ಮೂಲ ಬಿಜೆಪಿ, ವಲಸೆ ಬಿಜೆಪಿ... ಹೀಗೆಲ್ಲಾ ಏನೂ ಇಲ್ಲ; ಕೆ.ಎಸ್ ಈಶ್ವರಪ್ಪ
ಮೂಲ ಬಿಜೆಪಿ, ವಲಸೆ ಬಿಜೆಪಿ ಬೇಧಾಭಾವವಿಲ್ಲವೆಂದ ಈಶ್ವರಪ್ಪ | ESHWARAPPA | BJP | CONGRESS | JDS
ಶಿವಮೊಗ್ಗ, ಡಿಸೆಂಬರ್ 14: "ಸಂಘಟನೆಯಿಂದಾಗಿ ಉಪ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗಳಿಸಿದ್ದೇವೆ. ಮೂಲ ಬಿಜೆಪಿ ಹಾಗೂ ವಲಸೆ ಬಿಜೆಪಿ ಎಂಬ ಭಿನ್ನಾಭಿಪ್ರಾಯ ನಮ್ಮ ಪಕ್ಷದಲ್ಲಿಲ್ಲ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ವಿಧಾನಸಭಾ ಚುನಾವಣೆ ನಡೆದಾಗ ಜನರು ಬಿಜೆಪಿಗೆ ಪೂರ್ಣ ಬಹುಮತ ನೀಡಲಿಲ್ಲ. ಆದರೆ, ಬಹುಮತಕ್ಕೆ ಬಹು ಸಮೀಪ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳಾದವು. ರಾಜ್ಯ ರಾಜಕಾರಣ ಹೇಗೆಲ್ಲಾ ಬದಲಾಗುತ್ತೋ ಗೊತ್ತಾಗಲ್ಲ" ಎಂದರು.
ಅರೆ, ರಾಜಕಾರಣ ಅಲ್ಲ ಸ್ವಾಮಿ, ಇದು 'ಹೃದಯ'ಗಳ ವಿಷಯ!
ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಕಡಿಮೆ ಬಂದ ಕ್ಷೇತ್ರಗಳಿಗಾಗಿ ಅರ್ಧದಷ್ಟು ಕ್ಯಾಬಿನೆಟ್ ಸ್ಥಾನವನ್ನು ಮೀಸಲಿಡಬೇಕಾಯಿತು. ಬಿಜೆಪಿಯನ್ನು ಬೆಂಬಲಿಸಿ ಬಂದವರು ಇಂದು ಗೆಲುವು ಸಾಧಿಸಿದ್ದಾರೆ. ಅಸಮಾಧಾನಕ್ಕೂ ಬಿಜೆಪಿಗೂ ಸಂಬಂಧವಿಲ್ಲ" ಎಂದರು.