Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣದ ಮತ್ತೊಂದು ಮಹತ್ವದ ಅಪ್ಡೇಟ್
Shivamogga Airport: ಶಿವಮೊಗ್ಗದ ಸೋಗಾನೆ ಬಳಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಇದರ ಉದ್ಘಟನೆಯನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದ್ದರು. ಇನ್ನು ಇದೀಗ ಈ ವಿಮಾನ ನಿಲ್ದಾಣದಿಂದ ಕಾರ್ಗೊ ವಿಮಾನಗಳ ಹಾರಾಟಕ್ಕೆ ಅಗತ್ಯ ಇರುವ ಸೌಲಭ್ಯ ಕಲ್ಪಿಸಲು 50,00,00,000 ರೂಪಾಯಿ ಬಿಡುಗಡೆ ಆಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾನಾಡಿದ ಸಂಸದ ರಾಘವೇಂದ್ರ ಅವರು, ಇನ್ನು ಒಂದೂವರೆ ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಲಭ್ಯ ಆಗಲಿದೆ. ವಿಸಿಬಲಿಟಿ ಸಮಸ್ಯೆ ಈಗ ಪರಿಹಾರ ಆಗಿದೆ. ಇನ್ನು ಇದೀಗ ಕಾರ್ಗೊ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆ ಮತ್ತು ಇತರೆ ವಸ್ತುಗಳನ್ನು ರಫ್ತು ಮಾಡಲು ತುಂಬಾ ಸಹಕಾರಿಯಾಗಲಿದೆ. ಪೂರಕ ವ್ಯವಸ್ಥೆಗೆ 50,00,00,000 ರೂಪಾಯಿ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದೊಂದು ವರ್ಷದಲ್ಲಿ 8,500ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಓಡಾಡಿದ್ದಾರೆ. ಈ ಅವಧಿಯಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ 7,500 ಪ್ರವಾಸಿಗರು ಮಾತ್ರ ಓಡಾಟ ನಡೆಸಿದ್ದಾರೆ. ಆದ್ದರಿಂದ ಮೈಸೂರಿಗಿಂತಲೂ ಹೆಚ್ಚು ಪ್ರವಾಸಿಗರು ನಮ್ಮ ವಿಮಾನ ನಿಲ್ದಾಣದವನ್ನು ಬಳಕೆ ಮಾಡಿದ್ದಾರೆ. ಆದ್ದರಿಂದ ಈ ವಿಮಾನ ನಿಲ್ದಾಣ ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣ ಆಗಲಿದೆ ಎಂದು ಹೇಳಿದರು.
ಮುಂಬೈ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಲಭಿಸಿಲ್ಲ. ಆದ್ದರಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ನವದೆಹಲಿ, ಅಹಮದಾಬಾದ್, ಪುಣೆ ಮಾರ್ಗದಲ್ಲಿ ವಿಮಾನಯಾನ ಆರಂಭಕ್ಕೆ ಅನುಮತಿ ಕೇಳಿದೆ. ಈ ಬಗ್ಗೆ ವಿಮಾನಯಾನ ಸಚಿವರಿಗೆ ಪತ್ರ ಬರೆದು ಶೀಘ್ರದಲ್ಲೇ ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು 2023 ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು.ಇನ್ನು ಈ ವಿಮಾನ ನಿಲ್ದಾಣವನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕನಿಷ್ಠ ವೆಚ್ಚದಲ್ಲಿ ನಿರ್ಮಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಇಲ್ಲಿ ವಿಮಾನಗಳು ರಾತ್ರಿ ಇಳಿಯುವಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ.
500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ 3.50 ಕಿಲೋ ಮೀಟರ್ ರನ್ ವೇ, ಕಾಂಪೌಂಡ್, ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಸ್ತೆಗಳು, ನಿಲ್ದಾಣಕ್ಕೆ ಒಂದು ಕಿಲೋ ಮೀಟರ್ ಸಂಪರ್ಕ ರಸ್ತೆ, ವಿಮಾನಗಳು ನಿಲುಗಡೆ ಆಗುವಂತಹ ಏಪ್ರಾನ್, 100 ಕೆ.ವಿ. ಸಾಮಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ, ಉಪ ವಿದ್ಯುತ್ ಘಟಕ, ಕೊಳಚೆ ನೀರು ಶುದ್ಧೀಕರಣ ಘಟಕ ಕೂಡ ಇದೆ.












Click it and Unblock the Notifications