ಶಿವಮೊಗ್ಗದಲ್ಲಿ ಕಾರಿನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ; ಕೊನೆಗೂ ಸಿಕ್ಕಿಬಿದ್ದ ಆರೋಪಿ
ಶಿವಮೊಗ್ಗ, ಜನವರಿ 10: ಶಿವಮೊಗ್ಗ ನಗರದ ಹಳೇ ರೈಲು ನಿಲ್ದಾಣದ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 3ರಂದು ವಿದ್ಯಾನಗರ ರೈಲ್ವೇ ನಿಲ್ದಾಣದ ಬಳಿ ಓಮ್ನಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ದೊರೆತಿತ್ತು. ಹತ್ತು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿ ಕಾರಿನಲ್ಲಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಮುಖಕ್ಕೆ ಆಸಿಡ್ ಹಾಕಿ ಶವಕ್ಕೆ ಪ್ಲಾಸ್ಟಿಕ್ ಸುತ್ತಲಾಗಿತ್ತು. ಕೊಲೆಯಾದ ಮಹಿಳೆ ಊರುಗಡೂರು ಗ್ರಾಮದ ತಹಸೀನಾ ಎಂಬುದಾಗಿ ತಿಳಿದುಬಂದಿತ್ತು.

ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೋಟೆ ಠಾಣೆ ಪೊಲೀಸರು ಕೊಲೆ ಆರೋಪಿ ಸೋಮಿನಕೊಪ್ಪದ ಸೈಯದ್ ಅಬು ಸಲೇಹ ಎಂಬುವನನ್ನು ಬಂಧಿಸಿದ್ದಾರೆ. ಮಹಿಳೆಯ ಶವ ಪತ್ತೆಯಾದ ಕಾರು ಈತನದ್ದೇ ಎಂದು ತಿಳಿದು ಬಂದಿದ್ದು, ಕೊಲೆಯಾದ ಮಹಿಳೆ ತಹಸೀನಾಳ ಜೊತೆ ಈತ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.












Click it and Unblock the Notifications