ತೀರ್ಥಹಳ್ಳಿ ನಂದಿತಾ ಸಾವು : ಯಾರು ಏನು ಹೇಳಿದರು?

ತೀರ್ಥಹಳ್ಳಿ, ನ 4: ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ತೀರ್ಥಹಳ್ಳಿ ಶಾಲಾ ವಿದ್ಯಾರ್ಥಿನಿ ನಂದಿತಾ ಅನುಮಾನಾಸ್ಪದ ಸಾವಿನ ಬಗ್ಗೆ ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ ಎಸ್ ಯಡಿಯೂರಪ್ಪ ಮೊದಲ ಬಾರಿ ಹೇಳಿಕೆ ನೀಡಿದ್ದಾರೆ.

ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸಕ್ಕೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮುಂದಾಗಿದ್ದಾರೆ. ಇದ್ದಕ್ಕಿದ್ದ ಹಾಗೇ ಡೆತ್ ನೋಟ್ ಪ್ರಸ್ತಾವ ಬಂದಿದ್ದು ಹಲವು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಂದಿತಾ ಪೋಷಕರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳುತ್ತಿದ್ದಾಗ ಮಾಧ್ಯಮದವರನ್ನು ಉದ್ದೇಶಿಸಿ (ನ 4) ಮಾತನಾಡುತ್ತಿದ್ದ ಬಿಎಸ್ವೈ, ತಪ್ಪಿತಸ್ಥರನ್ನು ರಕ್ಷಿಸುವ ಕೆಲಸಕ್ಕೆ ಶಿಕ್ಷಣ ಸಚಿವರು ಮುಂದಾಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. (ತೀರ್ಥಹಳ್ಳಿ ನಂದಿತಾ ಕೊಲೆ ಪ್ರಕರಣ ಸಿಐಡಿ ತನಿಖೆಗೆ)

ರಾಜ್ಯ ಸರಕಾರದ ಮುತುವರ್ಜಿಯಲ್ಲಿ ನಡೆಯುವ ಯಾವುದೇ ತನಿಖೆಯಿಂದ ಸತ್ಯಾಂಶ ಹೊರಗೆ ಬರುತ್ತದೆ ಎನ್ನುವ ನಂಬಿಕೆ ನನಗಾಗಲಿ, ರಾಜ್ಯದ ಜನತೆಗಾಗಲಿ ಇಲ್ಲ. ಅಮಾಯಕ ಹೆಣ್ಣುಮಗು ಸಾವನ್ನಪ್ಪಿದೆ. ಈ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸುವಂತೆ ಯಡಿಯೂರಪ್ಪ ಒತ್ತಾಯಿಸಿದ್ದಾರೆ. (ನಂದಿತಾ ಸಾವು: ಸರ್ಕಾರಕ್ಕೆ ಆಯನೂರು ಪ್ರಶ್ನೆಗಳು)

ಸಾಮಾಜಿಕ ತಾಣದಲ್ಲಿ ನಂದಿತಾ ಅನುಮಾನಾಸ್ಪದ ಸಾವಿನ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಮೂಲಕ ಜನ ತಮ್ಮ ನೋವು, ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ರೈಲ್ವೆ ಸಚಿವ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಕಿಮ್ಮನೆ ರತ್ನಾಕರ ಪ್ರತಿಕ್ರಿಯೆ, ಕೆಲವೊಂದು ಟ್ವೀಟ್ ಸಂದೇಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಯಡಿಯೂರಪ್ಪ

ಯಡಿಯೂರಪ್ಪ

ನಂದಿತಾ ಪೋಷಕರು ಕೂಡಾ ಡೆತ್ ನೋಟ್ ಬಗ್ಗೆ ನಿರಾಕರಿಸಿದ್ದಾರೆ. ಹೀಗಿರುವಾಗ, ಇಷ್ಟು ದಿನ ಪ್ರಸ್ತಾವವೇ ಇಲ್ಲದ ಈ ಡೆತ್ ನೋಟ್ ಈಗ ಎಲ್ಲಿಂದ ಸೃಷ್ಟಿಯಾಯಿತು. ರಾಜ್ಯದ ಜನತೆಯ ಆಕ್ರೋಶಕ್ಕೆ ಗುರಿಯಾಗುವ ಮುನ್ನ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಯಡಿಯೂರಪ್ಪ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಹೇಳಿಕೆ

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರನ್ನು ತೀರ್ಥಹಳ್ಳಿಗೆ ಕಳುಹಿಸಿ ಪರಿಶೀಲಿಸಲು ಸಹ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ತೀರ್ಥಹಳ್ಳಿ ನಂದಿತಾ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂದೇಶವನ್ನು ಕರ್ನಾಟಕ ವಾರ್ತೆ ಟ್ವೀಟ್ ಮಾಡಿದೆ.

