ತವರು ಜಿಲ್ಲೆಯಲ್ಲೇ ಬಿಎಸ್ವೈಗೆ ಹಿನ್ನಡೆ: ಕ್ರಾಸ್ ವೋಟಿಂಗ್ ನಲ್ಲಿ ಜೆಡಿಎಸ್ ಜಯಭೇರಿ
ಶಿವಮೊಗ್ಗ, ಜುಲೈ 1: ರಾಜ್ಯ ಮಟ್ಟದಲ್ಲಿ ಆಪರೇಶನ್ ಕಮಲ ನಡೆಸಿ ಯಶಸ್ವಿಯಾಗಿದ್ದ ಬಿಜೆಪಿಗೆ, ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲೇ ಹಿನ್ನಡೆಯಾಗಿದೆ.
Recommended Video
Nepal PM KP Sharma Oli , ಪ್ರಧಾನಿಗೆ ಭಾರತದ ವಿರುದ್ಧ ಮಾತನಾಡಿದ್ದಕ್ಕೆ ಕಂಟಕ | Oneindia Kannada
ಎಪಿಎಂಸಿ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬೇಕಾದಷ್ಟು ಸಂಖ್ಯಾಬಲವಿದ್ದರೂ, ಪಕ್ಷದ ಒಬ್ಬ ಸದಸ್ಯ ಕ್ರಾಸ್ ವೋಟಿಂಗ್ ಮಾಡಿದ್ದರಿಂದ, ಜೆಡಿಎಸ್ ಚುನಾವಣೆ ಗೆದ್ದಿದೆ.
ಈ ಬಾರಿ ಅಧಿಕಾರಕ್ಕೇರಲೇ ಬೇಕೆಂದು ಮೂವರನ್ನು ಬಿಜೆಪಿ, ಎಪಿಎಂಸಿಗೆ ನಾಮ ನಿರ್ದೇಶನ ಮಾಡಿತ್ತು. ಆದಾಗ್ಯೂ, ತಮ್ಮದೇ ಪಕ್ಷದ ಸದಸ್ಯರೊಬ್ಬರು ಕೈಕೊಟ್ಟಿದ್ದರಿಂದ, ಚುನಾವಣೆಯಲ್ಲಿ ಬಿಜೆಪಿ ಸೋಲುವಂತಾಗಿದೆ.

ಎಪಿಎಂಸಿಯಲ್ಲಿ ಬಿಜೆಪಿ ಒಂಬತ್ತು ಮತ್ತು ಜೆಡಿಎಸ್ ಎಂಟು ಸದಸ್ಯರನ್ನು ಹೊಂದಿತ್ತು. ಜೆಡಿಎಸ್ ಪಕ್ಷದ ದುಗ್ಗಪ್ಪ ಗೌಡ ಅಧ್ಯಕ್ಷರಾಗಿ, ಬಾಬಣ್ಣ ಉಪಾಧ್ಯಕ್ಷರಾಗಿ ಆಯ್ಯೆಯಾಗಿದ್ದಾರೆ.
ಮೈಸೂರು ಎಪಿಎಂಸಿ ಚುನಾವಣೆಯಲ್ಲೂ ಬಿಜೆಪಿಯ ಇಬ್ಬರು ಸದಸ್ಯರು, ಕಾಂಗ್ರೆಸ್ಸಿಗೆ ಕ್ರಾಸ್ ವೋಟಿಂಗ್ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.












Click it and Unblock the Notifications