ಶಿವಮೊಗ್ಗದಲ್ಲಿ ಪೊಲೀಸರನ್ನೇ ಹೆದರಿಸಿದ ಈ ಅತಿಥಿ!
ಶಿವಮೊಗ್ಗ, ಸೆಪ್ಟೆಂಬರ್ 14: ಜನರು ಪೊಲೀಸರು ಎಂದರೆ ಭಯಪಡುತ್ತಾರೆ. ಆದರೆ ಪೊಲೀಸರೇ ಹೆದರಿದ ಘಟನೆ ಇಂದು ಶಿವಮೊಗ್ಗದಲ್ಲಿ ನಡೆಯಿತು.
ಶಿವಮೊಗ್ಗ ನಗರದ ಜಯನಗರ ಪೋಲಿಸ್ ಠಾಣೆಗೆ ಇಂದು ಅಪರೂಪದ ಅತಿಥಿ ಆಗಮಿಸಿದ್ದರು. ಅವರನ್ನು ನೋಡಿ ಪೊಲೀಸರು ಹೆದರಿ ಹೌಹಾರಿದರು, ಟೇಬಲ್ ಏರಿ ನಿಂತಿದ್ದರು. ಆ ಅತಿಥಿ ಬೇರಾರೂ ಅಲ್ಲ, ಹಾವು.
ಇಂದು ಹಾವೊಂದು ಪೊಲೀಸ್ ಠಾಣೆಗೆ ನುಗ್ಗಿದ್ದು, ಅದನ್ನು ಕಂಡ ಪೊಲೀಸರು ಹೆದರಿ ಕಂಗಾಲಾಗಿದ್ದಾರೆ. ತಕ್ಷಣ ಉರುಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದ ಕಿರಣ್, ಕೊನೆಗೂ ಹಾವನ್ನು ಕಂಡುಹಿಡಿದಿದ್ದಾರೆ.

ಜೆರಾಕ್ಸ್ ಮಿಷನ್ ಪಕ್ಕದಲ್ಲಿ ಅವಿತಿದ್ದ ಹಾವನ್ನು ಸ್ನೇಕ್ ಕಿರಣ್ ಸೆರೆ ಹಿಡಿದರು. ಹಾವು ಕಿರಣ್ ಕೈಗೆ ಹೋಗುತ್ತಿದ್ದಂತೆ ಪೊಲೀಸರೂ ನಿಟ್ಟುಸಿರುಬಿಟ್ಟರು. ಠಾಣೆಯಲ್ಲಿ ಇಲಿಗಳು ಇರುವುದರಿಂದ ಆಹಾರಕ್ಕಾಗಿ ಹಾವು ಪೊಲೀಸ್ ಠಾಣೆ ಒಳಗೆ ಬಂದಿರಬಹುದು ಎಂದು ಪೋಲಿಸರಿಗೆ ಸ್ನೇಕ್ ಕಿರಣ್ ಮಾಹಿತಿ ನೀಡಿದರು.












Click it and Unblock the Notifications