ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೊಸ ರೈಲು, ಎಲ್ಲಿಂದ ಎಲ್ಲಿಗೆ ಪಯಣ?
ಶಿವಮೊಗ್ಗ ಜುಲೈ 19: ನೈಋತ್ಯ ರೈಲ್ವೆ ವತಿಯಿಂದ ಶಿವಮೊಗ್ಗ ಜಿಲ್ಲೆಗೆ ವಿಶೇಷ ರೈಲು ಘೋಷಣೆ ಮಾಡಿದೆ. ಜುಲೈ 25ರಿಂದ ಈ ರೈಲು ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 16221/16222 ತಾಳಗುಪ್ಪ - ಮೈಸೂರು - ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ. ಈ ಎಕ್ಸ್ ಪ್ರೆಸ್ ರೈಲು ಪ್ರತಿದಿನ ಎರಡು ನಗರಗಳ ನಡುವೆ ಸಂಚರಿಸಲಿದೆ. ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ರಾತ್ರಿ 11.30ಕ್ಕೆ ತಾಳಗುಪ್ಪ ತಲುಪಲಿದೆ. ಮತ್ತೆ ತಾಳಗುಪ್ಪದಿಂದ ಬೆಳಿಗ್ಗೆ 6 .10ಕ್ಕೆ ಹೊರಡುವ ರೈಲು ಮೈಸೂರಿಗೆ ಮಧ್ಯಾಹ್ನ 3:30ಕ್ಕೆ ಬಂದು ತಲುಪಲಿದೆ.
ಮೈಸೂರಿನಿಂದ - ಬೆಳಗುಳ - ಸಾಗರಕಟ್ಟೆ - ಕೃಷ್ಣರಾಜನಗರ - ಹೊಸ ಅಗ್ರಹಾರ - ಅಕ್ಕಿ ಹೆಬ್ಬಾಳು ಬೀರಹಳ್ಳಿ - ಮಂಡಗೆರೆ - ಹೊಳೆ ನರಸಿಪುರಕ್ಕೆ ಮಧ್ಯಾಹ್ನ 3.50ಕ್ಕೆ ತಲುಪಲಿದೆ. ಮಾವಿನಕರೆ ಮೂಲಕ ಮದ್ಯಾಹ್ನ 4.28ಕ್ಕೆ ಹಾಸನ ತಲುಪಲಿದೆ. ಬಾಗೇಶಪುರ - ಹಬನಘಟ್ಟ ಮೂಲಕ ಸಂಜೆ 6 ಗಂಟೆಗೆ ಅರಸಿಕರೆ ತಲುಪಲಿದೆ. ಬಾಣವರ -ದೇವನೂರು - ಬಳ್ಳೆಕರೆ - ಕಡೂರು ಬೀರೂರಿಗೆ ಸಂಜೆ 7 ಗಂಟೆಗೆ ತಲುಪಲಿದೆ.

ಸಾವಿಪುರ - ಕಾರಣಹಳ್ಳಿ - ತರೀಕೆರೆ (ರಾತ್ರಿ 7.39) ಮೊಸರಹಳ್ಳಿ - ಭದ್ರಾವತಿ (ರಾತ್ರಿ 8.03ಕ್ಕೆ) - ಶಿವಮೊಗ್ಗ ವಿದ್ಯಾನಗರ (8.19) - ಶಿವಮೊಗ್ಗ ರೈಲ್ವೆ ನಿಲ್ದಾಣದ (ರಾತ್ರಿ 8.45) - ಕೊನಗವಳ್ಳಿ ಹಾರನಹಳ್ಳಿ - ಕುಂಸಿ (ರಾತ್ರಿ 9.39ಕ್ಕೆ) - ಅರಸಾಳು (ರಾತ್ರಿ 9.54ಕ್ಕೆ) - ಕೆಂಚನಾಳು - ಆನಂದಪುರ (ರಾತ್ರಿ 10.14ಕ್ಕೆ) - ಅಡ್ಡೇರಿ - ಸಾಗರ ಜಂಬಗಾರು (ರಾತ್ರಿ 10.44ಕ್ಕೆ) ತಾಳಗುಪ್ಪ ರಾತ್ರಿ 11.30ಕ್ಕೆ ತಲುಪಲಿದೆ.
ಮತ್ತೆ ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಡುವ ರೈಲು ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ. ಸಾಗರ ಜಂಬಾರು (ಬೆಳಗ್ಗೆ 6.34ಕ್ಕೆ ತಲುಪಲಿದೆ) - ಅಡ್ಡೇರಿ - ಆನಂದಪುರ (ಬೆಳಗ್ಗೆ 7.06ಕ್ಕೆ) - ಕೆಂಚನಾಳು - ಅರಸಾಳು ಕುಂಸಿ - ಹಾರನಹಳ್ಳಿ - ಕೊನಗವಳ್ಳಿ - ಶಿವಮೊಗ್ಗ ರೈಲ್ವೆ ನಿಲ್ದಾಣ (8.15ಕ್ಕೆ ತಲುಪಲಿದೆ)
ಶಿವಮೊಗ್ಗ ವಿದ್ಯಾನಗರ (ಬೆಳಗ್ಗೆ 8.25ಕ್ಕೆ) - ಭದ್ರಾವತಿ (ಬೆಳಗ್ಗೆ 8.43ಕ್ಕೆ), ಮೊಸರಹಳ್ಳಿ - ತರೀಕರೆ (ಬೆಳಗ್ಗೆ 9.13ಕ್ಕೆ) - ಕಾರಣಹಳ್ಳಿ - ಶಿವಪುರ - ಬೀರೂರು (10.03ಕ್ಕೆ) - ಕಡೂರು (10.15ಕ್ಕೆ) - ಬಳ್ಳೆಕರೆ - ದೇವನೂರು - ಬಾಣವರ - ಅರಸೀಕರೆ (11.15ಕ್ಕೆ) - ಹಬನಘಟ್ಟ - ಬಾಗೇಶಪುರ - ಹಾಸನ (ಮಧ್ಯಾಹ್ನ 12.28ಕ್ಕೆ) - ಮಾವಿನಕೆರೆ - ಹೊಳೆ ನರಸೀಪುರ (ಮಧ್ಯಾಹ್ನ 1.08ಕ್ಕೆ) - ಮಂಡಗೆರೆ - ಬೀರಹಳ್ಳಿ - ಅಕ್ಕಿಹೆಬ್ಬಾಳು - ಹೊಸ ಅಗ್ರಹಾರ ಕೃಷ್ಣರಾಜನಗರ - ಸಾಗರಕಟ್ಟೆ - ಬೆಳಗುಳ - ಮೈಸೂರು ಮದ್ಯಾಹ್ನ 3.35ಕ್ಕೆ ತಲುಪಲಿದೆ.
ಈ ವಿಶೇಷ ರೈಲಿನಲ್ಲಿ 12 ಬೋಗಿಗಳಿದ್ದು, ರೈಲಿನಲ್ಲಿ ಹತ್ತು ಸೆಕೆಂಡ್ ಕ್ಲಾಸ್ ಜನರಲ್ ಕೋಚ್ ಬೋಗಿ ಇರಲಿದೆ. ಎರಡು ಸಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಇರಲಿದೆ.












Click it and Unblock the Notifications