• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲೆನಾಡಿನ ಭಾಗಗಳಲ್ಲಿ ಮಳೆ; ಮತ್ತೆ ತುಂಗಾ ನದಿ ಮಂಟಪ ಮುಳುಗಡೆ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 21: ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ತುಂಗಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರದ ಮಂಟಪ ಮತ್ತೊಮ್ಮೆ ಮುಳುಗಡೆಯಾಗಿದೆ.

ನಿನ್ನೆ ರಾತ್ರಿಯಿಂದ ಜಲಾಶಯದ ಹೊರ ಹರಿವು ಹೆಚ್ಚಳವಾಗಿದ್ದು, ತುಂಗಾ ನದಿ ಮೈದುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಶಿವಮೊಗ್ಗ: ಭದ್ರಾ ಜಲಾಶಯದಿಂದ 47,500 ಕ್ಯೂಸೆಕ್ಸ್ ನೀರು ಹೊರಕ್ಕೆ..!

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 266.90 ಮಿ.ಮೀ ಮಳೆಯಾಗಿದ್ದು, ಸರಾಸರಿ 38.13 ಮಿ.ಮೀ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ ಇದ್ದು, ಇದುವರೆಗೆ ಸರಾಸರಿ 291.65 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 16.40, ಭದ್ರಾವತಿ 3.60, ತೀರ್ಥಹಳ್ಳಿ 97.40, ಸಾಗರ 45.40, ಶಿಕಾರಿಪುರ 9.00, ಸೊರಬ 27.10 ಹಾಗೂ ಹೊಸನಗರದಲ್ಲಿ 68.00 ಮಿ.ಮೀ. ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ; ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ

ಲಿಂಗನಮಕ್ಕಿ: 1819 (ಗರಿಷ್ಠ), 1811.05 (ಇಂದಿನ ಮಟ್ಟ), 34733.00 (ಒಳಹರಿವು), 857.03 (ಹೊರಹರಿವು).

ಭದ್ರಾ: 186 (ಗರಿಷ್ಠ), 185.10 (ಇಂದಿನ ಮಟ್ಟ), 46292.00 (ಒಳಹರಿವು), 59313.00 (ಹೊರಹರಿವು). ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 65278.00 (ಒಳಹರಿವು), 65278.00 (ಹೊರಹರಿವು).

ಮಾಣಿ: 595 (ಎಂಎಸ್‌ಎಲ್‌ಗಳಲ್ಲಿ), 587.88 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 10003 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).

ಪಿಕ್ ‌ಅಪ್: 563.88 (ಎಂಎಸ್‌ಎಲ್‌ಗಳಲ್ಲಿ), 562.90 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 2882 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ ಗಳಲ್ಲಿ).

ಚಕ್ರ: 580.57 (ಎಂ.ಎಸ್.ಎಲ್‌ಗಳಲ್ಲಿ), 571.82 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 2187.00 (ಒಳಹರಿವು), 702 (ಹೊರಹರಿವು ಕ್ಯೂಸೆಕ್ ಳಲ್ಲಿ).

ಸಾವೆಹಕ್ಲು: 583.70 (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), 575.90 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 3658.00 (ಒಳಹರಿವು), 882.00 (ಹೊರಹರಿವು ಕ್ಯೂಸೆಕ್ ಳಲ್ಲಿ)

ಕಾಳಜಿ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಜನ: ಶಿವಮೊಗ್ಗ ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ನೂರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ 32 ಕುಟುಂಬಗಳ 100ಕ್ಕೂ ಅಧಿಕ ಜನರಿಗೆ ಆಶ್ರಯ ನೀಡಲಾಗಿದೆ. ಅವರಿಗೆಲ್ಲಾ ಭದ್ರಾವತಿಯ ಒಕ್ಕಲಿಗ ಸಮುದಾಯದಲ್ಲಿ ಊಟ ಸುರಕ್ಷಿತ ವಸತಿ ಕಲ್ಪಿಸಲಾಗಿದೆ.

ಶಿವಮೊಗ್ಗದಲ್ಲಿ ಕಳೆದ 24 ಗಂಟೆಗಳ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಭದ್ರಾವತಿಯ ಕವಲಗುಂದಿಯಲ್ಲಿ 30 ಮನೆಗಳು ಜಲಾವೃತಗೊಂಡಿದೆ. ಭದ್ರಾವತಿಯ ಹೊಸ ಸೇತುವೆ ಕಳೆದ ರಾತ್ರಿಯಿಂದ ಮುಳುಗಡೆಯಾಗಿದೆ. ಮಲೆನಾಡಿನಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿರುವ ಕಾರಣ ಜಲಾಶಯಗಳ ಹಿನ್ನೀರಿನ ಪ್ರಮಾಣದಲ್ಲೂ ಸಾಕಷ್ಟು ಏರಿಕೆ ಕಂಡಿದೆ.

English summary
Malenadu region is recieving heavy rain since few days. Water is being releasing from Tunga reservoir and once again korpalayya chatra submerged in river water,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X