ಶಿವಮೊಗ್ಗ: ಮಲೆನಾಡಿನಲ್ಲಿ ವಿಶಿಷ್ಟವಾದ ಪ್ರಕೃತಿ ವಂದನಾ ಕಾರ್ಯಕ್ರಮ
ಶಿವಮೊಗ್ಗ, ಸೆಪ್ಟೆಂಬರ್ 1: ಮಲೆನಾಡಿನ, ಮಳೆಕಾಡಿನ ಮರಗಳ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ವಿಶಿಷ್ಟ ಕಾರ್ಯಕ್ರಮವನ್ನು ಆಗುಂಬೆ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ವಿಕಾಸ ಟ್ರಸ್ಟ್ ಶಿವಮೊಗ್ಗ, ಪರ್ಯಾವರಣ ಸಂರಕ್ಷಣ ಗತಿವಿಧಿ ಘಟಕ ಆಗುಂಬೆ ಹೋಬಳಿ, ಅರಣ್ಯ ಇಲಾಖೆ, ಆಗುಂಬೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಗುಂಬೆ ಹೋಬಳಿಯ ಮನಸ್ಸುಗಾರ್ ನಲ್ಲಿ ಪ್ರಕೃತಿ ವಂದನಾ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳಾದ ಉಮಾ, ಇತಿಹಾಸದ ಪುಟಗಳನ್ನು ಗಮನಿಸಿದಂತೆ ಪ್ರಕೃತಿಯು ನಾಗರಿಕತೆಯ ಆರಂಭದಿಂದಲೂ ಪ್ರತಿಯೊಂದು ವೃಕ್ಷವು ದೈವಿ ಸ್ವರೂಪವೆಂದು ಆರಾಧಿಸಿ ನಂಬಲಾಗುತ್ತದೆ ಎಂದರು.

ಗಿಡ, ಮರ, ಜಲ, ಭೂಮಿಯ ಸಂರಕ್ಷಣೆಗಾಗಿ, ಪರಿಸರ ಸಂರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆ ಹಾಗೂ ಪ್ರಾಚೀನ ಮೌಲ್ಯವನ್ನು ಸಮಾಜಕ್ಕೆ ಸ್ಮರಿಸುವ ದಿಶೆಯಲ್ಲಿ ಈ ಚಿಂತನೆ ಮಾಡಿ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ಕಾಡನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹತ್ವದ ಮಹತ್ವದ ಬಗ್ಗೆ ತಿಳಿಸಿದರು. ಇದಕ್ಕೂ ಮೊದಲು ಗಿಡಗಳಿಗೆ ಪವಿತ್ರವಾದ ಗಂಗಾಜಲ ಪ್ರೋಕ್ಷಣೆ ಮಾಡಿ, ಅರಿಶಿನ ಹಚ್ಚಿ, ಪುಷ್ಟ ನಮನ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಕಾಸ್ ಟ್ರಸ್ಟ್ ನ ಪಾಂಡುರಂಗ ಪರಾಂಡೆ, ಹಣ್ಣಿನ ಮರಗಳ ವಿನಾಶದಿಂದ ಪ್ರಾಣಿ, ಪಕ್ಷಿಗಳು ರೈತರ ಹೊಲ, ಗದ್ದೆಗಳಿಗೆ ದಾಳಿ ಇಡುತ್ತಿರುವ ಬಗ್ಗೆ ಮನವರಿಕೆಯನ್ನು ಮಾಡಿದರು. ಹೊನ್ನೇತಾಳು ಸಹಕಾರ ಸಂಘದ ಅಧ್ಯಕ್ಷರಾದ ರವೀಶ್ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಹೆಚ್ಚಿನ ವಿಶ್ವಾಸ ಬೆಳೆಯಬೇಕು ಎಂದು ತಿಳಿಸಿದರು.
ಹಣ್ಣಿನಮರ, ನೈಸರ್ಗಿಕ ಅರಣ್ಯ ಬೆಳಸಿದ ಟೀಕಪ್ಪ ಗೌಡ ಹಾಗೂ ಅವರ ಧರ್ಮಪತ್ನಿ ಹೇಮಾವತಿ, ಹಾಗೂ ಉಮಾರವರನ್ನು ಸನ್ಮಾನಿಸಲಾಯಿತು. ನಿತ್ಯಾನಂದ ಅಣ್ಣುಗೋಡು, ಅಂಬರೀಶ್ ಮಳಲಿ, ನೇತ್ರಾವತಿ ಚಂದ್ರಹಾಸ್ ಹಾಗೂ ಇತರೆ ಪ್ರಮುಖರು, ಬೆಟ್ಲಂಗಿ ಹಾಗೂ ಮನಸ್ಸುಗಾರ್ ಗ್ರಾಮಸ್ಥರು ಇದ್ದರು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications