ದೇಗುಲದ ಹುಂಡಿ ಜತೆಗೆ ಸಿಸಿಟಿವಿ ಕದ್ದೊಯ್ದ ಕಳ್ಳರು!
ಶಿವಮೊಗ್ಗ, ಸೆ. 24: ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿರುವ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನದಲ್ಲಿ ಕಳ್ಳರ ತಮ್ಮ ಕೈಚಳಕ ತೋರಿಸಿದ್ದಾರೆ.
ದೇವಳದ ಬೀಗ ಮುರಿದಿರುವ ಕಳ್ಳರು, ದೇಗುಲದ ದೊಡ್ಡ ಹುಂಡಿಯನ್ನು ಹೊತ್ತೊಯ್ದಿದ್ದಾರೆ.

ಹುಂಡಿಯಲ್ಲಿದ್ದ ಸುಮಾರು 80 ಸಾವಿರ ರೂ ಇತ್ತು ಎಂದು ತಿಳಿದು ಬಂದಿದೆ. ಹುಂಡಿಯಲ್ಲಿರುವ ಹಣದ ಜತೆಗೆ, ದೇವಸ್ಥಾನದಲ್ಲಿದ್ದ ಸಿಸಿಟಿವಿ, ಹಾರ್ಟ್ ಡಿಸ್ಕ್ ಕೂಡಾ ತೆಗೆದುಕೊಂಡು ಹೋಗಿದ್ದಾರೆ.

ಭಾನುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ,ದೇವಸ್ಥಾನದ ಸಮೀಪದ ಕೆರೆಯಲ್ಲಿ ಹುಂಡಿ ಪತ್ತೆಯಾಗಿದೆ. ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.
****
ಶಿವಮೊಗ್ಗ ನಗರದ ಮಲವಗೊಪ್ಪ ಬಳಿಯ ಮಲೆನಾಡು ಸಿರಿ ಡಾಬ ಬಳಿ ಭಾನುವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.

ಲಾರಿಗೆ ಬೈಕ್ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು 24 ವರ್ಷ ಸಾವನ್ನಪ್ಪಿದ ಯುವಕ ಯಶವಂತ್ ಎಂದು ಗುರುತಿಸಲಾಗಿದ್ದು, ಮಲವಗೊಪ್ಪದ ನಿವಾಸಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications