ಶಿವಮೊಗ್ಗ: ಮನೆಯಲ್ಲಿ ಅಗ್ನಿ ಅವಘಡ, ಮಗನನ್ನು ರಕ್ಷಿಸಲು ಹೋದ ಖ್ಯಾತ ಉದ್ಯಮಿ ಸಾವು

ಶಿವಮೊಗ್ಗ, ಜನವರಿ, 08: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಶಿವಮೊಗ್ಗದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಸಿಲುಕಿಕೊಂಡಿದ್ದ ಯುವ ಉದ್ಯಮಿ ದಟ್ಟ ಹೊಗೆಯಿಂದಾಗಿ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಂಭಾಗ ಇರುವ ಭೂಪಾಳಂ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೆನೆಯಲ್ಲಿ ಸಿಲುಕಿಕೊಂಡಿದ್ದ ಯುವ ಉದ್ಯಮಿ ಭೂಪಾಳಂ ಶರತ್ ಅವರು ಅಗ್ನಿಯ ಜ್ವಾಲೆಯಿಂದ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಉದ್ಯಮಿ ಶರತ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಘಟನೆಯ ಸಂಪೂರ್ಣ ವಿವರ

ರಾತ್ರಿ ಭೂಪಾಳಂ ನಿವಸದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಜೊತೆಗೆ ಮನೆಯಲ್ಲಿ ದಟ್ಟ ಹೊಗೆಯೂ ಕೂಡ ಆವರಿಸಿಕೊಂಡಿತ್ತು. ಮನೆ ಒಳಗಿದ್ದ ಭೂಪಾಳಂ ಶಶಿಧರ್ ಸೇರಿದಂತೆ ನಾಲ್ವರು ಹೊರಗೆ ಬಂದಿದ್ದರು. ಆದರೆ ಉದ್ಯಮಿ ಶರತ್ ಮಾತ್ರ ಒಳಗೆ ಸಿಲುಕಿ ಅಸ್ವಸ್ಥರಾಗಿದ್ದರು ಎಂದು ತಿಳಿದುಬಂದಿದೆ. ನಂತರ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬೆಂಕಿಯ ಜ್ವಾಲೆಯ ನಡುವೆ ಸಿಲುಕಿಕೊಂಡಿದ್ದ ಉದ್ಯಮಿ ಶರತ್ ಭೂಪಾಳಂ ಮತ್ತು ಅವರ ಮಗನ ರಕ್ಷಣೆ ಮಾಡಿದ್ದಾರೆ. ನಂತರ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗ್ಗೆ ಶರತ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Short circuit: Famous Businessman death in shivamogga

ಗಾಳಿಯಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಸಾವು

ಇತ್ತೀಚೆಗಷ್ಟೇ ಹೊಸ ವರ್ಷದ ಪಾರ್ಟಿ ವೇಳೆ ಗುಂಡು ತಗುಲಿ ಯುವಕನೊಬ್ಬ ಗಾಯಗೊಂಡಿದ್ದ. ನಂತರ ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿತ್ತು. ವಿದ್ಯಾನಗರದಲ್ಲಿರುವ ಮಂಜುನಾಥ ಓಲೇಕರ್ ಎಂಬುವವರ ಮನೆಯಲ್ಲಿ ಹೊಸವರ್ಷದ ಪಾರ್ಟಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿತ್ತು.

Short circuit: Famous Businessman death in shivamogga

ಓಲೇಕರ್‌ ಅವರು ತಮ್ಮ ಕುಟುಂಬದವರೊಂದಿಗೆ ಹೊಸ ವರ್ಷಾಚರಣೆ ಮಾಡುತ್ತಿದ್ದು, 12 ಗಂಟೆಗೆ ಅವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಂಜುನಾಥ್‌ ಓಲೇಕರ್ ಹಾರಿಸಿದ ಗುಂಡು ಮಿಸ್ ಫೈರ್ ಆಗಿ ಪಾರ್ಟಿ ಮಾಡುತ್ತಿದ್ದ ವಿನಯ್ ಎಂಬುವವರಿಗೆ ತಗುಲಿದೆ. ಗುಂಡು ತಗುಲಿದ ಕಾರಣ ಯುವಕ ವಿನಯ್‌ ಗಂಭೀರ ಗಾಯಗೊಂಡಿದ್ದು, ಆತನನ್ನು ಕೂಡಲೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನಿಗೆ ಗುಂಡು ತಗುಲುತ್ತಿದ್ದಂತೆ ಮಂಜುನಾಥ್‌ ಓಲೇಕರ್ ಅವರು ಆತಂಕಕ್ಕೀಡಾಗಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ನಂತರ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+