ಶಿವಮೊಗ್ಗ; ಕುಡಿದು ಅಮಾಯಕನ ಮೇಲೆ ಕಾನ್ ಸ್ಟೆಬಲ್ ಹಲ್ಲೆ
ಶಿವಮೊಗ್ಗ, ಆಗಸ್ಟ್ 24: ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ಮಧ್ಯಾಹ್ನವೇ ಮದ್ಯ ಸೇವಿಸಿ ಅಮಾಯಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕನೇ ಹೀಗೆ ರಾಕ್ಷಸನಂತೆ ವರ್ತಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯನಾಗಿರುವ ಕಾನ್ ಸ್ಟೆಬಲ್ ಪೂರ್ಣೇಶ್ ಈ ರೀತಿ ವರ್ತಿಸಿದ್ದು ಇದೇ ಮೊದಲಲ್ಲ. ಅನೇಕ ಬಾರಿ ಪೊಲೀಸ್ ಸಮವಸ್ತ್ರದಲ್ಲೇ ಕುಡಿದು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದ್ದಾನೆ.

ಈ ಸಂಬಂಧ ಎರಡು ಮೂರು ಬಾರಿ ಅಮಾನತ್ತಾಗಿದ್ದರೂ ಬುದ್ಧಿ ಕಲಿಯದ ಪೂರ್ಣೇಶ್ ಕುಡಿದು ರೌಡಿಯಂತೆ ವರ್ತಿಸುತ್ತಿರುವುದು ಪೊಲೀಸ್ ಇಲಾಖೆಗೇ ಅವಮಾನದಂತಿದೆ. ಡಿವೈಎಸ್ಪಿ ಸಂತೋಷ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಾದ ಕೆ. ಬಿ. ಶಾಂತಕುಮಾರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸಾರ್ವಜನಿಕ ಒತ್ತಾಯಿಸಿದ್ದಾರೆ.












Click it and Unblock the Notifications