೆ ಹೋಗಲು ಇದ್ದ ಸಮಯವನ್ನು ಅಭಿವೃದ್ಧಿ ಪ್ರಾಧಿಕಾರ ಕಡಿಮೆ ಮಾಡಿದೆ.

ಪ್ರವಾಸಿಗರ ಸುರಕ್ಷತೆಗಾಗಿ ಫಲಕಗಳನ್ನು ಅಳವಡಿಸಲಿ, ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಮಾಡಲಿ. ಆದರೆ, ಭೇಟಿ ನೀಡುವ ಸಮಯವನ್ನು ಪರಿಷ್ಕರಣೆ ಮಾಡಿರುವುದು ಸರಿಯಲ್ಲ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jog Management Authority change in timings for visiting the base of Jog Falls in Shivamogga district. Earlier, tourists were allowed to climb down from 8 a.m. to 6 p.m. Now tourists allowed to go down only between 9 a.m. and 4 p.m.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more