ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುದ್ದಲಿ ಪೂಜೆಗೆ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪಗೆ ಧಿಕ್ಕಾರದ ಸ್ವಾಗತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 6 : ಯುಜಿಡಿ ಟ್ಯಾಂಕ್ ಕಾಮಗಾರಿ ಗುದ್ದಲಿ ಪೂಜೆಗೆ ತೆರಳಿದ್ದ ಕೆ.ಎಸ್.ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಭುವನೇಶ್ವರಿ ಬಡಾವಣೆಯ ಜನರು ಯುಜಿಡಿ ಟ್ಯಾಂಕ್ ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಡಿ 7.8 ಕೋಟಿ ವೆಚ್ಚದಲ್ಲಿ ಯುಜಿಡಿ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಭಾನುವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ತೆರಳಿದ್ದರು. ಈ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆಶಿವಮೊಗ್ಗ : ಇಂಟರ್‌ಸಿಟಿ ರೈಲು ವೇಳಾಪಟ್ಟಿ, ದರ ಬದಲಾವಣೆ

 Protest against UGD tank set up at Bhuvaneshwari Nagar

ಜನವಸತಿ ಪ್ರದೇಶದಲ್ಲಿ ಯುಜಿಡಿ ಟ್ಯಾಂಕ್ ನಿರ್ಮಿಸಲು ಸ್ಥಳಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯುಜಿಡಿ ಟ್ಯಾಂಕ್ ನಿರ್ಮಾಣ ವಿರೋಧಿಸಿ ಸ್ಥಳೀಯರು ಮನವಿಯನ್ನೂ ಸಲ್ಲಿಸಿದ್ದಾರೆ. ಆದರೆ, ಕೆ.ಎಸ್.ಈಶ್ವರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ: ನೆಲಕ್ಕುರುಳಿದ ಕುವೆಂಪು ರಸ್ತೆಯ ನೇರಳೆ ಮರ, ಪ್ರತಿಭಟನೆಶಿವಮೊಗ್ಗ: ನೆಲಕ್ಕುರುಳಿದ ಕುವೆಂಪು ರಸ್ತೆಯ ನೇರಳೆ ಮರ, ಪ್ರತಿಭಟನೆ

ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು, ಧಿಕ್ಕಾರವನ್ನೂ ಕೂಗಿದರೂ ಈಶ್ವರಪ್ಪ ಅವರು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸ್ಥಳದಿಂದ ತೆರಳಿದರು.

ಕೆ.ಎಸ್.ಈಶ್ವರಪ್ಪ ವಿರೋಧ : ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುತ್ತಿರುವುದಕ್ಕೆ ಕೆ.ಎಸ್.ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. 'ತನಿಖೆ ನಡೆಸಿದ್ದ ಸಿಬಿಐ ಪ್ರಕರಣವನ್ನು ಕೈ ಬಿಟ್ಟಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ವಿರೋಧವಿಲ್ಲ. ಆದರೆ, ಸರ್ಕಾರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ವಿರೋಧವಿದೆ' ಎಂದು ಈಶ್ವರಪ್ಪ ಹೇಳಿದರು.

English summary
Shivamogga Bhuvaneshwari Nagar residents opposed UGD tank project. People protested against BJP leader K.S.Eshwarappa who come for project ground breaking ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X