ಸದಾನಂದ ಗೌಡ

ಕೇಂದ್ರ ರೈಲ್ವೆ ಸಚಿವ ಡಿ ವಿ ಸದಾನಂದ ಗೌಡ ತೀರ್ಥಹಳ್ಳಿ ಘಟನೆಗೆ ಆಘಾತ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

ಕಿಮ್ಮನೆ ರತ್ನಾಕರ ಹೇಳಿಕೆ

ಕಿಮ್ಮನೆ ರತ್ನಾಕರ ಹೇಳಿಕೆ

ಮೊಮ್ಮಕ್ಕಳು ಇರುವವರು ಅಸೆಂಬ್ಲಿಯಲ್ಲಿ ಬ್ಲೂಫಿಲಂ ನೋಡುತ್ತಾರೆ. ಇಂತವರು ನನ್ನ ರಾಜೀನಾಮೆಯನ್ನು ಕೇಳುತ್ತಿರುವುದು ವಿಪರ್ಯಾಸ. ಪ್ರಕರಣದ ಬಗ್ಗೆ ನಮಗೂ ಬೇಸರವಿದೆ, ಅನಗತ್ಯವಾಗಿ ಇದನ್ನು ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವುದು ಬೇಡ. ಸಿಎಂ ಜೊತೆ ಮಾತುಕತೆ ನಡೆಸಿ ನಂದಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವ ಕಿಮ್ಮನೆ ಬಿಜೆಪಿ ನಾಯಕರಿಗೆ ಖಾರವಾಗಿ ಚಾಟಿ ಬೀಸಿದ್ದಾರೆ.

ಜಗದೀಶ್ ಶೆಟ್ಟರ್ ನೋವು

ಜಗದೀಶ್ ಶೆಟ್ಟರ್ ನೋವು

ನಂದಿತಾ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‍ಐಟಿ) ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಘಟನೆ ನಡೆದ ಬಳಿಕ ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಎಸ್‍ಐಟಿ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸ ಬೇಕು. ಈ ಪ್ರಕರಣವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ - ಜಗದೀಶ್ ಶೆಟ್ಟರ್

ರಾಜ್ಯ ಇಮೇಜಿಗೆ ಕಾಂಗ್ರೆಸ್ಸಿನಿಂದ ಧಕ್ಕೆ

ರಾಜ್ಯದ ಇಮೇಜಿಗೆ ಕಾಂಗ್ರೆಸ್ಸಿನಿಂದ ಧಕ್ಕೆಯಾಗಿದೆ ಎಂದು ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ.

ಡಾ. ಶ್ರೀಕಾಂತ್ ಟ್ವೀಟ್

ಕರ್ನಾಟಕದಲ್ಲಿ ಶಾಲಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದರೂ ತಿಳಿದಿರುವ ತಪ್ಪಿತಸ್ಥರನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.

ವಿಕ್ರಂ ಸಾವಿತ್ರಿಮನೆ ಟ್ವೀಟ್

ಹದಿಮೂರು ವರ್ಷದ ಬಾಲೆಯ ಮೇಲಿನ ರೇಪ್ ಮತ್ತು ಕೊಲೆ ಕೇಸನ್ನು ಸಿಬಿಐಗೆ ವಹಿಸಿ.

ವಿದು ಟ್ವೀಟ್ ಸಂದೇಶ

ನಂದಿತಾಗೆ ನ್ಯಾಯ ಸಿಗುವುದೇ ಇಲ್ಲ. ಕಾನೂನಿನ ಕರಾಳ ಮುಖ

ಮತ್ತೊಂದು ಟ್ವೀಟ್ ಸಂದೇಶ

ವಾಣಿಜ್ಯೋದ್ಯಮಿಯ ಮಗನನ್ನು ರಕ್ಷಿಸಲು ಯಾವುದೇ ಸಮುದಾಯದ ಕ್ರಿಮಿನಲ್ ಗಳನ್ನು ರಕ್ಷಿಸುವ ನಮ್ಮ ದೇಶದ ಕಾನೂನು

ಶೇಷ ಎನ್ನುವವರ ಟ್ವೀಟ್ ಸಂದೇಶ

ಅಲ್ಪಸಂಖ್ಯಾತರನ್ನು ರಕ್ಷಿಸಲು ಕರ್ನಾಟಕ ಪೊಲೀಸರ ಕ್ರಮವನ್ನು ಶೇಷ ಟ್ವೀಟ್ ಮೂಲಕ ಖಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+