• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಸ್‌ವೈ ಕನಸು ನನಸು; ಶಿವಮೊಗ್ಗ ಏರ್ ಪೋರ್ಟ್ ಕೆಲಸ ಆರಂಭ

|

ಶಿವಮೊಗ್ಗ, ಜೂನ್ 14 : ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಬೇಕು ಎಂಬ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು ನನಸಾಗಿದೆ. ನಿಲ್ದಾಣದ ಕಾಮಗಾರಿಗಳು ಆರಂಭವಾಗಿದ್ದು, ಮೂರು ತಿಂಗಳಿನಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

   ಯಡಿಯೂರಪ್ಪನನ್ನ ಅಲುಗಾಡಿಸಲು ಯಾರಿಂದಲೂ ಆಗಲ್ಲ | State Government is safe dont worry : M P Renukacharya

   ಬೃಹತ್ ಗಾತ್ರದ ಯಂತ್ರಗಳು ವಿಮಾನ ನಿಲ್ದಾಣದ ಕಾಮಗಾರಿಯನ್ನು ಆರಂಭಿಸಿವೆ. ನಿಲ್ದಾಣದ ಸುತ್ತಲಿನ ಕಾಪೌಂಡ್ ನಿರ್ಮಾಣ, ರನ್‌ ವೇ, ಕಟ್ಟಡ ನಿರ್ಮಾಣ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ನೂರಾರು ಕಾರ್ಮಿಕರು ಮಳೆಯ ನಡುವೆಯೇ ಕೆಲಸದಲ್ಲಿ ನಿರತರಾಗಿದ್ದಾರೆ.

   ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ!

   ವಿಮಾನ ನಿಲ್ದಾಣದ ಕಾಮಗಾರಿಗಾಗಿ 200 ಕೋಟಿ ಅನುದಾನ ಬಿಡುಗಡೆಯಾಗಿದೆ. 120 ಕೋಟಿ ವೆಚ್ಚದಲ್ಲಿ ಗೋಡೆ, ರನ್ ವೇ ನಿರ್ಮಾಣ ನಡೆಯುತ್ತಿದೆ. ವಿಮಾನ ನಿಲ್ದಾಣದ ರನ್ ವೇ ಒಟ್ಟು 1900 ಮೀಟರ್ ಉದ್ದ ಇರಲಿದೆ. ನ್ಯಾಷನಲ್ ಕನ್‌ಸ್ಟ್ರಕ್ಷನ್ ಕಂಪನಿ ಕಾಮಗಾರಿಯ ನಿರ್ವಹಣೆ ನೋಡಿಕೊಳ್ಳುತ್ತಿದೆ.

   ಶಿವಮೊಗ್ಗ; ರೈಲ್ವೆ ಯೋಜನೆ ಸರ್ವೆ ಕಾರ್ಯ ಆರಂಭ, ಎಲ್ಲಿರಲಿದೆ ನಿಲ್ದಾಣ?

   ಯಡಿಯೂರಪ್ಪ ಮೊದಲು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ವಿಮಾನ ನಿಲ್ದಾಣದ ಯೋಜನೆ ರೂಪಗೊಂಡು ಕಾಮಗಾರಿ ಆರಂಭವಾಗಿತ್ತು. ಆದರೆ, ಟೆಂಡರ್ ಪಡೆದಿದ್ದ ಕಂಪನಿ ಕೆಲವು ಹಗರಣದಲ್ಲಿ ಸಿಲುಕಿದ್ದರಿಂದ ಟೆಂಡರ್ ರದ್ದುಗೊಂಡಿತು.

   ಇನ್ನೂ 6 ವಿಮಾನ ನಿಲ್ದಾಣಗಳು ಖಾಸಗೀಕರಣ

   ನಂತರ ಮತ್ತೊಂದು ಕಂಪನಿ ಟೆಂಡರ್ ಪಡೆಯಿತು. ಕೆಲಸ ಆರಂಭಿಸಲು ಮುಂದೆ ಬಂದಿತು. ಆದರೆ, ತಾಂತ್ರಿಕ ಕಾರಣಗಳಿಂದ ತೊಂದರೆ ಎದುರಾಗಿ ಕಾಮಗಾರಿ ಸ್ಥಗಿತವಾಯಿತು. ಈ ಯಡಿಯೂರಪ್ಪ ಮತ್ತು ಸಂಸದ ಬಿ. ವೈ. ರಾಘವೇಂದ್ರ ಅವರು ವಿಮಾನ ನಿಲ್ದಾಣದ ಕಾಮಗಾರಿಗೆ ಮತ್ತೆ ಚುರುಕು ಮುಟ್ಟಿಸಿದ್ದಾರೆ.

   ಈ ಮೊದಲು ವಿಮಾನ ನಿಲ್ದಾಣದ ರನ್‌ ವೇ 1,200 ಮೀಟರ್ ಉದ್ದ ಇರಲಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ನಡೆದ ವಿವಿಧ ಹಂತದ ಸಭೆಯಲ್ಲಿ ರನ್‌ ವೇಯನ್ನು 1,900 ಮೀಟರ್‌ಗೆ ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೆ ಅನುಮೋದನೆ ಸಹ ಸಿಕ್ಕಿ ಕಾಮಗಾರಿ ಆರಂಭವಾಗಿದೆ.

   ಎರಡನೇ ಹಂತದಲ್ಲಿ ಟೆಕ್ನಿಕಲ್ ಕಾಮಗಾರಿ ಆರಂಭವಾಗಲಿದೆ. ಶೀಘ್ರವೇ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ವಿಮಾನದಲ್ಲಿ ಹಾರಾಟ ನಡೆಸುವ ಶಿವಮೊಗ್ಗ ಜನರ ಕನಸು ನನಸಾಗಲಿದೆ.

   English summary
   Basic construction works for the Shivamogga airport began. 1,900 meter run way will build in the airport. 200 crore fund released for the project.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X